ಸೋಮವಾರಪೇಟೆ, ಸೆ. 9: ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ, ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತರಾದವರನ್ನು ಸ್ಥಳೀಯ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಿಕ್ಷಕರ ದಿನಾಚರಣಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು ನಿವೃತ್ತರನ್ನು ಸನ್ಮಾನಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕಿಯಾಗಿದ್ದ ಹೊಸತೋಟದ ಎಂ.ಎಂ. ಕಾವೇರಮ್ಮ, ಅಧೀಕ್ಷಕರಾಗಿದ್ದ ಕನಕಮ್ಮ, ಸಹ ಶಿಕ್ಷಕರುಗಳಾದ ಹಾನಗಲ್ಲು ಶೆಟ್ಟಳ್ಳಿ ಶಾಲೆಯ ಬಿ.ಎ. ಗಂಗೆ, ಮಡಿಕೇರಿಯ ಎಂ.ಎಂ. ಶಶಿಕುಮಾರಿ, ಸಿದ್ದಲಿಂಗಪುರದ ಎನ್.ಪಿ. ಮರಿನಾ, ಕುಶಾಲನಗರದ ಎ.ಆರ್. ಚಂದ್ರಾವತಿ, ಕುಶಾಲನಗರದ ಕೆ.ಜೆ. ಗೋಪಾಲ್ ಅವರುಗಳನ್ನು ಸನ್ಮಾನಿಸಲಾಯಿತು. ಗುಡ್ಡೆಹೊಸೂರು ಗ್ರಾಮದ ಬಿ.ಎಸ್. ಲೋಕೇಶ್, ಕುಶಾಲನಗರದ ಬಿ.ವಿ. ವೈಜಯಂತಿ ಮಾಲಾ, ಸುಂಟಿಕೊಪ್ಪದ ಸಿಸಿಲಿಯಾ ಮಸ್ಕರೇನಸ್, ಹಳೆಕೋಟೆಯ ಬಿ.ಎನ್. ಬೋಜಮ್ಮ, ಯಡವನಾಡು ಟಿ.ಎಸ್. ಕೆಂಚಮ್ಮ, ಪ್ರೌಢಶಾಲಾ ದೈಹಿಕ ಶಿಕ್ಷಕ ತಲ್ತಾರೆಶೆಟ್ಟಳ್ಳಿಯ ರಾಜಪ್ಪ, ಡಯಟ್‍ನ ಪ್ರಥಮ ದರ್ಜೆ ಸಹಾಯಕ ತಾಕೇರಿಯ ಎಂ.ಕೆ. ಕೃಷ್ಣಪ್ಪ, ಪ್ರೌಢಶಾಲಾ ದ್ವಿತೀಯ ದರ್ಜೆ ಸಹಾಯಕಿ ಕೂಡಿಗೆಯ ಕೆ.ಕೆ. ಪದ್ಮಾವತಿ, ಪ್ರಯೋಗ ಶಾಲಾ ಸಹಾಯಕ ತೋಳೂರುಶೆಟ್ಟಳ್ಳಿಯ ಹೆಚ್.ಆರ್. ಮೋಹನ್‍ದಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವಾಹನ ಚಾಲಕ ಎಂ.ಪಿ. ರಾಮು, ಡಿ ದರ್ಜೆ ನೌಕರರುಗಳಾದ ಕುಳ್ಳೇಗೌಡ ಹಾಗೂ ದಾಮೋದರ ಅವರುಗಳನ್ನು ಗಣ್ಯರು ಸನ್ಮಾನಿಸಿದರು.

ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ತಾ.ಪಂ. ಸದಸ್ಯೆ ತಂಗಮ್ಮ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ವನಜ, ತಹಶೀಲ್ದಾರ್ ಮಹೇಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಲ್ಲೇಸ್ವಾಮಿ, ನಾಗರಾಜಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.