ನಾಪೆÇೀಕ್ಲು, ಸೆ. 9: ವಿದ್ಯಾರ್ಥಿ ನಾಯಕನಾಗುವವನು ಉತ್ತಮ ಗುಣ ನಡತೆಯನ್ನು ಬೆಳೆಸಿಕೊಂಡು ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಬೇಕೆಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ನಾಪೆÇೀಕ್ಲು ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಕೊಡಗಿನಲ್ಲಿ ಇಂದು ಮೂರು ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮವಾದ ಪದವಿ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸರಕಾರ ಕಾರ್ಯಕ್ರಮ ಗಳನ್ನು ಕೈಗೊಂಡಿದೆ ಎಂದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳುವಂತೆ ಕಿವಿ ಮಾತು ಹೇಳಿದರು. ಪದವಿ ವಿದ್ಯಾರ್ಥಿಗಳು ತಮ್ಮ ಕಾಲ ಮೇಲೆ ತಾವು ನಿಲ್ಲುವ ಸಮಯ ಇದಾಗಿದ್ದು, ಉತ್ತಮವಾಗಿ ಅಂಕ ಗಳಿಕೆಯೊಂದಿಗೆ ಎಲ್ಲಾ ಚಟುವಟಿಕೆ ಯಲ್ಲಿ ಪಾಲ್ಗೊಂಡು ಮುಂದಿನ ತಮ್ಮ ಭವಿಷ್ಯದ ಜೀವನವನ್ನು ರೂಪಿಸಿ ಕೊಳ್ಳಬೇಕೆಂದು ಹೇಳಿದರು.

ಎನ್.ಎಸ್.ಎಸ್. ಘಟಕವನ್ನು ಉದ್ಘಾಟಿಸಿದ ಕೊಡಗು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ನಮ್ಮ ದೇಶವನ್ನು ಇಂಡಿಯಾ ಎಂದು ಸಂಬೋಧಿಸು ವದು ಸರಿಯಲ್ಲ. ಇದು ಪರ ದೇಶದ ಕಳ್ಳನೊಬ್ಬ ಹೀಯಳಿಸಿದ ಪರಿ ಎಂದ ಅವರು, ನಮ್ಮ ದೇಶ ಭಾರತ ನಾವು ಎಂದಿಗೂ ಭಾರತೀಯರೇ ಹೊರತು ಇಂಡಿಯನ್ ಅಲ್ಲ ಎಂದರು. ಭಾರತ ಎಂದರೆ ಉತ್ತಮ ಅರ್ಥ ಇದೆ ಎಂದ ಅವರು ಭಾ ಅಂದರೆ ಜನರಲ್ಲಿರುವ ಭಾವ, ರ ಎಂದರೆ ರಾಗ, ತ ಎಂದರೆ ತಾಳ, ಭಾವ ರಾಗ ತಾಳ ಇದು ನಮ್ಮ ಭಾರತ ಎಂದರು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮರುಳಿ ಕರುಂಬಮ್ಮಯ್ಯ ಮಾತನಾಡಿ ವಿದ್ಯಾರ್ಥಿಗಳು ಮನೆಯಿಂದ ಕಾಲೇಜಿಗೆ ಹೊರಡುವಾಗ ಇರುವ ಉತ್ಸಾಹ, ಕಾಲೇಜಿಗೆ ಬಂದ ಮೇಲೆ ಇರುವದಿಲ್ಲ. ಉತ್ತಮ ಗುಣ ನಡತೆಯಿಂದ ಇದ್ದರೆ ಮಾತ್ರ ಎಲ್ಲಾವು ಸಾಧ್ಯ ಎಂದರು ಕಾಲೇಜಿನ ಕಿಟಕಿ ಬಾಗಿಲಿನ್ನು ಓಡೆದಿರುವದು ನೋಡಿದರೆ ಬೇಸರವಾಗುತ್ತದೆ ಎಂದ ಅವರು, ಇಂದು ಕಾಲೇಜಿನ ಅಭಿವೃದ್ಧಿಗಾಗಿ ನಾಯಕನ ಮತ್ತು ಪದಾಧಿಕಾರಿಗಳ ಕಾರ್ಯ ಮುಖ್ಯ ವಾಗಿದ್ದು ಮುಂದೆ ಈ ರೀತಿಯಾಗ ದಂತೆ ಎಚ್ಚರ ವಹಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ, ಕಾವೇರಿ ಪ್ರಕಾಶ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಎನ್.ಎಸ್.ಎಸ್. ಅಧಿಕಾರಿ ಕನ್ನಕೆ ಇದ್ದರು ಉಪನ್ಯಾಸಕ ನಂದೇಶ್ ಸ್ವಾಗತಿಸಿ ವಿದ್ಯಾರ್ಥಿನಿ ಗಾಯಿತ್ರಿ ನಿರೂಪಿಸಿದರು.