ವೀರಾಜಪೇಟೆ, ಸೆ. 8: ಸಾsssssssಮಾಜಿಕ ಚಿಂತನೆಯೊಂದಿಗೆ ಸಮಾಜದ ಶೋಷಿತ ಸಮುದಾಯ ಗಳನ್ನು ಒಂದು ಗೂಡಿಸಲು ಶ್ರಮಿಸಿದ ಸಂತ ಬ್ರಹ್ಮಶ್ರೀ ನಾರಾಯಣ ಗುರು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೊಪ್ಪಯ್ಯ ಹೇಳಿದರು.
ನಾರಾಯಣ ಗುರು ಧರ್ಮ ಪರಿಪಾಲನಾÀ ಯೋಗಂ ವೀರಾಜಪೇಟೆ ಶಾಖೆ ಹಾಗೂ ವೀರಾಜಪೇಟೆ ಬಿಲ್ಲವ ಸೇವಾ ಸಮಾಜ ಇವರುಗಳ ಆಶ್ರಯದಲ್ಲಿ ಮೀನುಪೇಟೆಯ ಮುತ್ತಪ್ಪ ಕಲಾ ಮಂಟಪದ ಸಭಾಂಗಣದಲ್ಲಿ ನಡೆದ 163 ನಾರಾಯಣ ಗುರು ಜಯಂತಿ ಅಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಬೋಪಯ್ಯ ಅವರು ಸಮಾಜದಲ್ಲಿ ಮೇಲರಿಮೆ, ಕೀಳರಿಮೆ ಎಂದು ವಿಂಗಡಣೆ ಮಾಡಲಾಗಿರುವ, ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ತನ್ನ ಜೀವನವನ್ನೇ ಮುಡುಪಾಗಿಟ್ಟವರು ಸಂತ ನಾರಾಯಣ ಗುರುಗಳು. ಆಧ್ಯಾತ್ಮಿಕ ಬಲದ ಚಿಂತನೆಯಿಂದ ದೇಶದ ಉದ್ದಗಲಕ್ಕೂ ಸಂಚರಿಸಿ ಅನೇಕ ಸ್ಥಳಗಳಲ್ಲಿ ಜನ ಸಾಮಾನ್ಯರನ್ನು ಸಂಘಟಿಸಿ ಜಾತಿ ಮತ್ತು ಮತಗಳಲ್ಲಿ ಸಮಾನತೆ ಸಾಮರಸ್ಯವಿರಬೇಕು ಎಂದು ಸಮಾಜಕ್ಕೆ ಸಾರಿ ಒಂದೇ ಜಾತಿ, ಒಂದೇ ಮತವೆಂದು ಪ್ರತಿಪಾದನೆ ಮಾಡಿದ ನಾರಾಯಣ ಗುರು ಅವರ ತತ್ವ ಆದರ್ಶದಂತೆ ಉತ್ತಮ ಸಮಾಜವನ್ನು ರೂಪುಗೊಳ್ಳುವಂತೆ ಮಾಡುವದು ನಮ್ಮೆಲ್ಲರ ಕರ್ತವ್ಯ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಮತ್ತು ತಾಲೂಕು ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ ಗಣೇಶ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ದೇಶದಲ್ಲಿ ಹಲವಾರು ರೀತಿಯಲ್ಲಿ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ ಗಳು ನಡೆಯುತ್ತಿರುವದು ಕಳವಳಕಾರಿ ಯಾಗಿದೆ. ನಾಗರಿಕರಲ್ಲಿ ಲಿಂಗ ಸಮಾನತೆ ಜಾತಿ ಮತ್ತು ಮತ ಸಮಾನತೆಗಳ ಬಗ್ಗೆ ಜಾಗೃತವಾದರೆ ದೌರ್ಜನ್ಯ ಪ್ರಕರಣಗಳು ಮರುಕಳಿಸು ವದಿಲ್ಲ 18 ನೇ ಶತಮಾನದಲ್ಲಿ ಹುಟ್ಟಿದ ಸಂತರಾದ ನಾರಾಯಣ ಗುರು ಅವರು ಲೋಕ ಸಂಚಾರದಲ್ಲಿ ತೊಡಗಿ ಸಮಾಜದಲ್ಲಿರುವ ಜಾತಿ ಮತ ಭೇದಗಳ ಪ್ರಬೇದಗಳನ್ನು ಹೋಗಲಾಡಿಸಲು ಜನರಲ್ಲಿ ಸಮಾನತೆ ಜ್ಞಾನದ ಅರಿವನ್ನು ಲೋಕಕ್ಕೆ ತಿಳಿಸಿ ಕೊಟ್ಟಿರುತ್ತಾರೆ. ಅವರು ಸಮಾಜಕ್ಕೆ ನೀಡಿದ ಸಂದೇಶಗಳು ಮತ್ತು ಉಪದೇಶ ಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡರೆ ಸುಸಂಸ್ಕøತ ಸಮಾಜವು ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಬಿಜೆಪಿಯ ಜಿಲ್ಲಾ ಸಮಿತಿ ಪ್ರದಾನ ಕಾರ್ಯದರ್ಶಿ ಲೊಕೇಶ್ ಕುಮಾರ್ ಮಾತನಾಡಿ ಲಿಂಗ, ಧರ್ಮ, ಜಾತಿಯತೆ ಎಲ್ಲವೂ ಒಂದೇ ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ್ದಾರೆ. ಶೋಷಿತ ವರ್ಗಗಳ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ ಮಹಾನ್ ಸಂತರಾಗಿ ಮನುಜ ಕುಲದ ಹೃದಯಲ್ಲಿ ರಾರಾಜಿಸಿರುತ್ತಾರೆ. ಎಂದು ಹೇಳಿದರು.
ಪಾಲಿಬೆಟ್ಟ ಸರ್ಕಾರಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಪಿ.ಅರ್. ಶಿವದಾಸ್ ನಾರಾಯಣ ಗುರುಗಳ ಜೀವನ ಚರಿತ್ರೆ ಹಾಗೂ ಅವರು ಸಮಾಜಕ್ಕೆ ನೀಡಿದ ಸಂದೇಶಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಬಿಲ್ಲವ ಸಮಾಜ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಎಸ್.ಎನ್.ಡಿ.ಪಿ ನಗರ ಶಾಖೆಯ ಅಧ್ಯಕ್ಷ ಟಿ.ಎ. ನಾರಾಯಣ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷÀ ಇ.ಸಿ ಜೀವನ್, ಉದ್ಯಮಿ ಗಳಾದ ಬಿ.ಅರ್.ಬೋಜಪ್ಪ, ಗುತ್ತಿಗೆದಾರ ಅಚ್ಚುಕುಟ್ಟಿ ಉಪಸ್ಥಿತರಿದ್ದರು
ಸಮಾರಂಭಕ್ಕೂ ಮುನ್ನ ಅಂಬಟ್ಟಿ ಗ್ರಾಮದ ಬಿಲ್ಲವ ಸಮಾಜದ ಗುರು ಮಂದಿgದಲ್ಲಿÀ ಗುರುಪೂಜೆ ನಡೆಯಿತು ನಂತರ ಇಲ್ಲಿನ ತೆಲುಗರ ಬೀದಿಯಿಂದ ಮೀನುಪೇಟೆಯ ಮುತ್ತಪ್ಪ ದೇವಾಲಯದವರೆಗೆ ತೆÀರೆದ ವಾಹನದಲ್ಲಿ ಮೆರವಣೆಗೆ ನಡೆಯಿತು. ಮೆರವಣಿಗೆಯಲ್ಲಿ ಬಿಲ್ಲವ ಸಮಾಜ ಮತ್ತು ಎಸ್.ಎನ್.ಡಿ.ಪಿ ಯ ಸದಸ್ಯರುಗಳು ಭಾಗವಹಿಸದ್ದರು.