ಸೋಮವಾರಪೇಟೆ,ಸೆ.8: ಲೋಕೋಪಯೋಗಿ ಇಲಾಖೆ ಮೂಲಕ ಕಿ.ಮೀ.ಗೆ ಒಂದು ಕೋಟಿಯಂತೆ ಕೈಗೊಳ್ಳಲಾಗಿರುವ ಕೋವರ್‍ಕೊಲ್ಲಿ-ಕೂಡಿಗೆ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಯಾಗಿದ್ದು, ಈ ಬಗ್ಗೆ ತಾ.ಪಂ.ನಿಂದ ರಾಜ್ಯ ಲೋಕೋಪಯೋಗಿ ಸಚಿವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಲು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸೋಮವಾರಪೇಟೆ ತಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸಂದರ್ಭ ವಿಷಯ ಪ್ರಸ್ತಾಪಿಸಿದ ಸದಸ್ಯ ತಾಕೇರಿ ಸತೀಶ್, ಕೋವರ್‍ಕೊಲ್ಲಿ-ಕೂಡಿಗೆ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಗುತ್ತಿಗೆದಾರರ ವಿರುದ್ಧ ಶಾಸಕರು, ಸಚಿವರು ಸೇರಿದಂತೆ ಯಾರೂ ಮಾತಾಡುತ್ತಿಲ್ಲ. ಈ ಬಗ್ಗೆ ಚಕಾರ ಎತ್ತದೇ ಇರುವದರಿಂದ ಎಲ್ಲರನ್ನೂ ಸಂಶಯದಿಂದ ನೋಡುವಂತಾಗಿದೆ ಎಂದರು.

ಈ ಹಿನ್ನೆಲೆ ತಾ.ಪಂ.ನಿಂದ ನಿರ್ಣಯ ಕೈಗೊಂಡು ಸೋಮವಾರ ಪೇಟೆಯಲ್ಲಿರುವ ಇಲಾಖಾ ಕಚೇರಿಗೆ ಮುತ್ತಿಗೆ ಹಾಕೋಣ.

(ಮೊದಲ ಪುಟದಿಂದ) ಒಟ್ಟು 2.77 ಕೋಟಿ ನಷ್ಟ ವರದಿಯನ್ನು ಇಲಾಖೆ ಸಲ್ಲಿಸಿದೆ. ಸೆಸ್ಕ್ ಇಲಾಖೆಯಲ್ಲೂ ವಿದ್ಯುತ್ ಕಂಬ, ಟ್ರಾನ್ಸ್‍ಫಾರ್ಮರ್ ಜಖಂ ಮತ್ತಿತರ 25 ಪ್ರಕರಣಗಳಲ್ಲಿ ರೂ. 1.42 ಕೋಟಿ ನಷ್ಟವುಂಟಾಗಿದ್ದು, ವರದಿ ತಯಾರಿಸಲಾಗಿದೆ.

62 ಮನೆ ಜಖಂ

ಜಿಲ್ಲೆಯ ಮೂರು ತಾಲೂಕುಗಳಲ್ಲಿ ಒಟ್ಟು 62 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಮಡಿಕೇರಿ ತಾಲೂಕಿನಲ್ಲಿ 7, ಸೋಮವಾರಪೇಟೆ ತಾಲೂಕಿನಲ್ಲಿ 35 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 20 ಮನೆಗಳು ಸೇರಿದ್ದು, ಒಟ್ಟು ರೂ. 33.15 ಲಕ್ಷ ನಷ್ಟದ ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರೂ. 4 ಲಕ್ಷದಷ್ಟು ಪರಿಹಾರ ವಿತರಿಸಲಾಗಿದೆ.

ಎರಡು ಪ್ರಾಣ ಹಾನಿ

ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಎರಡು ಮಾನವ ಪ್ರಾಣ ಹಾನಿ ಸಂಭವಿಸಿದ್ದು, ರೂ. 8 ಲಕ್ಷ ಪರಿಹಾರ ವಿತರಿಸಲಾಗಿದೆ.

ಒಟ್ಟು ನಾಲ್ಕು ಜಾನುವಾರುಗಳು ಸಾವಿಗೀಡಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೂ. 1.20ಲಕ್ಷ ನಷ್ಟ ಸಂಭವಿಸಿದೆ. ಈ ಪ್ರಕರಣದಲ್ಲಿ ಈಗಾಗಲೇ ರೂ. 55 ಸಾವಿರ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಡಳಿತದ ಮಾಹಿತಿಯಂತೆ ತಿಳಿದು ಬಂದಿದೆ. ಮಳೆಯಿಂದಾಗಿ ಆಗಿರುವ ನಷ್ಟಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಇನ್ನಷ್ಟೆ ಪರಿಹಾರದ ಅನುದಾನ ಬರಬೇಕಿದೆ. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿಯಿರುವ ಹಿನ್ನೆಲೆಯಲ್ಲಿ ನಿರೀಕ್ಷಿತ ಅನುದಾನ ಸಿಗುವ ಸಾಧ್ಯತೆಯೂ ಕಡಿಮೆ ಇದೆ ಎನ್ನಲಾಗುತ್ತಿದೆ.