ವೀರಾಜಪೇಟೆ, ಸೆ. 8: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ತಾ. 10ರಂದು ವೀರಾಜಪೇಟೆ ಆರ್ಜಿ ಗ್ರಾಮದ ಬಲ್ಲಚಂಡ ರಂಜನ್ ಬಿದ್ದಪ್ಪ ಅವರ ಗದ್ದೆಯಲ್ಲಿ ಪೂರ್ವಾಹ್ನ 10 ಗಂಟೆಗೆ ಜಿಲ್ಲೆಯ ಪತ್ರಕರ್ತರಿಗೆ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸ ಲಾಗಿದೆ ಎಂದು ಕೆಸರು ಗದ್ದೆ ಕ್ರೀಡಾಕೂಟದ ಸಂಚಾಲಕ ಪಳೆಯಂಡ ಪಾರ್ಥಚಿಣ್ಣಪ್ಪ ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಅವರು ಪತ್ರಕರ್ತರಿಗೆ ಹ್ಯಾಂಡ್‍ಬಾಲ್, ಹಗ್ಗಜಗ್ಗಾಟ ಹಾಗೂ ಓಟದ ಸ್ಪರ್ಧೆ ನಡೆಯಲಿದೆ. ಹ್ಯಾಂಡ್‍ಬಾಲ್ ಹಾಗೂ ಹಗ್ಗಜಗ್ಗಾಟದಲ್ಲಿ ಒಟ್ಟು 12 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿದೆ. 40ರ ಒಳಗಿನ ವಯೋಮಿತಿ ಹಾಗೂ 40ರ ಮೇಲ್ಪಟ್ಟವರಿಗೆ ಕೆಸರುಗದ್ದೆ ಓಟವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಡಿ.ಪಿ ರಾಜೇಶ್ ಮಾತನಾಡಿ ಕ್ರೀಡಾಕೂಟದ ಉದ್ಘಾಟನೆಯನ್ನು ಪೂರ್ವಾಹ್ನ 10 ಗಂಟೆಗೆ ನಿವೃತ್ತ ಶಿಕ್ಷಕಿ ಬಲ್ಲಚಂಡ ಕಮಲ ನೆರವೇರಿಸ ಲಿದ್ದಾರೆ. ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಅಪರಾಹ್ನ ಮೂರು ಗಂಟೆಗೆ ನಡೆಯಲಿದೆ, ಸಭೆಯ ಅಧ್ಯಕ್ಷತೆಯನ್ನು ಕ್ರೀಡಾ ಸಂಚಾಲಕ ಪಳೆಯಂಡ ಪಾರ್ಥಚಿಣ್ಣಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ಬಿಜೆಪಿ ಯುವಮೋರ್ಚಾ ರಾಜ್ಯ ಖಜಾಂಜಿ ಮಂಡೇಪಂಡ ಶಶಾಂಕ್ ಭೀಮಯ್ಯ, ವೀರಾಜಪೇಟೆ ಉದ್ಯಮಿ ಬಿ.ಬಿ ನಾಗರಾಜ್, ಕಾಫಿ ಬೆಳೆಗಾರ ಬಲ್ಲಚಂಡ ರಂಜನ್ ಬಿದ್ದಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಷ್ಟಿಯ ಸಮಿತಿ ಸದಸ್ಯ ಲೊಕೇಶ್ ಸಾಗರ್ ಉಪಸ್ಥಿತಲಿರುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಪ್ರೆಸ್‍ಕ್ಲಬ್‍ನ ಉಪಾಧ್ಯಕ್ಷ ಡಿ.ಎಂ. ರಾಜ್‍ಕುಮಾರ್, ಹೇಮಂತ್‍ಕುಮಾರ್, ಟಿ.ಎನ್ ಮಂಜುನಾಥ್ ಉಪಸ್ಥಿತರಿದ್ದರು.ನಾಳೆ ಪತ್ರಕರ್ತರಿಗೆ ಕೆಸರುಗದ್ದೆ ಕ್ರೀಡಾಕೂಟ