ಮಡಿಕೆÉೀರಿ, ಸೆ. 8: ಸಾಲ ಮರುಪಾವತಿಸದ ದಲಿತ ಕಾರ್ಮಿಕ ನನ್ನು ನಾಯಿಗಳಿಂದ ಕಚ್ಚಿಸಿದ ತೋಟದ ಮಾಲೀಕನನ್ನು ಗಡೀಪಾರು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿಯ ಭೀಮವಾದ ಘಟಕ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಬಿ.ರಾಜು, ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಕೂಡ ಜೀವಂತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾಲ ಮರುಪಾವತಿಸಿಲ್ಲವೆಂದು ಬಾಳೆಲೆಯಲ್ಲಿ ದಲಿತ ಕಾರ್ಮಿಕ ಹರೀಶ್ ಎಂಬಾತನನ್ನು ನಾಯಿಗಳಿಂದ ಕಚ್ಚಿಸಿ ಜೀವಭಯ ಮಡಿಕೆÉೀರಿ, ಸೆ. 8: ಸಾಲ ಮರುಪಾವತಿಸದ ದಲಿತ ಕಾರ್ಮಿಕ ನನ್ನು ನಾಯಿಗಳಿಂದ ಕಚ್ಚಿಸಿದ ತೋಟದ ಮಾಲೀಕನನ್ನು ಗಡೀಪಾರು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿಯ ಭೀಮವಾದ ಘಟಕ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಬಿ.ರಾಜು, ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಕೂಡ ಜೀವಂತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾಲ ಮರುಪಾವತಿಸಿಲ್ಲವೆಂದು ಬಾಳೆಲೆಯಲ್ಲಿ ದಲಿತ ಕಾರ್ಮಿಕ ಹರೀಶ್ ಎಂಬಾತನನ್ನು ನಾಯಿಗಳಿಂದ ಕಚ್ಚಿಸಿ ಜೀವಭಯ ಜಿಲ್ಲೆಯಲ್ಲಿ ಇರುವ ಸಿ ಮತ್ತು ಡಿ ಭೂಮಿಯನ್ನು ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ಬಡವರ್ಗದ ಮಂದಿಗೆ ತಲಾ 3 ಏಕರೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಖಂಡನೀಯವೆಂದರು. ಪತ್ರಕರ್ತರಿಗೆ ಸರ್ಕಾರ 10 ಲಕ್ಷ ರೂ. ವಿಮೆ ಯೋಜನೆ ಜಾರಿಗೆ ತರುವ ಮೂಲಕ ಭದ್ರತೆಯನ್ನು ನೀಡಬೇಕೆಂದು ರಾಜು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷ ರಾಮ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಜೀತ ಪದ್ಧತಿ ಜೀವಂತವಾಗಿರುವ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧವೆಂದರು.
ಸುದ್ದಿಗೋಷ್ಠಿಯಲ್ಲಿ ಹೋಬಳಿ ಅಧ್ಯಕ್ಷ ಕೆ.ಆರ್. ಕೀರ್ತಿರಾಜ್, ವೀರಾಜಪೇಟೆ ಉಪಾಧ್ಯಕ್ಷ ಅಪ್ಪು ಹಾಗೂ ಸೋಮವಾರಪೇಟೆ ಅಧ್ಯಕ್ಷ ವಿ.ಎಸ್. ರಮೇಶ್ ಉಪಸ್ಥಿತರಿದ್ದರು.