ಕುಶಾಲನಗರ, ಸೆ. 8: ಕುಶಾಲನಗರ ರೋಟರಿ ಸಂಸ್ಥೆ ಆಶ್ರಯದಲ್ಲಿ ಸ್ಥಳೀಯ ಫಾತಿಮಾ ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್‍ನ ಪದಗ್ರಹಣ ಕಾರ್ಯಕ್ರಮ ನಡೆಯಿತು. ರೋಟರಿ ಅಧ್ಯಕ್ಷ ಎನ್.ಜಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಮಹೇಶ್ ಕುಮಾರ್ ಚಾಲನೆ ನೀಡಿದರು. ಇಂಟರ್ಯಾಕ್ಟ್ ಕ್ಲಬ್‍ನ ಅಧ್ಯಕ್ಷರಾಗಿ ವಿದ್ಯಾರ್ಥಿನಿ ಶಿವಾನಿ, ಕಾರ್ಯದರ್ಶಿ ಯಾಗಿ ಋತಿಕ ಅವರನ್ನು ನೇಮಕಗೊಳಿಸಿ ಪದಗ್ರಹಣ ನೆರವೇರಿಸಲಾಯಿತು.
ಈ ಸಂದರ್ಭ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಟಿ.ವಿ. ರವಿ, ವಲಯ ಮುಖ್ಯಸ್ಥ ಎಂ.ಡಿ. ಅಶೋಕ್, ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ನಿರ್ಮಲ, ಶಾಲಾ ಮುಖ್ಯಸ್ಥರಾದ ಜನಿತ, ರೋಟರಿ ಪ್ರಮುಖರಾದ ಕ್ರಿಜ್ವಲ್ ಕೋಟ್ಸ್, ಸುಪ್ರಿತಾ ಹಾಜರಿದ್ದರು.