ನಾಪೆÇೀಕ್ಲು, ಸೆ. 8: ಸೆ. 7ರಂದು ಅಪರಾಹ್ನ ನಾಲ್ಕುನಾಡು ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆ ಜನರಲ್ಲಿ ಭೀತಿ ಮೂಡಿಸಿದೆ. ಈ ಭಾರೀ ಮಳೆಯ ಪರಿಣಾಮ ಐತಿಹಾಸಿಕ ಬಿದ್ದಾಟಂಡ ವಾಡೆಯ ನೂರಂಬಡ ನಾಡ್ ಕೋಲ್ ಮಂದ್‍ನ ಬಳಿಯಲ್ಲಿರುವ ಬಿದ್ದಾಟಂಡ ಮಹಾಗುರು ಪೆÇನ್ನಪ್ಪ ಕೈಮಡದ ಬಳಿ ಭಾರೀ ಪ್ರಮಾಣದಲ್ಲಿ ಬರೆ ಕುಸಿತಗೊಂಡಿದೆ.

ಈ ಬರೆ ಕುಸಿತಕ್ಕೂ ಬಿದ್ದಾಟಂಡ ಮಹಾಗುರು ಪೆÇನ್ನಪ್ಪ ಕೈಮಡಕ್ಕೂ ಕೆಲವೇ ಅಡಿ ಅಂತರವಿರುವದರಿಂದ ಹಾಗೂ ಕೆಳ ಭಾಗದಲ್ಲಿ ಸುಮಾರು 40 ರಿಂದ 50 ಅಡಿಗಳಷ್ಟು ಪ್ರಪಾತವಿರುವ ಕಾರಣ ಮುಂದಿನ ದಿನಗಳಲ್ಲಿ ಕೈಮಡಕ್ಕೆ ಅಪಾಯವಾಗುವ ಭೀತಿ ಉಂಟಾಗಿದೆ. ಈಗಾಗಲೇ ಮಂದ್‍ನ ಕೆಳಭಾಗದಲ್ಲಿ ತಡೆ ನಿರ್ಮಿಸಲಾಗಿದೆ. ಇಲ್ಲಿಯೂ ತಡೆಗೋಡೆ ನಿರ್ಮಿಸಬೇಕಾಗಿದ್ದು ಬರೇ ಕುಸಿತದ ಕಾರಣ ಲಕ್ಷಾಂತರ ರೂ. ನಷ್ಟ ಸಂಭವಿಸಿದಂತಾಗಿದೆ.