ಮಡಿಕೇರಿ, ಸೆ. 8: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಈ ಹಿಂದಿನ ವರ್ಷಗಳಂತೆ ಅಬ್ಬರದ ಮಳೆಗಾಲವನ್ನು ಕಾಣದಿದ್ದರೂ, ಕೆಲವು ದಿನಗಳ ಸುರಿದ ಭಾರೀ ಮಳೆ - ಗಾಳಿಯಿಂದಾಗಿ ಹಲವು ಕೋಟಿಗಳಷ್ಟು ನಷ್ಟ ಸಂಭವಿಸಿದೆ. ಜಿಲ್ಲಾಡಳಿತ ನಷ್ಟದ ಅಂದಾಜನ್ನು ಕ್ರೋಢೀಕರಿಸಿದ್ದು, ವಿವಿಧ ಇಲಾಖೆಗಳ ಮೂಲಕ ಸಂಗ್ರಹಿಸಿದ ಮಾಹಿತಿ.ಮನೆ ಜಖಂ, ಮಾನವ ಪ್ರಾಣ ಹಾನಿ, ಜಾನುವಾರು ಸಾವು ಪ್ರಕರಣಗಳು ಸೇರಿದಂತೆ ಈ ಸಾಲಿನಲ್ಲಿ ರೂ. 12.39 ಕೋಟಿಯಷ್ಟು ನಷ್ಟ ಸಂಭವಿಸಿದೆ. ಈ ಬಗ್ಗೆ ಜಿಲ್ಲಾಡಳಿತ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಮೂರು ತಾಲೂಕುಗಳಿಗೆ ತಲಾ ರೂ. 2 ಕೋಟಿಯಂತೆ ತುರ್ತು ಪರಿಹಾರಕ್ಕಾಗಿ ರೂ. 6 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾ ಪಂಚಾಯಿತಿಯ ಆಸ್ತಿ - ಪಾಸ್ತಿಗೆ ಸಂಬಂಧಿಸಿದಂತೆ ಒಟ್ಟು ರೂ. 8.49 ಕೋಟಿ ನಷ್ಟವಾಗಿದೆ ಇದರಲ್ಲಿ 56.40 ಕಿ.ಮೀ. ನಷ್ಟು ರಸ್ತೆ ಹಾನಿಯಾಗಿದ್ದು, ರೂ. 5.57 ಕೋಟಿ, ಸೇತುವೆ, ಮೋದಿ ಹಾನಿಗೀಡಾದ 26 ಪ್ರಕರಣಗಳು ಸೇರಿ ರೂ. 1.50 ಕೋಟಿ ನಷ್ಟ ಸಂಭವಿಸಿದೆ.
ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ 2.77ಕೋಟಿ ನಷ್ಟವುಂಟಾಗಿದ್ದು, ಇದರಲ್ಲಿ ರಸ್ತೆ ಹಾನಿಗೀಡಾದ ಪ್ರಕರಣದಲ್ಲಿ ರೂ. 1.94 ಕೋಟಿ, ಸೇತುವೆ, ಮೋರಿ ಜಖಂಗೊಂಡ 12 ಪ್ರಕರಣ ಸೇರಿದಂತೆ ರೂ. 80ಲಕ್ಷ, ಸರಕಾರಿ ಕಟ್ಟಡ ಜಖಂಗೊಂಡ ಪ್ರಕರಣದಲ್ಲಿ 3 ಲಕ್ಷ ಸೇರಿದಂತೆ
(ಮೊದಲ ಪುಟದಿಂದ) ಈಗಾಗಲೇ ಕಳಪೆ ರಸ್ತೆ ಮಾಡಿರುವ ಗುತ್ತಿಗೆದಾರನಿಗೆ 1.70 ಕೋಟಿ ಹಣ ನೀಡಲಾಗಿದೆ. 9 ಕೋಟಿ ಹಣಕ್ಕೆ ಬಿಲ್ ಮಾಡಲಾಗಿದೆ. ಮೂರನೇ ದರ್ಜೆ ಗುತ್ತಿಗೆದಾರ ಮಾಡುವ ಕಾಮಗಾರಿಗಿಂತಲೂ ರಸ್ತೆ ಕಳಪೆಯಾಗಿದೆ. ಸರ್ಕಾರದ ಹಣ ಈ ರೀತಿ ಪೋಲಾಗಲು ಯಾರೂ ಬಿಡಬಾರದು ಎಂದು ಕಳಕಳಿ ವ್ಯಕ್ತಪಡಿಸಿದರು.
ತಾಕೇರಿ ಸೇರಿದಂತೆ ಇನ್ನಿತರೆಡೆ 150 ಇಂಚಿಗೂ ಹೆಚ್ಚು ಮಳೆಯಾಗುತ್ತದೆ. ಆದರೂ ಗ್ರಾಮೀಣ ಭಾಗದ ರಸ್ತೆಗಳು ಚೆನ್ನಾಗಿವೆ. ಕಿ.ಮೀ.ಗೆ ಒಂದು ಕೋಟಿ ಬಿಡುಗಡೆಯಾಗಿದ್ದರೂ ಹೆದ್ದಾರಿ ಕಾಮಗಾರಿ ಕಳಪೆಯಾಗಿರುವದು, ಈ ಬಗ್ಗೆ ಯಾರೂ ಚಕಾರ ಎತ್ತದಿರುವದು ದುರಂತ ಎಂದು ಸತೀಶ್ ನುಡಿದರು.
ಈ ಸಂದರ್ಭ ಮಾತನಾಡಿದ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜನಪ್ರತಿನಿಧಿಗಳಾಗಿದ್ದುಕೊಂಡು ನಾವುಗಳೇ ಮುತ್ತಿಗೆ ಹಾಕುವದು ಸಮಂಜಸವಲ್ಲ. ಈ ಬಗ್ಗೆ ಇಲಾಖೆಯ ಚೀಫ್ ಇಂಜಿನಿಯರ್, ಲೋಕೋಪಯೋಗಿ ಇಲಾಖಾ ಸಚಿವರಿಗೆ, ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿ, ಶಾಸಕರೂ ಸೇರಿದಂತೆ ಸಂಸದರು ಮತ್ತು ಎಂಎಲ್ಸಿಗಳಿಗೆ ತಾ.ಪಂ.ನಿಂದ ದೂರು ನೀಡಿ ಮೊದಲು ಕ್ರಮಕ್ಕೆ ಆಗ್ರಹಿಸಲಾಗುವದು. ನಂತರ ಮುತ್ತಿಗೆ ಹಾಕಲು ಸಮಯ ನಿಗದಿಗೊಳಿಸಲಾಗುವದು ಎಂದರು.
ಇದೇ ಇಲಾಖೆಯಿಂದ 6.50 ಕೋಟಿ ವೆಚ್ಚದಲ್ಲಿ ಕೈಗೊಂಡ ಯಡವನಾಡು-ಐಗೂರು ರಸ್ತೆ ಹಾಳಾಗಿದೆ ಎಂದು ಸದಸ್ಯೆ ಸಬಿತಾ ಚನ್ನಕೇಶವ ಗಮನ ಸೆಳೆದರು. ಅಂದಗೋವೆಯಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯೂ ಕಳಪೆಯಾಗಿದೆ ಎಂದು ಸದಸ್ಯೆ ಮಣಿ ಸಭೆಗೆ ತಿಳಿಸಿದರು. ಲೋಕೋಪಯೋಗಿ ಇಲಾಖೆಯ ಬಗ್ಗೆ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದರೂ ಸಹ ಸಭೆಯಲ್ಲಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರ ರಘು, ಚರ್ಚೆಗೂ ತಮಗೂ ಸಂಬಂಧವೇ ಇಲ್ಲದಂತೆ ಕುಳಿತಿದ್ದರು.
ಅಂಗನವಾಡಿ ಮಕ್ಕಳಿಗೆ ವಿಷಯುಕ್ತ ಆಹಾರ! : ತಾಲೂಕಿನ ಅಂಗನವಾಡಿ ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ಆಹಾರ ಸಂಪೂರ್ಣ ಕಳಪೆಯಾಗಿದ್ದು, ಹುಳು ಹಿಡಿದ ಅಕ್ಕಿ, ಗೋಧಿಯನ್ನು ನೀಡಲಾಗುತ್ತಿದೆ. ಹುಳುಗಳನ್ನು ಸಾಯಿಸಲು ಕ್ರಿಮಿನಾಶಕ ಸಿಂಪಡಿಸಲಾಗುತ್ತಿದ್ದು, ಇದೇ ಧಾನ್ಯಗಳನ್ನು ಮಕ್ಕಳಿಗೂ ಸರಬರಾಜು ಮಾಡಲಾಗುತ್ತಿದೆ. ಒಂದು ರೀತಿಯಲ್ಲಿ ಇಲಾಖೆಯೇ ಮಕ್ಕಳಿಗೆ ವಿಷ ನೀಡುತ್ತಿದೆ ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಗಂಭೀರ ಆರೋಪ ಮಾಡಿದರು. ಈ ಬಗ್ಗೆ ಉತ್ತರಿಸಬೇಕಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಗೆ ಆಗಮಿಸದೇ ಇದ್ದುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ಗಂಭೀರ ವಿಷಯದ ಬಗ್ಗೆ ಮಾಹಿತಿ ನೀಡಬೇಕಾದ ಸಿಡಿಪಿಓ ಅವರು ಸಭೆಗೆ ಆಗಮಿಸದೇ ಕೆಳ ಹಂತದ ಅಧಿಕಾರಿಯನ್ನು ಕಳುಹಿಸಿದ್ದಾರೆ. ಇವರನ್ನು ಸಭೆಯಿಂದ ಹೊರಗೆ ಕಳುಹಿಸಿ ಎಂದು ಇಲಾಖೆಯ ಅಧಿಕಾರಿ ಶೈಲಾ ಅವರ ಕುರಿತು ಸದಸ್ಯ ವಿಜು ಚಂಗಪ್ಪ ಆಗ್ರಹಿಸಿದರು.
ಈ ಬಗ್ಗೆ ಅರ್ಧ ಗಂಟೆಗೂ ಅಧಿಕ ಕಾಲ ಚರ್ಚೆ ನಡೆಯಿತು. ಅಂಗನವಾಡಿಗಳಿಗೆ ಆಹಾರ ಸರಬರಾಜು ಮಾಡುವ ಘಟಕದಲ್ಲಿ ಸಿಡಿಪಿಓ ಅವದ ನಾದಿನಿಯನ್ನೇ ಅಕೌಂಟೆಂಟ್ ಆಗಿ ಕೂರಿಸಲಾಗಿದೆ. ಸಿಡಿಪಿಓ ಅವರೇ ಆಹಾರ ಧಾನ್ಯಗಳನ್ನು ಖರೀದಿ ಮಾಡುತ್ತಿದ್ದಾರೆ. ಖರೀದಿಯಲ್ಲೂ ಲಕ್ಷಾಂತರ ಅವ್ಯವಹಾರ ನಡೆದಿರುವ ಸಂಶಯವಿದೆ ಎಂದು ಅಭಿಮನ್ಯುಕುಮಾರ್ ಹೇಳಿದರು.
ಅಧಿಕಾರಿಗೆ ಶೋಕಾಸ್ ನೋಟೀಸ್: ಕಳಪೆ ಗುಣಮಟ್ಟದ ಆಹಾರ, ಅಂಗನವಾಡಿ ಕೇಂದ್ರಗಳಿಗೆ ಫ್ಯಾನ್ ಅಳವಡಿಸದಿರುವದು, ಆಹಾರ ಪೂರೈಕೆಯಲ್ಲಿ ಪಾರದರ್ಶಕತೆ ಇಲ್ಲದಿರುವದು, ಆರು ತಿಂಗಳಿಗೆ ಬೇಕಾದ ಪಡಿತರವನ್ನು ಒಮ್ಮೆಲೇ ಖರೀದಿಸುತ್ತಿರುವದೂ ಸೇರಿದಂತೆ ಇತರ ಆರೋಪಗಳ ಬಗ್ಗೆ ಸಂಬಂಧಿಸಿದ ಸಿಡಿಪಿಓ ಅವರಿಗೆ ಶೋಕಾಸ್ ನೋಟೀಸ್ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕೂಗಾಡಿದ್ರೆ ಸಾಲಲ್ಲ: ತಾ.ಪಂ. ಸಾಮಾನ್ಯ ಸಭೆಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಕಾರ್ಯರೂಪಕ್ಕೆ ಬರಲ್ಲ. ಸಭೆಯಲ್ಲಿ ಕೂಗಾಡಿದ್ರೆ ಸಾಕಾಗಲ್ಲ. ಎಷ್ಟೋ ಅಂಗನವಾಡಿಗಳಿಗೆ ಫ್ಯಾನ್ಸ್ ಇರಲಿ, ವಿದ್ಯುತ್ ಸಹ ಇಲ್ಲ. ಸಭೆಯಲ್ಲಿ ಸದಸ್ಯರೆದುರು ಕೂಗಾಡ್ತೀರಾ ಅಷ್ಟೇ. ಸಭೆಯಲ್ಲಿ ಬರೀ ಮಾತಾಡುವದೇ ಆಗಿದೆ ಎಂದು ಸದಸ್ಯರುಗಳಾದ ಕುಶಾಲಪ್ಪ, ತಂಗಮ್ಮ, ಸಬಿತ ಅವರುಗಳು ವೇದಿಕೆಯಲ್ಲಿದ್ದವರಿಗೆ ಚುಚ್ಚಿದರು.
ಕಂದಾಯ ಇಲಾಖೆ ವಿರುದ್ಧ ದೂರು: ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಗಳು ಮತ್ತು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗಳಿಗೆ ಕಂದಾಯ ಇಲಾಖಾಧಿಕಾರಿಗಳು ಗೈರಾಗುತ್ತಿದ್ದು, ಸ್ಮಶಾನ, ಕಸವಿಲೇವಾರಿಗೆ ಜಾಗ, 94 ಸಿ. ಅರ್ಜಿಗಳ ಪ್ರಗತಿ, ನಿವೇಶನ ರಹಿತರ ಬಗ್ಗೆ ತೆಗೆದುಕೊಂಡ ಕ್ರಮಗಳು, ಒತ್ತುವರಿ ತೆರವು ಇತ್ಯಾದಿಗಳ ಬಗ್ಗೆ ಯಾವದೇ ಮಾಹಿತಿ ನೀಡುತ್ತಿಲ್ಲ. ಈ ಹಿನ್ನೆಲೆ ಇಲಾಖೆಯ ಅಧಿಕಾರಿಗಳ ವಿರುದ್ಧ ಆಗ್ರಹಿಸಿ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಸಚಿವರಿಗೆ ದೂರು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನಿಯೋಜಿಸಬೇಕು. ಹಾರಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸದಸ್ಯೆ ಕುಸುಮ ಅಶ್ವಥ್ ಸಭೆಯಲ್ಲಿ ಒತ್ತಾಯಿಸಿದರು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲೂ ವೈದ್ಯರಿಲ್ಲದೇ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ ಗಮನ ಸೆಳೆದರು.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಈ ಹಿಂದೆ ಸೋಮವಾರಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಕೃಷ್ಣಾನಂದ್ ಅವರನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಲೂಟಿ ಇಲಾಖೆಯಾಗಿ ಅಬಕಾರಿ: ಎಲ್ಲಾ ಗ್ರಾಮ ಸಭೆಗಳಿಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತೆರಳಬೇಕು. ಸ್ಥಳೀಯವಾಗಿ ಬರುವ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೂಚಿಸಿದರು. ಗೌಡಳ್ಳಿ ಗ್ರಾಮ ಸಭೆಗೆ ಅಧಿಕಾರಿಗಳೇ ಬರುವದಿಲ್ಲ ಎಂದು ಅಧ್ಯಕ್ಷ ಧರ್ಮಾಚಾರಿ ಆರೋಪಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಅಕ್ರಮ ಮಾರಾಟಗಾರರ ಪಟ್ಟಿಯನ್ನೇ ಅಬಕಾರಿ ಇಲಾಖೆಗೆ ನೀಡಿದರೂ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಅಬಕಾರಿ ಇಲಾಖೆ ಲೂಟಿ ಇಲಾಖೆಯಾಗಿದೆ. ಎಷ್ಟೇ ಒತ್ತಡ ಹಾಕಿದರೂ ಅಕ್ರಮ ಮದ್ಯ ಮಾರಾಟಕ್ಕೆ ತಡೆ ಬೀಳುತ್ತಿಲ್ಲ. ಈ ಬಗ್ಗೆ ಸಚಿವರ ಗಮನಕ್ಕೆ ತರಲಾಗುವದು ಎಂದು ಅಭಿಮನ್ಯು ಕುಮಾರ್ ಹೇಳಿದರು.
ಅಂಗನವಾಡಿಗಳಲ್ಲಿ ಅಸ್ಸಾಮಿಗರು: ಅಂಗನವಾಡಿಗಳಲ್ಲಿ ಅಸ್ಸಾಮಿಗರು ಬಂದು ಆಹಾರಕ್ಕಾಗಿ ಪಟ್ಟು ಹಿಡಿಯುತ್ತಿರುವದರಿಂದ ಅಂಗನವಾಡಿ ಕಾರ್ಯಕರ್ತೆಯರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಹಾನಗಲ್ಲು ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಸಭೆಯ ಗಮನ ಸೆಳೆದರು. ಬೇಳೂರು ಗ್ರಾ.ಪಂ.ನಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಅಧ್ಯಕ್ಷೆ ಭಾಗ್ಯ ಮನವಿ ಮಾಡಿದರು.
2.9 ಕೋಟಿ ಕ್ರಿಯಾಯೋಜನೆಗೆ ಅನುಮತಿ: ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಲು ತಾ.ಪಂ. ಅಧ್ಯಕ್ಷರ ನಿಧಿಗೆ ಒಂದು ಲಕ್ಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ಸಂದರ್ಭ ತಾಲೂಕು ವ್ಯಾಪ್ತಿಯಲ್ಲಿ 2017-18ನೇ ಸಾಲಿನಲ್ಲಿ ಸಂಯುಕ್ತ ಅನುದಾನವೂ ಸೇರಿದಂತೆ ಇತರ ಯೋಜನೆಯಡಿ 2.9 ಕೋಟಿ ಅನುದಾನಕ್ಕೆ ತಯಾರಿಸಲಾದ ಕ್ರಿಯಾಯೋಜನೆಗೆ ಒಪ್ಪಿಗೆ ನೀಡಲಾಯಿತು.ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ವಿವಿಧ ಇಲಾಖಾಧಿಕಾರಿಗಳು, ಆಹ್ವಾನಿತ ಸದಸ್ಯರುಗಳಾದ ವಿವಿಧ ಗ್ರಾ.ಪಂ. ಅಧ್ಯಕ್ಷರುಗಳು ಉಪಸ್ಥಿತರಿದ್ದರು.