ಕುಶಾಲನಗರ, ಸೆ. 5 : ಪ್ರಕೃತಿ ಮೇಲಿನ ದೌರ್ಜನ್ಯಗಳ ಹತ್ತಿಕ್ಕುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ಚಿಂತನೆ ಹರಿಸಬೇಕಿದೆ ಎಂದು ಸೀಡ್ ಬಾಲ್ ತರಬೇತುದಾರ ಬೆಂಗಳೂರಿನ ಕಾರ್ತಿಕ್ ಸತ್ಯಮೂರ್ತಿ ಹೇಳಿದರು.

ಕುಶಾಲನಗರದ ವಾಸವಿ ಯುವತಿಯರ ಸಂಘದ ಆಶ್ರಯದಲ್ಲಿ ವಾಸವಿ ಮಹಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಕೃತಿಗೆ ನಮ್ಮ ಕೊಡುಗೆ ಎಂಬ ಯೋಜನೆ ಮೂಲಕ ಬೀಜದುಂಡೆಯನ್ನು ತಯಾರಿಕೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣೆ ಕುರಿತು ಮಾತನಾಡಿದÀರು. ಮುಂದಿನ 2030 ರ ಒಳಗಾಗಿ 200 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ. ಈಗಾಗಲೆ 1 ಕೋಟಿ ಬೀಜದುಂಡೆಯನ್ನು ನಿರ್ಮಿಸಿ ಬಿತ್ತನೆ ಮಾಡಲಾಗಿದೆ. ಅರಣ್ಯ ಸಂಪತ್ತನ್ನು ವೃದ್ಧಿಸುವ ಕಾರ್ಯದಲ್ಲಿ ಸಂಘಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬ ನಾಗರೀಕನು ಕೂಡ ಕೈಜೋಡಿಸಬೇಕಿದೆ ಎಂದರು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಕುಸುಮ ಸುಖೇಶ್‍ರಾಜ್, ನಿಕಟಪೂರ್ವ ಅಧ್ಯಕ್ಷೆ ರಶ್ಮಿ ಅಮೃತ್‍ರಾಜ್, ವಾಸವಿ ಯುವಜನ ಸಂಘದ ಅಧ್ಯಕ್ಷ ವಿ.ಆರ್.ಮಂಜುನಾಥ್, ಮಹಿಳಾ ಮಂಡಳಿ ಉಪಾಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ಅಶ್ವಿನಿ ರವಿಕುಮಾರ್ ಮತ್ತಿತರರು ಇದ್ದರು.