ಮಡಿಕೇರಿ, ಸೆ. 4: ಸಧ್ಯದಲ್ಲೇ ಚಿತ್ರೀಕರಣ ಆರಂಭವಾಗಲಿರುವ ಕನ್ನಡ ಚಲನ ಚಿತ್ರ ‘ರಾಂಧವ’ದ ನಾಯಕ ನಟನಾಗಿ ಕೊಡಗಿನ ಉಳಿಯಡ ಭುವನ್ ಪೊನ್ನಣ್ಣ ನಟಿಸಲಿದ್ದಾರೆ.ಶಾಸಕ ಅಶೋಕ್, ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ಉಪಸ್ಥಿತಿಯಲ್ಲಿ ಇತ್ತೀಚೆಗೆ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಸನತ್‍ಕುಮಾರ್ ನಿರ್ಮಾಣದಲ್ಲಿ ಹೊರ ಬರುತ್ತಿರುವ ಸಿನಿಮಾ ನಿರ್ದೇಶನವನ್ನು ಸುನಿಲ್ ಎಸ್. ಆಚಾರ್ಯa ನಿರ್ಮಾಪಿಸಿ ಕಥೆ ಬರೆದಿದ್ದಾರೆ. ಭುವನ್ ಪೊನ್ನಣ್ಣ ಜೊತೆ ಶ್ರೇಯ ಅಂಜನ್, ಯಮುನ ಶ್ರೀ ನಿಧಿ, ಮಂಜುನಾಥ ಹೆಗಡೆ ಹಾಗೂ ಇತರರು ನಟಿಸಿದ್ದಾರೆ.