ಕರಿಕೆ, ಆ. 23: ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಕಾಸರಗೋಡುವಿನಿಂದ ಮೈಸೂರಿಗೆ ನೂತನ ಸೂಪರ್ ಫಾಸ್ಟ್ ಬಸ್ ಸೇವೆ ಪ್ರಾರಂಭಿಸಿದ್ದು, ಕಾಸರಗೋಡುವಿನಿಂದ ಬೆಳಿಗ್ಗೆ 6.15ಕ್ಕೆ ಹೊರಟು 8.15ಕ್ಕೆ ಕರಿಕೆ, 9.30ಕ್ಕೆ ಭಾಗಮಂಡಲ, 10.25ಕ್ಕೆ ವೀರಾಜಪೇಟೆ, 1.30ಕ್ಕೆ ಮೈಸೂರು ತಲಪಲಿದ್ದು, ಪುನಃ ರಾತ್ರಿ 7.30ಕ್ಕೆ ಕರಿಕೆ ಮೂಲಕ ಕಾಸರಗೋಡುವಿಗೆ ತಲಪಲಿದೆ.

ನೂತನ ಬಸ್‍ಗೆ ಕರಿಕೆ ಗ್ರಾ.ಪಂ. ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು. ಗ್ರಾ.ಪಂ. ಅಧ್ಯಕ್ಷ ಎನ್. ಬಾಲಚಂದ್ರ ನಾಯರ್, ಸದಸ್ಯರಾದ ಹರಿ ಪ್ರಸಾದ್, ರಮಾನಾಥ, ಪುರುಷೋತ್ತಮ್ಮ, ವಿ.ಎಸ್.ಎಸ್.ಎನ್. ಮಾಜಿ ಅಧ್ಯಕ್ಷ ಬೇಕಲ್ ದೇವರಾಜ, ವಿಎಸ್‍ಎಸ್‍ಎವ್ ವ್ಯವಸ್ಥಾಪಕ ಗಂಗಾಧರ ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದರು.

ಭಾಗಮಂಡಲದಲ್ಲಿ ಸ್ವಾಗತ

ನೂತನ ಬಸ್ ಸಂಚಾರಕ್ಕೆ ಭಾಗಮಂಡಲದಲ್ಲೂ ಸ್ವಾಗತ ಕೋರಲಾಯಿತು. ಗ್ರಾ.ಪಂ. ಸದಸ್ಯ ಭಾಸ್ಕರ್, ಮಹೇಶ್, ಜಿ.ಪಂ. ಮಾಜಿ ಸದಸ್ಯ ಪಿ.ಎಂ. ರಾಜೀವ್ ಇನ್ನಿತರರು ಈ ಸಂದರ್ಭ ಇದ್ದರು.