ಸೋಮವಾರಪೇಟೆ, ಆ. 22: ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಅಕ್ಷರಶಃ ರೋಗ ರುಜಿನಗಳನ್ನು ಹರಡುವ ಕಾರ್ಖಾನೆಯಂತಾಗಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಒಂದೆರಡು ದಿನ ಕಳೆದರೆ ಇರುವ ಖಾಯಿಲೆಯೊಂದಿಗೆ ಇನ್ನಿತರ ರೋಗಗಳಿಗೆ ತುತ್ತಾಗುವ ಸಂಭವ ಅಧಿಕವಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಕುಳಿತುಕೊಂಡು ರೋಗಿಗಳ ತಪಾಸಣೆ ನಡೆಸುವ ಕೊಠಡಿಯ ಪಕ್ಕದಲ್ಲೇ ಸೊಳ್ಳೆ, ನೊಣ, ಬಗೆಬಗೆಯ ಕ್ರಿಮಿಕೀಟಗಳು ನೆಲೆಕಂಡು ಕೊಂಡಿವೆ. ಅನೇಕ ದಿನಗಳಿಂದ ಸರ್ಕಾರಿ ಆಸ್ಪತ್ರೆಯ ಒಂದು ಬದಿಯಲ್ಲಿ ತ್ಯಾಜ್ಯಗಳ ಶೇಖರಣೆ ಹೆಚ್ಚಾಗುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಕಸ ವಿಲೇವಾರಿ ಸಮಸ್ಯೆ ಕಂಡುಬಂದಿರುವದು ಒಂದೆಡೆಯಾದರೆ ಅತ್ಯಂತ ಶುಚಿತ್ವ ಕಾಪಾಡಿಕೊಳ್ಳಬೇಕಾದ ಆಸ್ಪತ್ರೆಯೇ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಕಸದ ತೊಟ್ಟಿಯಾಗಿ ಮಾರ್ಪಡುತ್ತಿರುವ ದೃಶ್ಯ ಗೋಚರಿಸಿದೆ. ಈ ಬಗ್ಗೆ ಆಸ್ಪತ್ರೆಯ ಮೇಲುಸ್ತುವಾರಿ ವಹಿಸಿಕೊಂಡಿರುವ ಗುತ್ತಿಗೆದಾರರನ್ನು ಪ್ರಶ್ನಿಸಿದರೆ, ಪಟ್ಟಣ ಪಂಚಾಯಿತಿಯ ವಿರುದ್ಧ ಬೊಟ್ಟು ಮಾಡುತ್ತಾರೆ. ಪಟ್ಟಣ ಪಂಚಾಯಿತಿಯನ್ನು ಪ್ರಶ್ನಿಸಿದರೆ ಆಸ್ಪತ್ರೆಯ ಮೇಲುಸ್ತುವಾರಿ ವಹಿಸಿರುವವರ ವಿರುದ್ದ ಬೊಟ್ಟು ಮಾಡುತ್ತಾರೆ. ಆಸ್ಪತ್ರೆಯ ಶುಚಿತ್ವ ಸೇರಿದಂತೆ ಇತರ ಕೆಲಸಗಳ ಬಗ್ಗೆ ಟೆಂಡರ್ ಪಡೆದಿರುವವರೇ ಕಸ ವಿಲೇವಾರಿಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಉತ್ತರಿಸುತ್ತಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಮಹಿಳಾ ಸಮಾಜಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಕುಳಿತುಕೊಂಡು ರೋಗಿಗಳ ತಪಾಸಣೆ ನಡೆಸುವ ಕೊಠಡಿಯ ಪಕ್ಕದಲ್ಲೇ ಸೊಳ್ಳೆ, ನೊಣ, ಬಗೆಬಗೆಯ ಕ್ರಿಮಿಕೀಟಗಳು ನೆಲೆಕಂಡು ಕೊಂಡಿವೆ. ಅನೇಕ ದಿನಗಳಿಂದ ಸರ್ಕಾರಿ ಆಸ್ಪತ್ರೆಯ ಒಂದು ಬದಿಯಲ್ಲಿ ತ್ಯಾಜ್ಯಗಳ ಶೇಖರಣೆ ಹೆಚ್ಚಾಗುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಕಸ ವಿಲೇವಾರಿ ಸಮಸ್ಯೆ ಕಂಡುಬಂದಿರುವದು ಒಂದೆಡೆಯಾದರೆ ಅತ್ಯಂತ ಶುಚಿತ್ವ ಕಾಪಾಡಿಕೊಳ್ಳಬೇಕಾದ ಆಸ್ಪತ್ರೆಯೇ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಕಸದ ತೊಟ್ಟಿಯಾಗಿ ಮಾರ್ಪಡುತ್ತಿರುವ ದೃಶ್ಯ ಗೋಚರಿಸಿದೆ. ಈ ಬಗ್ಗೆ ಆಸ್ಪತ್ರೆಯ ಮೇಲುಸ್ತುವಾರಿ ವಹಿಸಿಕೊಂಡಿರುವ ಗುತ್ತಿಗೆದಾರರನ್ನು ಪ್ರಶ್ನಿಸಿದರೆ, ಪಟ್ಟಣ ಪಂಚಾಯಿತಿಯ ವಿರುದ್ಧ ಬೊಟ್ಟು ಮಾಡುತ್ತಾರೆ. ಪಟ್ಟಣ ಪಂಚಾಯಿತಿಯನ್ನು ಪ್ರಶ್ನಿಸಿದರೆ ಆಸ್ಪತ್ರೆಯ ಮೇಲುಸ್ತುವಾರಿ ವಹಿಸಿರುವವರ ವಿರುದ್ದ ಬೊಟ್ಟು ಮಾಡುತ್ತಾರೆ. ಆಸ್ಪತ್ರೆಯ ಶುಚಿತ್ವ ಸೇರಿದಂತೆ ಇತರ ಕೆಲಸಗಳ ಬಗ್ಗೆ ಟೆಂಡರ್ ಪಡೆದಿರುವವರೇ ಕಸ ವಿಲೇವಾರಿಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಉತ್ತರಿಸುತ್ತಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.