ಮಡಿಕೇರಿ, ಆ. 22: ನಾಪೆÀÇೀಕ್ಲುವಿನಿಂದ ಚೆರಿಯಪರಂಬು ಮತ್ತು ಕಲ್ಲುಮೊಟ್ಟೆಗೆ ತೆರಳುವ ರಸ್ತೆ ಹೊಂಡ, ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಮುಂದಿನ 15 ದಿನಗಳ ಒಳಗಾಗಿ ರಸ್ತೆ ದುರಸ್ತಿಪಡಿಸದಿದ್ದಲ್ಲಿ ‘ರಸ್ತೆ ತಡೆ’ ಪ್ರತಿಭಟನೆ ನಡೆಸಲಾಗುವದೆಂದು ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ನಾಗರಿಕ ಹಿತರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಷೀರ್ ಆಲಿ, ನಾಪೆÀÇೀಕ್ಲಿನಿಂದ ಚೆರಿಯಪರಂಬು ಮತ್ತು ಕಲ್ಲುಮೊಟ್ಟೆಯನ್ನು ಸಂಪರ್ಕಿಸುವ ರಸ್ತೆ ಅಂದಾಜು 3 ಕಿ.ಮೀ.ನಷ್ಟಿದೆ. ಈ ರಸ್ತೆ ಸಂಪÀÇರ್ಣ ಹದಗೆಟ್ಟು ವಾಹನ ಸೇರಿದಂತೆ ಜನಸಂಚಾರ ಮಾಡಲು ಸಾಧ್ಯವಾಗದ ದುಸ್ಥಿತಿಯಲ್ಲಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಹೆಸರನ್ನು ರಸ್ತೆಗೆ ಇರಿಸಿದ್ದು ಬಿಟ್ಟರೆ ಕನಿಷ್ಟ ನಿರ್ವಹಣೆಯತ್ತ ಯಾರು ಗಮನ ಹರಿಸಿಲ್ಲವೆಂದು ವಿಷಾದಿಸಿದರು.

ಗ್ರಾಮದ ಪದವಿಪೂರ್ವ ಕಾಲೇಜು ಕ್ರೀಡಾಂಗಣಕ್ಕೆ, ಕಕ್ಕುಂದ ಕಾಡು ದೇವಸ್ಥಾನ, ವೆಂಕಟರಮಣ ದೇವಸ್ಥಾನಕ್ಕೆ, ಮೂರು ಮಸೀದಿ, ಒಂದು ದರ್ಗಾ ಶರೀಫ್, ಪ್ರಾಥಮಿಕ ಶಾಲೆ ಮತ್ತು ಮದರಸಗಳಿಗೆ ಸಂಪರ್ಕ ಕಲ್ಪಿಸುವ ಅತ್ಯಂತ ಪ್ರಮುಖ ಹಾದಿ ಇದಾಗಿದೆ. ಹೀಗಿದ್ದೂ ರಸ್ತೆಯ ದುರಸ್ತಿಯತ್ತ ಯಾರೂ ಗÀಮನ ಹರಿಸಿಲ್ಲ. ಇದರಿಂದ ಚೆರಿಯ ಪರಂಬು, ಕಲ್ಲುಮೊಟ್ಟೆ, ಬೇತು, ಅಜ್ಜಿಮುಟ್ಟ ಸೇರಿದಂತೆ ವಿವಿಧ ಗ್ರಾಮಗಳ ಜನರು ಸಮೀಪದ ನಾಪೆÀÇೀಕ್ಲು ಪಟ್ಟಣಕ್ಕೆ ತೆರಳಲು ಹರಸಾಹಸ ಪಡುತ್ತಿದ್ದಾರೆ.

ಈ ರಸ್ತೆಯನ್ನು ದುರಸ್ತಿ ಪಡಿಸುವಂತೆ ಈ ಹಿಂದೆ 2012 ರಲ್ಲಿ ಜಿಲ್ಲಾಧಿಕಾರಿಗಳಿಗೆ, ಶಾಸಕರು, ಉಸ್ತುವಾರಿ ಸಚಿವರುಗಳಿಗೆ ಮನವಿಗಳನ್ನು ಸಲ್ಲಿಸಲಾಗಿತ್ತಾದರು ಯಾವದೇ ಪ್ರಯೋಜನವಾಗಿಲ್ಲ. ಮುಂದಿನ ಹದಿನೈದು ದಿನಗಳಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸುವದಾಗಿ ಬಷೀರ್ ಆಲಿ ತಿಳಿಸಿದರು.

ವೇದಿಕೆ ಅಧ್ಯಕ್ಷರಾದ ಭವಾನಿ ಟಿ.ವಿ. ಮಾತನಾಡಿ, ಹದಗೆಟ್ಟ ರಸ್ತೆಯಿಂದಾಗಿ ಗ್ರಾಮದ ವಯೋವೃದ್ಧರು, ಅನಾರೋಗ್ಯಕ್ಕೆ ಒಳಗಾದವರು ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆಟೋ ಸೇರಿದಂತೆ ಯಾವದೇ ಬಾಡಿಗೆ ವಾಹನಗಳವರು ಬರಲು ಹಿಂದೇಟು ಹಾಕುವ ಸ್ಥಿತಿ ಇದೆ ಎಂದರು.

ಚೆರಿಯಪರಂಬು ನÀದಿ ಪಾತ್ರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಇದರಿಂದ ಕಾವೇರಿ ನದಿಗೆ ತ್ಯಾಜ್ಯ ಸೇರ್ಪಡೆಯಾಗುತ್ತಿದೆ. ಹೀಗಿದ್ದೂ ಅಲ್ಲೇ ಸಮೀಪದಿಂದ ಕಲುಷಿತ ನೀರನ್ನು ನಾಪೆÀÇೀಕ್ಲು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ವೇದಿಕೆ ಉಪಾಧ್ಯಕ್ಷ ಹ್ಯಾರಿಸ್ ಕೆ.ಎ. ಮಾತನಾಡಿ, ಕೇವಲ 10 ಮೀಟರ್, 100 ಮೀಟರ್ ರಸ್ತೆ ದುರಸ್ತಿಪಡಿಸಿ ಜನರ ಕಣ್ಣೊರೆಸುವ ತಂತ್ರವನ್ನಷ್ಟೆ ಮಾಡಲಾಗಿದ್ದು, ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ಗ್ರಾಮಸ್ಥರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ವಿಭಾಗದಲ್ಲಿ ಸಾವಿರಕ್ಕೂ ಹೆಚ್ಚಿನ ಮತದಾರರಿದ್ದು, ಇವರನ್ನು ಚುನಾವಣೆ ಸಂದರ್ಭ ವಿವಿಧ ಮತಗಟ್ಟೆಗಳಿಗೆ ಹಂಚಿಕೆ ಮಾಡಿ ಬಿಟ್ಟಿರುವದರಿಂದ ಈ ಭಾಗದ ಜನಪ್ರತಿನಿಧಿ ಯಾರು ಎನ್ನುವದರಲ್ಲೆ ಗೊಂದಲ ನಿರ್ಮಾಣವಾಗಿದೆ. ಆದ್ದರಿಂದ ಇಲ್ಲಿನ ಮತದಾರರನ್ನು ಒಂದೇ ಮತಗಟ್ಟೆಗೆ ಸೇರಿಸಬೇಕೆಂದು ಹ್ಯಾರಿಸ್ ಒತ್ತಾಯಿಸಿದರು.

ಗೋಷ್ಠಿಯಲ್ಲಿ ವೇದಿಕೆ ಉಪ ಕಾರ್ಯದರ್ಶಿ ಜುಬೇರ್ ಪರವಂಡ, ಸದಸ್ಯರಾದ ಪೀರು ಎಂ.ಪಿ. ಹಾಗೂ ನಾಗೇಶ್ ಟಿ.ಎನ್. ಉಪಸ್ಥಿತರಿದ್ದರು.