*ಗೋಣಿಕೊಪ್ಪ, ಜು. 26: ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧ ಮತ್ತು ಶುಚಿತ್ವದ ಬಗ್ಗೆ ಗ್ರಾ.ಪಂ. ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಸೂಚಿಸಿದರು.

ಶೌಚಾಲಯ ಕಟ್ಟಡ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ ಶಾಸಕರು ಪತ್ರಿಕೆಗಳಲ್ಲಿ ಬಂದ ವರದಿ ಹಾಗೂ ಚರಂಡಿಗಳಲ್ಲಿ ತುಂಬಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಂಡು ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರುಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಒಣಮೀನು ಮಾರುಕಟ್ಟೆಗೆ ಭೇಟಿ ನೀಡಿ ತ್ಯಾಜ್ಯಗಳನ್ನು ಚರಂಡಿಗೆ ಹಾಕದಂತೆ ಮತ್ತು ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು.

ನಿಯಮ ಉಲ್ಲಂಘಿಸಿದರೆ ಅಂಗಡಿಯ ಪರವಾನಗಿ ರದ್ದುಗೊಳಿಸುವದಾಗಿ ತಿಳಿಸಿದರು.

ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಸದಸ್ಯರುಗಳಾದ ರತಿ ಅಚ್ಚಪ್ಪ, ಮಂಜುಳ, ಸುರೇಶ್ ರೈ, ಪ್ರಭಾವತಿ, ಮಮಿತಾ, ರಾಜಶೇಖರ್, ಕೆ.ಪಿ. ಬೋಪಣ್ಣ, ರಾಮಕೃಷ್ಣ, ಆರ್.ಎಂ.ಸಿ. ಅಧ್ಯಕ್ಷ ಸುವಿನ್ ಗಣಪತಿ, ಸದಸ್ಯ ಕಿಲನ್ ಗಣಪತಿ, ಮಾಜಿ ಗ್ರಾ.ಪಂ. ಸದಸ್ಯರುಗಳಾದ ರಾಜೇಶ್, ಸುರೇಶ್, ಹಾಜರಿದ್ದರು.