ಮಡಿಕೇರಿ, ಜು. 7: ಇಲ್ಲಿಗೆ ಸಮೀಪದ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿ ಗ್ರಾಮದ ಬಳಿ 3 ಹಸುಗಳು ವಿದ್ಯುತ್ ತಂತಿ ತಗುಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದೆ.

ಬಿಳಿಗೇರಿ ಗ್ರಾಮದ ದೇವಜನ ಮೋಹನ್ ಮತ್ತು ಸುರೇಶ್ ಎಂಬವರಿಗೆ ಸೇರಿದ ಹಸುಗಳು ಬುಧವಾರ ಸಂಜೆ ನೀರು ಕುಡಿಯಲೆಂದು ಹೊಳೆ ಬದಿಗೆ ತೆರಳಿದ ಸಂದರ್ಭ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗಳು ತಗುಲಿ ಈ ದುರ್ಘಟನೆ ಸಂಭವಿಸಿದೆ.

ವಿದ್ಯುತ್ ತಂತಿ ಸಮೀ¥ Àದಲ್ಲಿದ್ದ ಹೊಳೆಗೆ ಬಿದ್ದಿದ್ದು ನೀರಿನಲ್ಲಿ ವಿದ್ಯುತ್ ಪ್ರವಹಿಸಿದ್ದು ಭಾರೀ ಅನಾಹುತ ತಪ್ಪಿದೆ ಎಂದು ಸ್ಥಳೀಯರಾದ ಎಂ.ಬಿ. ಜೋಯಪ್ಪ ತಿಳಿಸಿದ್ದಾರೆ. ಮಾಹಿತಿ ತಿಳಿದ ಚೆಸ್ಕಾಂ ಅಧಿಕಾರಿ ಸಿಬ್ಬಂದಿಗಳು ಆಗಮಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಹಸುವಿನ ಮಾಲೀಕರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಹಸುಗಳು ದಾರುಣ ಸಾವಿಗೀಡಾಗಿದ್ದು, ಈ ಸಂಬಂಧ ಚೆಸ್ಕಾಂ ಮೂಲಕ ಹಸುವಿನ ಮಾಲೀಕರಿಗೆ ಪರಿಹಾರ ಒದಗಿಸುವಂತೆ ಎಂ.ಬಿ. ಜೋಯಪ್ಪ ಆಗ್ರಹಿಸಿದ್ದಾರೆ.