ಗೋಣಿಕೊಪ್ಪಲು, ಜು. 7: ಬಸ್ ಮಾರ್ಗದ ಸಮಯದ ವಿಚಾರದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಖಾಸಗಿ ಬಸ್ ಸಿಬ್ಬಂದಿ ನಡುವೆ ನಡೆದ ಹಲ್ಲೆ ನಡೆದಿರುವ ಬಗ್ಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಪಡಿಸಲಾಗಿದೆ ಎಂದು ರಸ್ತೆ ಸಾರಿಗೆ ಬಸ್ ನಿರ್ವಾಹಕ ವಸಂತ್‍ಕುಮಾರ್, ಖಾಸಗಿ ಬಸ್ ಕಂಡಕ್ಟರ್ ಹಾಗೂ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಖಾಸಗಿ ಬಸ್ ಕಂಡಕ್ಟರ್ ತಿಮ್ಮಯ್ಯ ಹಾಗೂ ಚಾಲಕ ರಾಜು, ಕೆಎಸ್‍ಆರ್‍ಟಿಸಿ ಚಾಲಕ ಸಂತೋಷ್ ಹಾಗೂ ನಿರ್ವಾಹಕ ವಸಂತ್‍ಕುಮಾರ್ ಇವರುಗಳು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಪ್ರತಿ ದೂರು ದಾಖಲಿಸಿದ್ದಾರೆ. ದೂರುದಾರರು ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ.

ಶುಕ್ರವಾರ ಬೆಳಿಗ್ಗೆ 7.30 ಸುಮಾರಿಗೆ ಕುಟ್ಟ ಬಸ್ ನಿಲ್ದಾಣದಲ್ಲಿ ಕುಟ್ಟದಿಂದ ಹೊರಡುವ ರಸ್ತೆ ಸಾರಿಗೆ ಬಸ್ ಹಾಗೂ ಖಾಸಗಿ ಬಸ್ ಸಿಬ್ಬಂದಿ ನಡುವೆ ಬಸ್ ಹೊರಡುವ ಸಮಯದ ವಿಚಾರದಲ್ಲಿ ಹೊಡೆದಾಟ ನಡೆದಿದೆ.