ಗೋಣಿಕೊಪ್ಪಲು,ಜು.7: ಇಂದು ಬೆಳಗ್ಗಿನ ಜಾವ ಮೂರುಗಂಟೆ ಸುಮಾರಿಗೆ ಕೇಂಬುಕೊಲ್ಲಿ ಕುಟ್ಟ ಮಾರ್ಗ ಕೇರಳದ ತೋಲ್ಪಟ್ಟಿ ಕಡೆಗೆ 8 ಜಾನುವಾರುಗಳನ್ನು ಕಾಲ್ನಡಿಗೆಯಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭ ಸಾರ್ವಜನಿಕರು ಹಾಗೂ ಪೆÇಲೀಸರ ಜಂಟಿ ಕಾರ್ಯಾಚರಣೆ ಮೂಲಕ ಓರ್ವ ಆರೋಪಿಯನ್ನು ಬಂಧಿಸಿದ್ದು, ಮೂವರು ಆರೋಪಿಗಳು ಪರಾರಿ ಯಾಗಿದ್ದಾರೆ.
ಕೇರಳದ ಕಸಾಯಿಖಾನೆಗೆ ಕುಟ್ಟ ಗೇಟ್ ಮೂಲಕ ನಿರಂತರ ಜಾನುವಾರು ಸಾಗಾಟದ ಆರೋಪ ಇದ್ದು, ಇಂದು ಬೆಳಗ್ಗಿನ ಜಾವ ಹಿಂದೂ ಜಾಗರಣ ವೇದಿಕೆ, ಆರ್ಎಸ್ಎಸ್ ಕಾರ್ಯಕರ್ತರು ಜಾನುವಾರು ಸಾಗಾಟವಾಗುತ್ತಿದ್ದ ಬಗ್ಗೆ ಖಚಿತ ಸುಳಿವನ್ನು ಕುಟ್ಟ ಪೆÇಲೀಸರಿಗೆ ನೀಡಿದರೆನ್ನಲಾಗಿದೆ.
ಜಾಯ್ ಅಯ್ಯಪ್ಪ, ಸುನೀಶ್, ಹರೀಶ, ರವಿ ಮುಂತಾದವರು ಕಾರ್ಯಾಚರಣೆ ತಂಡದಲ್ಲಿದ್ದರೆನ್ನಲಾಗಿದ್ದು, ವಾಹನ ಒಂದರ ಮೂಲಕ ಗೋವುಗಳನ್ನು ಕೇಂಬುಕೊಲ್ಲಿವರೆಗೆ ತಂದು ಬಳಿಕ ಕಾಲ್ನಡಿಗೆಯಲ್ಲಿ ಕೇರಳಕ್ಕೆ ಕೊಂಡೊಯ್ಯಲಾಗುತಿತ್ತು ಎನ್ನಲಾಗಿದೆ.
ಕುಟ್ಟ ಎಎಸ್ಐ ಚಂದ್ರಪ್ಪ, ಸಿಬ್ಬಂದಿಗಳಾದ ಹನೀಫ್, ಗಣೇಶ್, ಜಾಫ್ರಿ ಹಾಗೂ ಕುಟ್ಟಪ್ಪ ಅವರು ಆರೋಪಿ ಸಲೀಮ್ನನ್ನು ಬಂಧಿಸಲು ಯಶಸ್ವಿಯಾದರೂ ಇನ್ನುಳಿದ ಶರವಣ, ಮುಸ್ತಾಫಾ ಹಾಗೂ ಆನಂದ್ಕುಮಾರ್ ಪರಾರಿಯಾದರು ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.