ಮಡಿಕೇರಿ, ಜು. 7: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾಗಿ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಗಳ ಅರ್ಥ ಸದಸ್ಯರಾಗಿ ಒಂದೂವರೆ ವರ್ಷಗಳಿಂದ ಸೇವೆ ಸಲ್ಲಿಸಿದ ಎಲ್.ಎನ್. ಕುಳ್ಳಯ್ಯ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಕಚೇರಿಯಲ್ಲಿ ವಿದಾಯ ಕೂಟವನ್ನು ಏರ್ಪಡಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ರಿಜಿಸ್ಟ್ರಾರ್ ಉಮರಬ್ಬ, ಸದಸ್ಯರಾದ ಬಿ.ಸಿ. ವಸಂತ, ಸದಾನಂದ ಮಾವಜಿ, ಮೋಹನ್ ದಾಸ್, ಡಾ. ಕೋರನ ಸರಸ್ವತಿ, ಅಣ್ಣಾಜಿ ಗೌಡ, ಸಿಬ್ಬಂದಿಗಳಾದ ಜ್ಯೋತಿ, ಕು. ಮಾನಸ, ಶೋಭ ಪಾಲ್ಗೊಂಡಿದ್ದರು.
ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರು ಅಕಾಡೆಮಿಯ ಪ್ರತಿ ಕೆಲಸ ಕಾರ್ಯಗಳಲ್ಲಿ ಕುಳ್ಳಯ್ಯ ಅವರು ನೀಡಿದ ಸಹಕಾರವನ್ನು ನೆನಪಿಸಿಕೊಂಡರು. ಅಧ್ಯಕ್ಷರೊಂದಿಗೆ ರಿಜಿಸ್ಟ್ರಾರ್ ಉಮರಬ್ಬ ಹಾಗೂ ಸದಸ್ಯರಾದ ಡಾ. ಮೇಚಿರ ಸುಭಾಷ್ ನಾಣಯ್ಯ, ಚೋವಂಡ ಬೋಪಯ್ಯ, ಮಾದೇಟಿರ ಬೆಳ್ಯಪ್ಪ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.