ಮೂರ್ನಾಡು, ಜು. 7: ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ನೂತನ ಅಧ್ಯಕ್ಷರಾಗಿ ಮಹಾಭಲೇಶ್ವರ ಭಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಯಾಗಿ ಮೋಹನ್ ರಾಜ್, ಉಪಾಧ್ಯಕ್ಷರಾಗಿ ವೇದವ್ಯಾಸ ಮತ್ತು ಲಲಿತಾ ಹರಿನಾರಾಯಣ ಖಜಾಂಚಿಯಾಗಿ ಮುರಳಿ ಇಂದು ನಡೆದ ಸಂಘದ ಮಹಾಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿ ರಾಮ್ ಭಟ್, ಶ್ರೀಶಕುಮಾರ್, ವೇಣುಗೋಪಾಲ್, ಶ್ರೀನಿವಾಸ, ಜಿತೇಂದ್ರ, ಶ್ರೀನಿವಾಸ ರವಿ ಕಲ್ಲೂರಾಯ, ವಿಜಯ ಕುಮಾರ್ ಮತ್ತು ಶಾರದ ನೇಮಕಗೊಂಡಿದ್ದಾರೆ.
ಸಂಘದ ವಾರ್ಷಿಕ ಮಹಾಸಭೆಯು ಸಂಘದ ಸಂಚಾಲಕ ರಾಮ್ ಭಟ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಬಲಮುರಿಯ ಶ್ರೀ ಕಾವೇರಿ ಕಣ್ವಮುನೀಶ್ವರ ಧಾರ್ಮಿಕ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಮಹಾಸಭೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ನಾಗೇಶ್ ಕಾಲೂರು ತುಳಸಿ ಗಿಡ ನೆಡುವದರೊಂದಿಗೆ ಉದ್ಘಾಟಿಸಿ, ಮಾತನಾಡಿ, ಬ್ರಾಹ್ಮಣ ಸಮಾಜದ ಅಭಿವೃದ್ಧಿಗಾಗಿ ಸಂಘವು ಶ್ರಮಿಸುತ್ತಿದೆ. ಬ್ರಾಹ್ಮಣ ಸಮುದಾಯವು ಇತರೆ ಎಲ್ಲಾ ಸಮಾಜ ಬಾಂಧವರೊಂದಿಗೆ ಸಹಬಾಳ್ವೆಯ ಜೀವನ ನಡೆಸುತ್ತಿದ್ದಾರೆ. ಬ್ರಾಹ್ಮಣರು ತಮ್ಮ ಸಂಸ್ಕøತಿ ಆಚಾರ-ವಿಚಾರಗಳನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಸಂಘವು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಹಿತ್ಯಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಸಭೆಯ ವೇದಿಕೆಯಲ್ಲಿ ಪರಮೇಶ್ವರ ಕಲ್ಲೂರಾಯ, ರಾಮಕೃಷ್ಣ, ವಿಷ್ಣುಮೂರ್ತಿ, ವೇದವ್ಯಾಸ ಉಪಸ್ಥಿತರಿದ್ದರು. ಗಣಪತಿ ಹೋಮ ಮತ್ತು ಸತ್ಯನಾರಾಯಣ ಪೂಜೆ ಜರುಗಿತು. ರಾಧ ರವಿ ಪ್ರಾರ್ಥಿಸಿ, ತೇಜ ವೇಣುಗೋಪಾಲ್ ಸ್ವಾಗತಿಸಿದರು. ಸುಜಾತ ಮೋಹನ್ ವರದಿ ವಾಚಿಸಿ, ಸಾವಿತ್ರಿ ಹರೀಶ್ ಕಾರ್ಯಕ್ರಮ ನಿರೂಪಿಸಿ, ಕುಸುಮ ಶ್ರೀಪತಿ ವಂದಿಸಿದರು.