ಸುಂಟಿಕೊಪ್ಪ, ಜು. 7: ಸಮೀಪದ ಬೋಯಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ‘ಸ್ವಚ್ಛ ಭೀಮ್ ಯೋಜನೆ’ಯಡಿಯಲ್ಲಿ ಜಿಲ್ಲಾ ಅಂಚೆ ಕಚೇರಿಯ ವತಿಯಿಂದ ನೀಡಲಾದ ಉಚಿತ ಹೆಣ್ಣುಮಕ್ಕಳ ಶೌಚಾಲಯವನ್ನು ಇತ್ತೀಚೆಗೆ ವಿದ್ಯಾರ್ಥಿನಿ ಬಿ.ಎಂ. ಶಶಿಕಲಾ ಚಾಲನೆ ನೀಡಿ ಶಾಲೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಅಂಚೆ ಕಚೇರಿಯ ಜಿಲ್ಲಾ ಅಧೀಕ್ಷಕ ಎಸ್.ಆರ್. ನಾಗೇಂದ್ರ ಮಾತನಾಡಿ, ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಈ ಕಾರ್ಯವನ್ನು ಕೈಗೊಂಡಿದ್ದು ಇನ್ನು ಮುಂದೆÉ ಸಮಾಜಸೇವೆಯಲ್ಲಿ ಅಂಚೆ ಕಚೇರಿ ಮುಂದುವರಿಯಲಿದೆ. ಇದೇ ಯೋಜನೆಯಡಿಯಲ್ಲಿ ಬೋಯಿಕೇರಿಯಲ್ಲಿ ಸಾರ್ವಜನಿಕ ಬಸ್ಸು ತಂಗುದಾಣವನ್ನು ನವೀಕರಿಸಿ ಗ್ರಾಮಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ಅಂಚೆ ಕಚೇರಿಯ ನಿರೀಕ್ಷಕ ಹೆಚ್.ಎನ್. ದೀಪಕ್, ಬೋಯಿಕೇರಿ ಅಂಚೆ ಮಾಸ್ಟರ್ ಬಿ.ಆರ್. ರೇವತಿ, ಶಾಲಾ ಮುಖ್ಯ ಶಿಕ್ಷಕ ಹೆಚ್.ಆರ್. ರಾಜು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ್, ಗುತ್ತಿಗೆದಾರ ಎಂ.ಎ. ಅದ್ರಾಂ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.