ಗೋಣಿಕೊಪ್ಪಲು, ಜೂ. 22: ಮಡಿಕೇರಿ ಸಮೀಪ ಕರ್ಣಂಗೇರಿ ಅರಣ್ಯದ ಮೂಲಕ ಕೇವಲ 4 ವಿದ್ಯುತ್ ಗೋಪುರ ಮಾತ್ರ ಅಳವಡಿಸ ಬೇಕಾಗಿದ್ದು, ಅರಣ್ಯ ಇಲಾಖೆಗೆ ಸದರಿ ಜಾಗದ ಬಾಪ್ತು ರೂ. 34 ಲಕ್ಷ ಪಾವತಿಸಿ ವರ್ಷವಾ ಗಿದೆ. ಒಟ್ಟು ವೀರಾಜಪೇಟೆಯಿಂದ ಮಡಿಕೇರಿವರೆಗೆ 66 ಕೆ.ವಿ. ವಿದ್ಯುತ್ ಮಾರ್ಗ ಕೊಂಡೊಯ್ಯಲು 172 ವಿದ್ಯುತ್ ಗೋಪುರ ಅಳವಡಿಸುವ ಅಗತ್ಯವಿದ್ದು, ಉಳಿಕೆ ಕಾಮಗಾರಿ ಯನ್ನು ಮಾಡಲು ಕೆಪಿಟಿಸಿಎಲ್‍ಗೆ ಸಾಧ್ಯವಿತ್ತು ಎಂದು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ ನಿವೃತ್ತ ಅಭಿಯಂತರ ಬಿ.ಕೆ. ಕುಶಾಲಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನ ಸಭೆಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಮಡಿಕೇರಿ-ವೀರಾಜಪೇಟೆ 66 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಇದ್ದ ಅಡೆತಡೆ ಬಗ್ಗೆ ನೀಡಿದ್ದ ಮಾಹಿತಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬೆಂಗಳೂರು ಅರಣ್ಯ ಭವನದಲ್ಲಿ ಮೀಸಲು ಅರಣ್ಯ ಇತ್ಯಾದಿ ಸಂರಕ್ಷಿತ ಅರಣ್ಯ ಮಾರ್ಗದಲ್ಲಿ ವಿದ್ಯುತ್ ಲೇನ ನ್ನು ಕೊಂಡೊಯ್ಯುವ ಸಲುವಾಗಿಯೇ ಕಾರ್ಯನಿರ್ವಹಿ ಸುವ, ಮಾರ್ಗೋಪಾಯ ಕಂಡುಹಿಡಿಯುವ ನಿಟ್ಟಿನಲ್ಲಿ ಪ್ರಬಾರ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಒಬ್ಬರನ್ನು ನೇಮಕ ಮಾಡಲಾಗಿದೆ. ಅವರನ್ನು ಈವರೆಗೂ ಉದ್ದೇಶಿತ ಕಾಮಗಾರಿ ಅನುಷ್ಠಾನ ಕುರಿತಂತೆ ಸಂಪರ್ಕ ಮಾಡಿಲ್ಲ.

ಮಡಿಕೇರಿ-ಕರ್ಣಂಗೇರಿಯಲ್ಲಿ ಕೇವಲ ನಾಲ್ಕು ವಿದ್ಯುತ್ ಗೋಪುರ ಮಾತ್ರ ಅಳವಡಿಕೆ ಮಾಡಬೇಕಾಗಿದ್ದು, ಹಳೆಯ 33 ಕೆ.ವಿ. ವಿದ್ಯುತ್ ಮಾರ್ಗದಲ್ಲಿಯೇ ನೂತನ ಮಾರ್ಗ ಅಳವಡಿಕೆ ಮಾಡಲಿರುವದರಿಂದ ಈ ಒಂದು ಕೆಲಸ ಯಾವತ್ತೋ ಆಗುತ್ತಿತ್ತು. ಇದೀಗ ಶೀಘ್ರ ಟೆಂಡರ್ ಕರೆದು ವೀರಾಜಪೇಟೆಯಿಂದ ಕಾಮಗಾರಿ ಯನ್ನು ತುರ್ತು ಆರಂಭಿಸಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.

ತಮ್ಮ ಅವಧಿಯಲ್ಲಿ ಪೆÇನ್ನಂಪೇಟೆ, ವೀರಾಜಪೇಟೆ ಹಾಗೂ ಕುಶಾಲನಗರ, ಮಡಿಕೇರಿ 66 ಕೆ.ವಿ. ವಿದ್ಯುತ್ ಮಾರ್ಗವನ್ನು ಸಮರೋಪಾದಿಯಲ್ಲಿ ಮುಗಿಸಲಾ ಗಿತ್ತು. ಕುಶಾಲನಗರ-ಹೂಟಗಳ್ಳಿ 120 ಕೆ.ವಿ. ವಿದ್ಯುತ್ ಮಾರ್ಗ ಸಂದರ್ಭ ಬೈಲುಕುಪ್ಪೆ ಅರಣ್ಯ ಮಾರ್ಗದಲ್ಲಿ ವಿದ್ಯುತ್ ಗೋಪುರ ಅಳವಡಿಸಿದಾಗ ಅರಣ್ಯ ಇಲಾಖೆ ತನ್ನ ವಿರುದ್ಧ ಪ್ರಕರಣ ದಾಖಲಿಸಿತ್ತು, ತದನಂತರ ಸುಮಾರು ರೂ. 1 ಕೋಟಿ ಮೊತ್ತದ ಠೇವಣಿ ಇಟ್ಟು ಮಾರ್ಗಕ್ಕೆ ತಿಂಗಳ ಅವಧಿಯಲ್ಲಿ ಅನುಮತಿ ಪಡೆಯಲಾಗಿತ್ತು.

ಇದೀಗ 2 ನೇ ಹಂತದ ಅನುಮತಿಯನ್ನು ಮಡಿಕೇರಿ ಅರಣ್ಯ ಇಲಾಖೆಯಿಂದ ಹೊಂದುವದು ಕಷ್ಟಸಾಧ್ಯವಲ್ಲ. ವೀರಾಜಪೇಟೆಯಿಂದ ವಿದ್ಯುತ್ ಗೋಪುರ ಅಳವಡಿಸುವ ಕಾಮಗಾರಿಯನ್ನು ಶೀಘ್ರ ಆರಂಭಿಸಿದ್ದಲ್ಲಿ ನಂತರ ಕರ್ಣಂಗೇರಿ-ಮಡಿಕೇರಿ ವಿದ್ಯುತ್ ಉಪಕೇಂದ್ರ ಸಂಪರ್ಕಕ್ಕೆ ಅಗತ್ಯವಿರುವ 4 ಗೋಪುರಗಳ ನಿರ್ಮಾಣಕ್ಕೆ ಅನುಮತಿ ಪಡೆಯಲು ಸಾಧ್ಯವಿದೆ ಎಂದು ಕುಶಾಲಪ್ಪ ತಿಳಿಸಿದ್ದಾರೆ.

ಸುಮಾರು 6 ವರ್ಷ ಕಾಮಗಾರಿ ತಡವಾಗಿರುವ ಹಿನ್ನೆಲೆ ಸರ್ಕಾರದ ಬೊಕ್ಕಸಕ್ಕೆ ಹಣ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

- ಟಿ.ಎಲ್.ಎಸ್.