ಮಡಿಕೇರಿ, ಜೂ. 22: ಕೇಂದ್ರ ಸರಕಾರ ಭಾರತದ ಪ್ರತಿಯೊಬ್ಬ ಪ್ರಜೆಯ ಪ್ರಮುಖ ಆರ್ಥಿಕ ವ್ಯವಹಾರಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿಸಲು ನಿರ್ಬಂಧ ಹೆಣೆದಿದ್ದು ಸರಕಾರಕ್ಕೆ ಬರುವ ಯಾವದೇ ಆದಾಯ ಸೋರಿ ಹೋಗದಂತೆ ಬೆಣೆ ಹಾಕಲು ಸರ್ವ ಸಿದ್ಧತೆ ನಡೆಸಿದೆ. ಈ ಹಿಂದೆ ಬ್ಯಾಂಕ್‍ಗಳಿಗೆ ಪಾನ್ ಕಾರ್ಡ್ ಕಡ್ಡಾಯವಿತ್ತು. ಅನೇಕರು ಒಂದಕ್ಕಿಂತ ಅಧಿಕ ಅಂದರೆ ನಕಲಿ ಕಾರ್ಡ್‍ಗಳನ್ನು ವಿವಿಧ ಬ್ಯಾಂಕ್‍ಗಳಿಗೆ ನೀಡಿ ಖಾತೆಗಳನ್ನು ಹೊಂದಿದ್ದನ್ನು ಗಮನಿಸಿದ ಸರಕಾರ ಪಾನ್ ಕಾರ್ಡ್ ಗಳಿಗೆ ಮಣೆ ಹಾಕುವ ನಿಯಮಕ್ಕೆ ತಿಲಾಂಜಲಿಯಿತ್ತಿದೆ. ಪ್ರಜೆಗಳ ವ್ಯವಹಾ ರವನ್ನು ದೂರದಿಂದಲೇ ನಿಯಂತ್ರಿ ಸಲು ಬೆಣ್ಣೆ ಹಾಕುವ ಅಗತ್ಯವಿಲ್ಲ ಎಂದು ನಿರ್ಧರಿಸಿ ಆಧಾರ್ ಕಾರ್ಡ್ ಎಂಬ ದೊಣ್ಣೆ ಬೀಸಿದೆ. ಎಲ್ಲವೂ ಆಧಾರ್ ಮಯ, ಎಲ್ಲ ವ್ಯವಹಾರ ಗಳಿಗೂ ಆಧಾರ್ ಕಡ್ಡಾಯ ಎಂಬ ಘೋಷಣೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಅಣಿಯಾಗಿದೆ. ಇದರ ಪಾಲನೆಗೆ ಯಾವದೇ ಪ್ರಜೆ ತಪ್ಪಿದÀಲ್ಲಿ ಅಂತಹವರ ಭವಿಷ್ಯ ಖಂಡಿತ ಅಯೋಮಯ. ಏಕೆಂದರೆ ಆಧಾರ್ ಸಂಪರ್ಕ ಕಲ್ಪಿಸದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬ್ರಹ್ಮಾಸ್ತ್ರ ಪ್ರಯೋಗದ ಮುನ್ಸೂಚನೆಯನ್ನೂ ಸರಕಾರ ಸ್ಪಷ್ಟವಾಗಿಯೇ ನೀಡಿದೆ.

ಡಿ. 31 ರ ಒಳಗೆ ಎಲ್ಲ ಬ್ಯಾಂಕ್ ಖಾತೆಗಳನ್ನೂ ಆಧಾರ್ ಸಂಪರ್ಕಕ್ಕೆ ಒಳಪಡಿಸಬೇಕು. ಪ್ರತಿ ಬಾರಿ ರೂ. 50 ಸಾವಿರಕ್ಕಿಂತ ಅಧಿಕ ಮೊತ್ತದ ಬ್ಯಾಂಕ್ ವ್ಯವಹಾರಕ್ಕೂ ಆಧಾರ್ ಸಂಖ್ಯೆ ನಮೂದಿಸುವದು ಕಡ್ಡಾಯ. ಹೊಸ ಬ್ಯಾಂಕ್ ಖಾತೆಗಳು ತೆರೆಯುವಾಗಲೂ ಆಧಾರ್ ಸಂಖ್ಯೆ ನೀಡಲೇಬೇಕು. ದೇಶದಲ್ಲಿ 10.52 ಲಕ್ಷದಷ್ಟು ನಕಲಿ ಪಾನ್ ಕಾರ್ಡ್ ಪತ್ತೆಯಾಗಿರುವದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ಸಮರ್ಥಿಸಿಕೊಂಡಿದೆ.

ಮೊಬೈಲ್ ಸಂಖ್ಯೆಯ ಅಗತ್ಯತೆ

ವರ್ತಕರು ಮತ್ತಿತರರ ಗಮನಕ್ಕೆ

ಈ ನಡುವೆ ಆಧಾರ್ ಕಾರ್ಡ್‍ಗಳಲ್ಲಿ ಮೊಬೈಲ್ ಸಂಖ್ಯೆ ನಮೂದಿಸದಿದ್ದಲ್ಲಿ ಕೂಡಲೇ ನಮೂದಿಸಿಕೊಳ್ಳ್ಳುವಂತೆ ಸಂಬಂಧಿತ ಅಧಿಕಾರಿಗಳು ಸಲಹೆಯಿತ್ತಿದ್ದಾರೆ. ಪ್ರಸಕ್ತ ಮೊಬೈಲ್ ಸಂಖ್ಯೆಯನ್ನು ಉಚಿತವಾಗಿ ಸೇರ್ಪಡೆಗೊಳಿಸಿಕೊಳ್ಳಲು ಅವಕಾಶ ವಿರುವದಾಗಿ ಕೊಡಗಿನ ಅಧಿಕಾರಿಗಳು ನಾಗರಿಕರ ಗಮನಕ್ಕೆ ತಂದಿದ್ದಾರೆ. ಈ ವ್ಯವಸ್ಥೆಯಿಂದ ವೃತ್ತಿ ನಿರತ ಸಹಿತ ಜಿಲ್ಲೆಯ ಎಲ್ಲ ವರ್ತಕ ಸಮುದಾಯ, ಉದ್ಯಮಿಗಳು ಸೇರಿದಂತೆ ಜಿಲ್ಲೆಯ ಕೃಷಿಕರು, ಬೆಳೆಗಾರರು ಮತ್ತಿತರರಿಗೆ ಮುಂದೆ ಜಾರಿಗೊಳ್ಳಲಿರುವ ಜಿ.ಎಸ್.ಟಿ ತೆರಿಗೆ ಪದ್ಧತಿಯಡಿ ದಾಖಲಾತಿ ಅರ್ಜಿ ಹೊಂದಿಕೊಳ್ಳಲು ನೆರವಾಗಲಿದೆ ಎಂದು ಇವರುಗಳು ಸೂಚನೆ ಯಿತ್ತಿದ್ದಾರೆ. ಜುಲೈ ತಾ. 1 ರಿಂದ ಜಿ.ಎಸ್.ಟಿ. ತೆರಿಗೆ ವ್ಯವಸ್ಥೆ ಜಾರಿ ಗೊಳ್ಳಲಿದೆ. ಮುಖ್ಯವಾಗಿ ಡಿಜಿಟಲ್ ಮೂಲ ಸಹಿಗಾಗಿ (ಹಸ್ತಾಕ್ಷರ) ಅಥವ ಹೆಬ್ಬೆಟ್ಟು ಮುದ್ರೆಗೆ ಮೊಬೈಲ್ ಸಂಖ್ಯೆಯಿಂದ ಅನುಕೂಲವಾಗಲಿದೆ. ಈಗಾಗಲೇ ಈ ಪ್ರಕ್ರಿಯೆಯಿಂದ ಆಧಾರ್ ಕಾರ್ಡ್‍ಗೆ ಮೊಬೈಲ್ ಸಂಖ್ಯೆ ದಾಖಲಿಸಲು ಜಿಲ್ಲಾಧಿಕಾರಿ ಕಚೇರಿಯ “ಸ್ಪಂದನ ಕೇಂದ್ರ”ದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಅಲ್ಲದೆ, ತಾಲೂಕು ಕಚೇರಿಗಳಲ್ಲಿ ಮತ್ತು ಹೋಬಳಿ ಕೇಂದ್ರಗಳ ನಾಡು ಕಚೇರಿಗಳಲ್ಲಿನ ಅಟಲ್ ಜೀ ಜನಸ್ನೇಹೀ ಕೇಂದ್ರಗಳಲ್ಲಿ ಜಿಲ್ಲೆಯಾದ್ಯಂತ ಆಧಾರ್ ಕಾರ್ಡ್‍ಗಳಲ್ಲಿ ಮೊಬೈಲ್ ಸಂಖ್ಯೆ ನಮೂದಿಸಲು ಜನತೆಗೆ ಮುಕ್ತಾವಕಾಶ ಕಲ್ಪಿಸಲಾಗಿದೆ.

ಜುಲೈ 1 ರಿಂದ ಜಿ.ಎಸ್.ಟಿ ತೆರಿಗೆ ಪದ್ಧತಿಯನ್ವಯ ನೊಂದಾಯಿಸಿ ಕೊಳ್ಳ್ಳುವ ಮುನ್ನ ನಾಗರಿಕರು-ಪ್ರಮುಖವಾಗಿ ವಾಣಿಜ್ಯೋದ್ಯಮಿಗಳು ತಮ್ಮ ಆಧಾರ್ ಕಾರ್ಡ್‍ಗಳಿಗೆ ಮೊಬೈಲ್ ಸಂಖ್ಯೆ ಸಹಿತ ಡಿಜಿಟಲ್ ಸಹಿ ಮೂಲಕ ಸರಿಪಡಿಸಿಕೊಂಡರೆ ವಾಣಿಜ್ಯ, ವೃತ್ತಿ, ಆದಾಯ ತೆರಿಗೆ ಪಾವತಿ ಅಥವ ಹೊಸ ನೋಂದಣಿ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಪ್ಪಿದಲ್ಲಿ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್‍ಗೆ ಡಿಜಿಟಲ್ ಸಹಿ ರಹಿತವಾಗಿ ಇಲಾಖಾಧಿಕಾರಿಗಳಿಗೆ ಜಿ.ಎಸ್.ಟಿ.ಗಾಗಿ ವ್ಯಾಟ್ ಪದ್ಧತಿಯಿಂದ ವರ್ಗಾವಣೆಗೊಳಿಸಲು ಹಾಗೂ ಹೊಸ ನೋಂದಣಿ ಮಾಡಲು ಅಡಚಣೆ ಹಾಗೂ ವಿಳಂಬ ತಲೆದೋರಲಿದೆ ಎಂದು ಮಾಹಿತಿಯಿತ್ತಿದ್ದಾರೆ. ಈ ದಿಸೆಯಲ್ಲಿ ನಾಗರಿಕರು, ಮುಖ್ಯವಾಗಿ ವಾಣಿಜ್ಯೋದ್ಯಮಿಗಳು ಜಾಗೃತರಾಗಿ ಕೂಡಲೇ ಈ ಬಗ್ಗೆ ಗಮನ ಹರಿಸಬೇಕಾಗಿದೆ.

ತೆರಿಗೆಗೂ ಕಡ್ಡಾಯ

ವರಮಾನ ತೆರಿಗೆ, ನೂತನ ಜಿ.ಎಸ್.ಟಿ ತೆರಿಗೆಗೂ ಆಧಾರ್ ಕಾರ್ಡ್ ಕಡ್ಡಾಯವಾಗಲಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪೊಂದ ರಲ್ಲಿ ಈಗಾಗಲೇ ಆಧಾರ್ ಕಾರ್ಡ್ ಹೊಂದಿರುವವರು ಮಾತ್ರ ತೆರಿಗೆ ಪಾವತಿ ಸಂದರ್ಭ ಆಧಾರ್ ಸಂಖ್ಯೆ ನಮೂದಿಸಬೇಕು. ಆಧಾರ್ ಕಾರ್ಡ್ ಇನ್ನೂ ಹೊಂದಿಕೊಳ್ಳದಿದ್ದವರು ಜುಲೈ 1 ರಿಂದ ಪಾನ್ ಕಾರ್ಡ್ ಸಂಖ್ಯೆ ನಮೂದಿಸಿ ತೆÀರಿಗೆ ಪಾವತಿಸಬಹುದು ಎಂದು ಸ್ಪಷ್ಟಪಡಿಸಿತ್ತು. ಆದರೆ, ಸರಕಾರ ಆ ಬಳಿಕ ಬ್ಯಾಂಕಿಂಗ್ ವ್ಯವಹಾರಕ್ಕೆ ಆಧಾರ್ ನೋಂದಾವಣೆ ಕಡ್ಡಾಯ ಎಂದು ಆದೇಶ ಹೊರಡಿಸಿ ರುವದರಿಂದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಪಾನ್ ಕಾರ್ಡ್‍ಗೆ ಅವಕಾಶವಿದ್ದರೂ ತೆÀರಿಗೆದಾರರು ಬ್ಯಾಂಕಿಂಗ್ ವ್ಯವಹಾರದಲ್ಲಿರುವದರಿಂದ ತಮ್ಮ ಬ್ಯಾಂಕ್ ಖಾತೆಗಳಿಗೋಸ್ಕÀರ ವಾದರೂ ಆಧಾರ್ ಕಾರ್ಡ್ ಹೊಂದಿ ಕೊಳ್ಳಲೇ ಬೇಕಾಗಿದೆ. ಸರಕಾರದ ಜಾಣ್ಮೆಯ ನಡೆಯಿಂದ ಸುಪ್ರೀಂ ಕೋರ್ಟ್‍ನ ಆದೇಶವನ್ನು ಉಲ್ಲಂಘಿ ಸದೆಯೇ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ ಮಾಡುವದರ ಮೂಲಕ ತೆರಿಗೆ ಪಾವತಿಗೂ ಪರೋಕ್ಷವಾಗಿ ಕಡ್ಡಾಯದ ಬರೆ ಎಳೆದಿದೆ. ಏಕೆಂದರೆ ನಾಗರಿಕರು ಅದರಲ್ಲೂ ಮುಖ್ಯವಾಗಿ ವಾಣಿ ಜ್ಯೋದ್ಯಮಿಗಳು ಬ್ಯಾಂಕ್ ವ್ಯವಹಾರ ವಿಲ್ಲದಿರುವವರೇ ಅತಿ ವಿರಳವೆನ್ನ ಬಹುದು. ತೆರಿಗೆ ಪಾವತಿಸಲು ಕೂಡ ಬ್ಯಾಂಕ್ ನೆರವು ಈ ಮಂದಿಗೆ ಅನಿವಾರ್ಯವಾಗಿದೆ.

ದುಷ್ಪರಿಣಾಮಗಳು

ಆಧಾರ್ ಕಾರ್ಡ್ ಕಡ್ಡಾಯದಿಂದ ಸರಕಾರದ ಬೊಕ್ಕಸಕ್ಕೆ ತೆರಿಗೆ ಸಕ್ರಮವಾಗಿ ಬರುವದು, ಆದಾಯ ಹೆಚ್ಚಾಗುವದು, ಕಪ್ಪು ಹಣಕ್ಕೆ ಕಡಿವಾಣ-ಇದೆಲ್ಲ ಸಮರ್ಥನೆಗಳಿವೆ. ಆದರೆ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರತಿಯೋರ್ವ ಪ್ರಜೆಯ ಇಡೀ “ಜಾತಕ” ಅಂದರೆ ಆತನ ಆರ್ಥಿಕ ವಹಿವಾಟು, ವೈಯಕ್ತಿಕ ಚಹರೆ, ಕೌಟುಂಬಿಕ ವಿವರಗಳು ಸಾರ್ವತ್ರಿಕವಾಗಿ ಆಧಾರ್ ಮೂಲಕ ಬಹಿರಂಗಗೊಳ್ಳುವದು ಅಪಾಯಕಾರಿ ಯಾಗಬಲ್ಲುದು ಎಂಬದು ಬಹು ಮಂದಿ ತಜ್ಞರ ವಾದ. ಇದರಿಂದಾಗಿ ಒಬ್ಬರ ವ್ಯವಹಾರಕ್ಕೆ ಮತ್ತೊಬ್ಬರು ನುಗ್ಗಿ ದುರುಪಯೋಗ ಗೊಳಿಸಿಕೊಳ್ಳಬಹುದು ಎಂಬ ಭೀತಿ ಈಗಲೇ ಕಾಡುತ್ತಿದೆ. ಅಲ್ಲದೆ, ಅಂತರ್ಜಾಲ ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆಗಳನ್ನು “ಹ್ಯಾಕ್” ಮಾಡುವ ವರಿಗೂ ಇನ್ನೂ ಹೆಚ್ಚಿನ ಅನುಕೂಲ ವಾಗಿ ಪ್ರಜೆಗಳಿಗೆ ತಮ್ಮ ಬೆವರಿನ ಶ್ರಮದ ಹಣ ಕಳೆದುಕೊಳ್ಳುವಂತಹ ಆತಂಕದ ದಿನಗಳು ಎದುರಾಗ ಬಹುದು ಎಂಬದು ಈ ತಜ್ಞರ ವಿಮರ್ಶೆಯಾಗಿದೆ. ಅಲ್ಲದೆ, ಆಧಾರ್ ಕಾರ್ಡ್‍ಗಳ ಸಂಪೂರ್ಣ ನಿಯಂತ್ರಣ ಸದ್ಯದ ಮಟ್ಟಿಗೆ ಖಾಸಗಿ ವಲಯದ “ಭಾರತೀಯ ವಿಶಿಷ್ಟÀ ಗುರುತಿನ ಪ್ರಾಧಿಕಾರ” (UIಆಂI) ಹಿಡಿತ ದಲ್ಲಿರುವದರಿಂದÀ ಇದರ ಆಡಳಿತ ನಡೆಸುವ ಮಂದಿ ಅನಿಯಂತ್ರಿತವಾಗಿ ದುರುಪಯೋಗಗೊಳಿಸಿಕೊಳ್ಳುವ ಭಯವೂ ತಜ್ಞರ ಅಭಿಪ್ರಾಯದಲ್ಲಿ ಈಗಾಗಲೇ ಮೂಡಿಬಂದಿದೆ; ಗೊಂದಲ ಮನೆ ಮಾಡಿದೆ. ಆದರೆ, ಕೇಂದ್ರ ಸರಕಾರ ಮಾತ್ರ ತನ್ನ ನಿರ್ಧಾರ ಬದ್ಧತೆಯಲ್ಲಿ ಅಚಲವಾಗಿರುವದು ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವದಂತೂ ನಿಜ.

- “ಶ್ರೀಸುತ”;”ಚಕ್ರವರ್ತಿ”