ಮಡಿಕೇರಿ, ಜೂ. 22: ಬಂಟ್ವಾಳ ಬಳಿಯ ಕಲಾಯಿ ಎಸ್‍ಡಿಪಿಐ ವಲಯ ಅಧ್ಯಕ್ಷ ಅಶ್ರಫ್ ಹತ್ಯೆಯನ್ನು ಖಂಡಿಸಿ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಎಸ್‍ಡಿಪಿಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ ರಿಕ್ಷಾ ಚಾಲಕ ಅಶ್ರಫ್ ಹತ್ಯೆಯನ್ನು ಖಂಡಿಸಿದರು. ಕೊಲೆಗಡು ಕರನ್ನು ಕೂಡಲೇ ಯುಎಸಿಎ ಕಾಯ್ದೆ ಯಡಿ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕೊಲೆಗಡುಕರಿಗೆ ಸೂಕ್ತ ಶಿಕ್ಷೆಯಾಗದಿರುವದೇ ಆಗಾಗ ಇಂತಹ ಘಟನೆ ನಡೆಯಲು ಕಾರಣವಾಗಿದೆ ಎಂದು ಆರೋಪಿಸಿ ದರು. ಅಶ್ರಫ್ ಕುಟುಂಬಕ್ಕೆ ಸರ್ಕಾರ ರೂ. 25 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಉಪಾಧ್ಯಕ್ಷ ಲಿಯಾಕತ್ ಆಲಿ, ಕೋಶಾಧಿಕಾರಿ ಇಬ್ರಾಹಿಂ, ಕಾರ್ಯದರ್ಶಿ ಬಶೀರ್ ಆಲಿ, ಪಿಎಫ್‍ಐ ಜಿಲ್ಲಾಧ್ಯಕ್ಷ ಹ್ಯಾರೀಸ್, ನಗರಸಭಾ ಸದಸ್ಯರಾದ ಪೀಟರ್, ಮನ್ಸೂರ್, ಪ್ರಮುಖರಾದ ನೂರುದ್ದೀನ್, ಶೌಕತ್ ಆಲಿ, ಶಫಿ ಹಾಗೂ ಇನ್ನಿತರರು ಇದ್ದರು.