ಮಡಿಕೇರಿ, ಜೂ. 21: ಮೈಸೂರು ಆಂಗ್ಲ ಭಾಷಾ ಸಾಹಿತ್ಯ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಆಂಗ್ಲ ಭಾಷಾ ಸಾಹಿತ್ಯ ಸಮ್ಮೇಳನದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ಡಾ. ಎ.ಎಸ್. ಪೂವಮ್ಮ, ಪ್ರಾದ್ಯಾಪಕಿ ಪ್ರೊ. ಎಂ.ಎಸ್. ಭಾರತಿ, ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾದ್ಯಾಪಕಿ ಕೆ.ಜಿ. ವೀಣಾ ಹಾಗೂ ಐಚ್ಚಿಕ ಆಂಗ್ಲಭಾಷಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೈಸೂರಿನ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆದ ಸಮ್ಮೇಳನದಲ್ಲಿ ಖ್ಯಾತ ಸಾಹಿತಿ, ಕಾದಂಬರಿಕಾರ ಎಸ್.ಎಲ್. ಬೈರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮುಖ್ಯ ಭಾಷಣ ಮಾಡಿದರು. ಇತಿಹಾಸಕಾರ ರಾಮಚಂದ್ರ ಗುಹ, ಕಾದಂಬರಿಗಾರ್ತಿ ಶಶಿ ದೇಶಪಾಂಡೆ, ಕಾವೇರಿ ನಂಬಿಷನ್ ಇವರು ಆಂಗ್ಲ ಭಾಷೆಯ ಕುರಿತು ಸಂವಾದ ನಡೆಸಿದರು. ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಪ್ರೊ. ಪಟ್ಟಡ ಎ. ಪೂವಣ್ಣ ಪ್ರಮಾಣ ಪತ್ರ ವಿತರಿಸಿದರು.