* ನಾಪೋಕ್ಲು, ಜೂ. 6 : ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ವಿತರಣೆಯಾಗಬೇಕಿದ್ದ ವಿವಿಧ ಸೌಲಭ್ಯಗಳು ವಿತರಣೆಯಾಗದೇ ಬೆಳೆಗಾರರು ಸಮಸ್ಯೆ ಎದುರಿಸುವಂತಾಗಿದೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೋದಾಮು ಕಾಫಿಕಣ, ನೀರಾವರಿ ಸೌಲಭ್ಯ ಸೇರಿದಂತೆ ವಿವಿಧ ಬಗೆಯ ಸಹಾಯಧನಗಳನ್ನು ಬೆಳೆಗಾರರಿಗೆ ವಿತರಿಸದೆ ಎರಡು ವರ್ಷಗಳಿಂದ ಬೆಳೆಗಾರರು ಸಹಾಯಧನದ ನಿರೀಕ್ಷೆಯಲ್ಲಿದ್ದು ಕಂಗಾಲಾಗಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಕಾಫಿ ಬೆಳೆಗಾರರಿಗೆ ವಿತರಿಸಲು ಸುಮಾರು 25ಲಕ್ಷ ಸಹಾಯಧನ ಬಾಕಿ ಇದೆ. ಮಾತ್ರವಲ್ಲದೆ ಕಾಫಿ ತೋಟದ ಕೂಲಿ ಕಾರ್ಮಿಕರ ಹಾಗೂ ಸಣ್ಣಬೆಳೆಗಾರರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗದೆ ಬಡ ವಿದ್ಯಾರ್ಥಿಗಳು ಹಾಗೂ ಪೋಷಕರು ನಿರಾಶರಾಗಿದ್ದಾರೆ; ಕಾಫಿ ಸಂಶೋಧನಾ ಕೇಂದ್ರದಲ್ಲಿ ಬೆಳೆಗಾರರಿಗೆ ಲಭ್ಯವಿದ್ದ ವಿವಿಧ ಸೌಲಭ್ಯಗಳ (ಮಣ್ಣುಪರೀಕ್ಷೆ ಇತ್ಯಾದಿ) ಶುಲ್ಕವನ್ನು ವಿಪರೀತ ಏರಿಕೆ ಮಾಡಿ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಾಫಿ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರು ಸರ್ವತೋಮುಖ ಅಭಿವೃದ್ದಿಗೆ ಈ ಸಂಶೋಧನಾ ಕೇಂದ್ರ ಸ್ಥಾಪನೆಗೊಂಡಿರುವದರಿಂದ ಕಾಫಿ ಮಂಡಳಿಯ ನೂತನ ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸಬೇಕಿದೆ. ನೂತನ ಮಂಡಳಿ ರಚನೆಗೊಂಡ ಬಳಿಕ ಮೊದಲ ಸಭೆ ತಾ. 8ರಂದು ಬೆಂಗಳೂರಿನಲ್ಲಿ ಜರುಗಲಿz್ದÀು ಈ ಸಂದರ್ಭ ನೂತನ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಕೊಡಗಿನ ಮಂಡಳಿ ಸದಸ್ಯರು ಗಮನ ಹರಿಸಿ 2ನೇ ಪಂಚವಾರ್ಷಿಕ ಯೋಜನೆ ಮಾರ್ಚ್ 31ರಂದು ಮುಕ್ತಾಯಗೊಂಡಿದೆ. ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನೂತನ ಸದಸ್ಯರು ಕಾರ್ಯೋನ್ಮುಖರಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.