ಮಡಿಕೇರಿ ಮೇ 18 : ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್‍ನ ಆಶ್ರಯದಲ್ಲಿ ವಾಸವಿ ಯುವತಿಯರ ಸಂಘದ ವತಿಯಿಂದ ಸಾರ್ವಜನಿಕರಿಗಾಗಿ ‘ಸಿರಿಧಾನ್ಯ ಆರೋಗ್ಯಕ್ಕೆ ವರದಾನ’ ಎಂಬ ವಿಚಾರದ ಕುರಿತು ಚಿಂತನ, ಮಂಥನ ಕಾರ್ಯಕ್ರಮದೊಂದಿಗೆ ಆರೋಗ್ಯ ಶಿಬಿರವನ್ನು ತಾ. 21ರಂದು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಬಿ.ಎ. ರಶ್ಮಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕುಶಾಲನಗರದ ತಾವರೆಕೆರೆ ಬಳಿಯ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಚಿಂಥನ ಮಂಥನ ಕಾರ್ಯಕ್ರಮ ನಡೆಯಲಿದೆ.

ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರಿನ ಆಹಾರ ತಜ್ಞ ಡಾ.ಖಾದರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವೇಕಾನಂದ ಕಾಲೇಜಿನ ಅಧ್ಯಕ್ಷ ಶಂಭುಲಿಂಗಪ್ಪ, ಯೋಗ ಶಿಕ್ಷಕÀ ಕೆ.ಜಿ.ಗೋಪಾಲಕೃಷ್ಣ, ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷೆ ಆಶಾ ಅಶೋಕ್, ವಾಸವಿ ಯುವಜನ ಸಂಘದ ಅಧ್ಯಕ್ಷ ವಿ.ಆರ್. ಮಂಜುನಾಥ್, ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್.ರವಿಕುಮಾರ್ ಉಪಸ್ಥಿತರಿರುವರು.

ಕಾರ್ಯಕ್ರಮವು ಆರ್ಯವೈಶ್ಯ ಮಹಿಳಾ ಮಂಡಳಿ, ವಾಸವಿ ಯುವಜನ ಸಂಘ, ವಾಸವಿ ಬಾಲಕರ ಸಂಘ, ವಾಸವಿ ಬಾಲಕಿಯರ ಸಂಘ, ಕನ್ನಿಕಾ ವಿವಿದೋದ್ಧೇಶ ಸಹಕಾರ ಸಂಘದ ಸಹಯೋಗದೊಂದಿಗೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ : 80500 74414, 96863 58374

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಶಿಲ್ಪಾ ಪ್ರಶಾಂತ್, ಉಪಾಧ್ಯಕ್ಷೆ ಕುಸುಮಾ ಹಾಗೂ ನಿರ್ದೇಶಕಿ ದಿವ್ಯಾ ಉಪಸ್ಥಿತರಿದ್ದರು.