ಮೂರ್ನಾಡು, ಮೇ. 17 : ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ವತಿಯಿಂದ ಆಯೋಜಿಸಲಾದ 16ನೇ ವರ್ಷದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ಕಾಂತೂರು ಮೂರ್ನಾಡು ಎಸ್‍ಬಿಸಿಸಿ ತಂಡ ಜೈಭೀಮ್ ಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಮೂರ್ನಾಡು ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ ಮೂರು ದಿನಗಳು ನಡೆದ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಕಾಂತೂರು ಮೂರ್ನಾಡು ಎಸ್‍ಬಿಸಿಸಿ ತಂಡ ಅಂಚಿಕಾಡು ಇಲೆವೆನ್ ತಂಡವನ್ನು 27 ರನ್‍ಗಳ ಅಂತರದಿಂದ ಸೋಲಿಸಿ ವಿನರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಕಾಂತೂರು ಮೂರ್ನಾಡು ಎಸ್‍ಬಿಸಿಸಿ ತಂಡ ಮೊದಲು ಬ್ಯಾಟ್ ಆಯ್ಕೆ ಮಾಡಿಕೊಂಡು ನಿಗದಿತ 6ಓವರ್‍ಗೆ 4ವಿಕೆಟ್ ಕಳೆದುಕೊಂಡು 91 ರನ್‍ಗಳಿಸಿತು. ನಂತರ ಬ್ಯಾಟ್ ಮಾಡಿದ ಅಂಚಿಕಾಡು ಇಲೆವೆನ್ ತಂಡ 6ಓವರ್‍ಗೆ 7ವಿಕೆಟ್ ಕಳೆದು ಕೊಂಡು 64 ರನ್‍ಗಳಿಸಲಷ್ಟೆ ಶಕ್ತವಾಗಿ ರನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಪಂದ್ಯದಲ್ಲಿ ಮಾದಾಪುರ ಟೀಮ್ ಮ್ಯಾಕ್ಸ್‍ವೆಲ್ ತಂಡದ ಸಂತೋಷ್ ಸರಣಿ ಶ್ರೇಷ್ಠ, ಕಾಂತೂರು ಮೂರ್ನಾಡು ಎಸ್‍ಬಿಸಿಸಿ ತಂಡದ ಶಿವು ಪಂದ್ಯ ಪುರುಷ, ಕಾಂತೂರು ತಂಡದ ಮಧು ಬೆಸ್ಟ್ ಬ್ಯಾಟ್‍ಮೆನ್, ಅಂಚಿಕಾಡು ಇಲೆವೆನ್ ತಂಡದ ನಿತೀಶ್ ಬೆಸ್ಟ್ ಬೌಲರ್ ಹಾಗೂ ಕಾಂತೂರು ತಂಡ ನಿತೀನ್ ಯುವ ಪ್ರತಿಭೆ ಪ್ರಶಸ್ತಿ ಪಡೆದುಕೊಂಡರು.

ಸಮಾರೋಪ ಸಮಾರಂಭಕ್ಕೆ ಮಡಿಕೇರಿ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸತೀಶ್ ಕುಮಾರ್ ಆಗಮಿಸಿ ಮೂರ್ನಾಡು ಪ್ರೌಢಶಾಲೆ ಶಿಕ್ಷಕ ಹೆಚ್.ಬಿ. ಕೃಷ್ಣಪ್ಪ ಆಗಮಿಸಿದ್ದರು. ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ಅಧ್ಯಕ್ಷ ದಿನೇಶ್ ಪೆಗ್ಗೋಲಿ ಅಧ್ಯಕ್ಷತೆ ವಹಿಸಿದರು. ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಆರ್. ರವಿ, ಕಂದಾಯ ಇಲಾಖೆ ನೌಕರ ಎಚ್. ಬಿ. ಮಂಜು, ಸಮಾಜ ಸೇವಕ ಬೋಜ ಸಣ್ಣಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಎ. ಖಾದರ್, ಬಿಳಿಗೇರಿ ಗ್ರಾಮ ಪಂಚಾಯಿತಿ ಸದಸ್ಯ ಖಾದರ್, ಪಾಷಣ ಮೂರ್ತಿ ದೇವಾಲಯ ಸದಸ್ಯ ಸುಬ್ರಮಣಿ, ಪುದಿಯೊಕ್ಕಡ ರಮೇಶ್, ಈರ ಸುಬ್ಬಯ್ಯ, ಮಿಥುನ್, ಎಚ್.ವೈ. ರವಿ, ಮುಜೀಬ್ ಇನ್ನಿತರರು ಹಾಜರಿದ್ದರು.

ಸಾಧಕರಿಗೆ ಸನ್ಮಾನ : ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟÀರೇಟ್ ಪದವಿ ಪುರಸ್ಕøತೆ ಡಾ. ರಾಧಿಕ ಹಾಗೂ ಚಿನ್ನದ ಪದಕ ವಿಜೇತ ಕಾಕೋಟುಪರಂಬು ಶಾಲಾ ವಿದ್ಯಾರ್ಥಿ ನಿಖಿಲ್ ಅವರನ್ನು ಸನ್ಮಾನಿಸಲಾಯಿತು. ಸಾಧನೆ ಗೈದವರಿಗೆ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.