ಸುಂಟಿಕೊಪ್ಪ, ಮೇ. 17 : ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ ಮತ್ತು ವಿಜ್ಞಾನ ವಿಭಾಗಕ್ಕೆ ದಾಖಲಾತಿ ಆಂದೋಲನ ಆರಂಭಿಸಲಾಗಿದೆ ಎಂದು ಕಾಲೇಜು ಪ್ರಾಂಶುಪಾಲ ಪಿ. ಸೋಮಚಂದ್ರ ಮಾಹಿತಿ ನೀಡಿದರು.

ಕಾಲೇಜಿನಲ್ಲಿ ಸುಸಜ್ಜಿತವಾದ ಕಟ್ಟಡವಿದ್ದು, ನುರಿತ ಉಪನ್ಯಾಸಕ ರಿಂದ ಕೂಡಿರುವ ಈ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಾ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಎಲ್ಲ ಸೌಕರ್ಯಗಳು ದೊರಕಲಿದೆ. ವಿದ್ಯಾರ್ಥಿನಿಯರ ಹಿತದೃಷ್ಟಿಯಂದ ಮತ್ತು ಶಿಕ್ಷಣದ ದೃಷ್ಟಿಯಿಂದ ಸಿಸಿ ಕ್ಯಾಮೇರವನ್ನು ಅಳವಡಿಸಲಾಗಿದ್ದು, ಶಿಸ್ತುಬದ್ದ ಕಾಲೇಜಾಗಿ ಮಾರ್ಪಟ್ಟಿರು ತ್ತದೆ. ಈ ನಿಟ್ಟಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸಕ್ಕೆ ದಾಖಲಾತಿಯನ್ನು ಆರಂಭಿಸಲಾಗಿದ್ದು, ಈ ನಿಟ್ಟಿನಲ್ಲಿ ಸುಂಟಿಕೊಪ್ಪ, ಕೊಡಗರಹಳ್ಳಿ, ಹೊಸಕೋಟೆ, ಚೆಟ್ಟಳ್ಳಿ ಈ ಭಾಗಗಳಿಗೆ ರಸಾಯನ ಶಾಸ್ತ್ರ ಉಪನ್ಯಾಸಕ ಎಸ್. ಹೆಚ್. ಈಶ, ಇತಿಹಾಸ ಉಪನ್ಯಾಸಕಿ ಕವಿತ ಇವರನ್ನೊಳ ಗೊಂಡಂತೆ ದಾಖಲಾತಿ ಆಂದೋಲನವನ್ನು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಕಾಲೇಜಿಗೆ ದಾಖಲಾ ಗುವ ಮುನ್ನ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗಾಗಿ ತಾ. 25 ರ ಬೆಳಿಗ್ಗೆ 10;30 ಗಂಟೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದು, ಈ ತರಗತಿಗೆ ಬರುವವರು 9739946862 ಮೊಬೈಲ್ ಸಂಖ್ಯೆಗೆ ಸಂಪರ್ಕಿಸು ವಂತೆ ಕೋರಿಕೊಂಡಿದ್ದಾರೆ.