ನಾಪೆÇೀಕ್ಲು: ಜಿಲ್ಲೆಯಲ್ಲಿ ಕಾಫಿ ಪ್ರಮುಖ ವಾಣಿಜ್ಯ ಬೆಳೆ. ಅದರೊಂದಿಗೆ ಕಾಳು ಮೆಣಸು, ಏಲಕ್ಕಿ, ಕಿತ್ತಳೆ, ಬಾಳೆ, ಅಡಿಕೆಗಳನ್ನು ಹಿಂದಿನಿಂದಲೂ ಉಪ ಬೆಳೆಯಾಗಿ ಬೆಳೆಸುತ್ತಾ ಬರಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಶುಂಠಿ, ವೆನಿಲಾ ಬೆಳೆಗಳಿಂದಲೂ ಬೆಳೆಗಾರರು ತಮ್ಮ ಆರ್ಥಿಕ ಗುಣಮಟ್ಟವನ್ನು ಉತ್ತಮಪಡಿಸಿಕೊಂಡಿದ್ದಾರೆ. ರಾಜ್ಯದ ಬೇರೆಡೆಗಳಲ್ಲಿ ಬೆಳೆಯುತ್ತಿರುವ ಬೆಳೆಗಳನ್ನು ತಂದು ಕೊಡಗಿನಲ್ಲಿ ಬೆಳೆಯಲು ಯತ್ನಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ನಾಪೆÇೀಕ್ಲು ಬೇತು ಗ್ರಾಮದ ಬೊಳ್ಯಪಂಡ ಬೋಪಣ್ಣ. ಕೊಡಗನ್ನು ದಕ್ಷಿಣ ಕಾಶ್ಮೀರ ಎಂದು ಕರೆಯಲಾಗುತ್ತಿದೆ. ಆದರೆ ಕಾಶ್ಮೀರದಲ್ಲಿ ಬೆಳೆಯುವ ಸೇಬನ್ನು ಇಲ್ಲಿ ಯಾಕೆ ಬೆಳೆಯಬಾರದು? ಎಂದು ಯೋಚಿಸಿದ ಬೋಪಣ್ಣ ಕಳೆದ ಏಳು ವರ್ಷಗಳ ಹಿಂದೆ ಕೇರಳದಿಂದ ಎರಡು ಗಿಡಗಳನ್ನು ತರಿಸಿಕೊಂಡು ಪ್ರಾಯೋಗಿಕವಾಗಿ ಬೆಳೆಸಿದರು. ಅದರಲ್ಲಿ ಒಂದು ಗಿಡ ಮಾತ್ರ ಈಗ ಉಳಿದಿದ್ದು, ಅವರ ಉತ್ತಮ ಪೆÇೀಷಣೆ ಯೊಂದಿಗೆ aಕಳೆದ ಎರಡು ವರ್ಷಗಳಿಂದ ಗಿಡದಲ್ಲಿ ಸೇಬು ಹಣ್ಣು ದೊರೆಯುತ್ತಿದೆ. ಇವರ ಮನೆಯಂಗಳದಲ್ಲಿರುವ ಈ ಸೇಬಿನ ಮರದಲ್ಲಿ ಈ ಬಾರಿ ಸುಮಾರು 500ಕ್ಕಿಂತಲೂ ಹೆಚ್ಚು ಸೇಬು ಹಣ್ಣುಗಳು ಎಲ್ಲರ ಗಮನ ಸೆಳೆಯುತ್ತಿದೆ. ಇತರ ಹಣ್ಣುಗಳಿಗಿರುವಂತೆ ಈ ಹಣ್ಣಿಗೂ ಬಾವಲಿ ಮತ್ತಿತರ ಪಕ್ಷಿಗಳ ಉಪಟಳವಿದೆ. ಇದರ ಬಗ್ಗೆ ಆಸಕ್ತಿಯಿಟ್ಟು ಬೆಳೆದಲ್ಲಿ ಬೆಳೆಗಾರನಿಗೆ ಹೆಚ್ಚಿನ ಆದಾಯ ಲಭಿಸಬಹುದು. ಈ ಬಗ್ಗೆ ಮಾಹಿತಿ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಬಹುದು ಎನ್ನುತ್ತಾರೆ ಬೋಪಣ್ಣ.

- ಪಿ. ವಿ. ಪ್ರಭಾಕರ್