ಕೂಡಿಗೆ, ಮೇ. 17 : ಜಿಲ್ಲೆಯ ಕಾರ್ಮಿಕರು ಸಂಘಟಿತರಾಗಿ ವಿವಿಧ ಇಲಾಖೆಗಳಲ್ಲಿ ತಮಗೆ ಸಿಗುವ ಸಾಲ ಸೌಲಭ್ಯ ಮತ್ತು ಕಾರ್ಮಿಕರಿಗೆ ಕಾದಿರಿಸಿದ ರಿಯಾಯಿತಿಯ ಯೋಜನೆಯ ಸೌಲಭ್ಯಗಳನ್ನು ಪಡೆಯುವದರ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿ ಕೊಳ್ಳಬೇಕು ಎಂದು ರಾಜ್ಯ ಐಎನ್‍ಟಿಯುಸಿಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಕರೆ ನೀಡಿದರು.

ಐಎನ್‍ಟಿಯುಸಿ ಕಚೇರಿಯಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹಾಗೂ ಕಾರ್ಮಿಕ ನೊಂದಣಿಯ ವಿಚಾರವಾಗಿ ನಡೆದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು ಜಿಲ್ಲೆಯ ಕಾರ್ಮಿಕರಿಗೆ ಸಂಘದ ಮೂಲಕ ವಿವಿಧ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಸಭೆ ಅಧ್ಯಕ್ಷತೆಯನ್ನು ಐಎನ್‍ಟಿಯುಸಿಯ ಜಿಲ್ಲಾಧ್ಯಕ್ಷ ಟಿ.ಪಿ ಹಮೀದ್ ವಹಿಸಿ, ಮಾತನಾಡುತ್ತಾ, ಈಗಾಗಲೆ ವಿವಿಧ ಕಾರ್ಮಿಕರು ವಿವಿಧ ಕೆಲಸಗಳಲ್ಲಿ ತೊಡಗಿರಿವ 55 ಸಾವಿರ ಕಾರ್ಮಿಕರ ನೊಂದಣಿಯಾಗಿದೆ. ಇನ್ನುಳಿದ ಕಾರ್ಮಿಕರು ತಮ್ಮ ದಾಖಲಾತಿಗಳೊಂದಿಗೆ ಸಂಘದ ಕಚೇರಿಯಲ್ಲಿ ನೊಂದಾಯಿಸಿ ಕೊಳ್ಳುವ ಮೂಲಕ ತಮ್ಮ ಹಕ್ಕು, ಪ್ರಯೋಜನಗಳನ್ನು ಪಡೆದುಕೊಳ್ಳು ವಂತೆ ತಿಳಿಸಿದರು. ಈ ಸಂದರ್ಭ ಜಿಲ್ಲಾ ಕಾರ್ಯದರ್ಶಿ ಗೋವಿಂದ್‍ರಾಜ್‍ದಾಸ್ ಸೇರಿದಂತೆ ಗ್ರಾಮ ಮಟ್ಟದ ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು, ಹೋಬಳಿ ವ್ಯಾಪ್ತಿಯ ನೂರಾರು ಕಾರ್ಮಿಕರು ಹಾಜರಿದ್ದರು.