ಕುಶಾಲನಗರ, ಮೇ 17: ಕುಶಾಲನಗರ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ತಂಬಾಕು ವಸ್ತುಗಳನ್ನು ಬಹಿರಂಗವಾಗಿ ಮಾರಾಟ ಮಾಡುವದರೊಂದಿಗೆ ನಿಯಮ ಪಾಲಿಸದ ವರ್ತಕರು ಹಾಗೂ ಹಲವು ಸಂಸ್ಥೆಗಳಿಗೆ ತಂಬಾಕು ನಿಯಂತ್ರಣ ಹೈಪವರ್ ಮಂಡಳಿ ತಂಡ ದಾಳಿ ನಡೆಸಿತು. ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯ ಹಲವು ಕಿರಾಣಿ ಅಂಗಡಿಗಳು, ಬ್ಯಾಂಕ್, ಹೋಟೆಲ್‍ಗಳು, ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಹಲವು ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿದ ತಂಡ ನಿಯಮ ಬಾಹಿರವಾಗಿ ಮಾರಾಟ ಮಾಡುತ್ತಿದ್ದ ತಂಬಾಕು ಉತ್ಪನ್ನಗಳನ್ನು ವಶಕ್ಕೆ ತೆಗೆದುಕೊಂಡಿತು. ಅಲ್ಲದೆ ನಿಯಮ ಪಾಲಿಸದ ಹಲವೆಡೆ ದಂಡ ವಿಧಿಸಲಾಯಿತು.

ಅಧಿಕಾರಿಗಳ 3 ತಂಡ ಕುಶಾಲನಗರದ ಎಲ್ಲೆಡೆ ಬೆಳಗಿನಿಂದ ಸಂಜೆ ತನಕ ಕಾರ್ಯಾಚರಣೆ ನಡೆಸಿತು.