ಮಡಿಕೇರಿ, ಮೇ 17: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯುತ್ತಿರುವ ಗೌಡ ಫುಟ್ಬಾಲ್ ಪಂದ್ಯಾಟದಲ್ಲಿ ಮುಕ್ಕಾಟಿ ಹಾಗೂ ಕಡ್ಯದ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಮರದಾಳು, ಚೆರಿಯಮನೆ, ಬೆಪ್ಪುರನ, ಕಾಂಗಿರ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯದಲ್ಲಿ ಮುಕ್ಕಾಟಿ ತಂಡ ಕಟ್ಟೆಮನೆ ವಿರುದ್ಧ ಪೆನಾಲ್ಟಿ ಶೂಟೌಟ್‍ನಲ್ಲಿ 4-5 ಗೋಲುಗಳ ಅಂತರದಲ್ಲಿ ಜಯಗಳಿಸಿತು. ಕಡ್ಯದ ತಂಡ ಚೋಂಡಿರ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಜಯಸಾಧಿಸಿತು. ಕಡ್ಯದ ತಂಡದ ಪರ ಕಾರ್ತಿಕ್ 3, ಪ್ರವೀಣ್ ಹಾಗೂ ಕವನ್ ತಲಾ ಒಂದೊಂದು ಗೋಲು ಗಳಿಸಿದರು. ಚೋಂಡಿರ ಪರ ಪವನ್ 1 ಗೋಲು ಬಾರಿಸಿದರು. ಮರದಾಳು ತಂಡ ಬಿದ್ರುಪಣೆ ವಿರುದ್ಧ 0-1 ಗೋಲುಗಳ ಜಯ ಸಾಧಿಸಿತು. ಮರದಾಳು ಶರತ್ 1 ಗೋಲು ಬಾರಿಸಿದರು. ಚೆರಿಯಮನೆ ತಂಡ ಕುಕ್ಕುನೂರು ವಿರುದ್ಧ 4-0 ಗೋಲುಗಳ ಅಂತರದಲ್ಲಿ ಜಯಗಳಿಸಿತು. ಚೆರಿಯಮನೆ ಪರ ರಕ್ಷಾ, ದೀಕ್ಷಿತ್ ತಲಾ ಒಂದೊಂದು ಗೋಲು, ಧ್ರುವಾ 2 ಗೋಲು ಬಾರಿಸಿದರು.

ಕಾಂಗೀರ ತಂಡ ದೇವಜನ ಹೊಸೊಕ್ಲು ವಿರುದ್ಧ 4-0 ಅಂತರದಲ್ಲಿ ಗೆಲುವು ಸಾಧಿಸಿತು. ಕಾಂಗೀರ ಪರ ಗೌತಮ್ 2, ಯತಿನ್ ಹಾಗೂ ಮುರಳಿ ತಲಾ ಒಂದೊಂದು ಗೋಲು ಹೊಡೆದರು. ಬೆಪ್ಪುರನ ತಂಡ ಕಟ್ಟೆಮನೆ (ಎ) ವಿರುದ್ಧ 4-0 ಗೋಲುಗಳ ಜಯ ಸಾಧಿಸಿತು. ಬೆಪ್ಪುರನ ಪರ ಜೀವನ್ 3, ಸುಮಂತ್ 1 ಗೋಲು ಬಾರಿಸಿದರು.