ಮಡಿಕೇರಿ, ಮೇ 16: ಭಾರತೀಯ ವಿದ್ಯಾಭವನದ ದೇಶವ್ಯಾಪಿ ಶಾಲೆಗಳ 450 ವಿದ್ಯಾರ್ಥಿಗಳಿಗಾಗಿ ಮಡಿಕೇರಿಯಲ್ಲಿ ಆಯೋಜಿಸಿದ 8ನೇ ರಾಷ್ಟ್ರೀಯ ಭಾವೈಕ್ಯತಾ ಸಮಾವೇಶದ ಅಂಗವಾಗಿ ಕಲಾ ಗ್ಯಾಲರಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ದೇಶದ ವಿವಿಧೆಡೆಗಳ ವಿದ್ಯಾರ್ಥಿಗಳು ಭಾರತದ ಭಾವೈಕ್ಯತೆ, ದೇಶಪ್ರೇಮ, ಸೌಹಾರ್ಧತೆಯ ಸಂದೇಶ ಸಾರುವ ಭಿತ್ತಿಚಿತ್ರಗಳೂ ಸೇರಿದಂತೆ ವೈವಿಧ್ಯಮಯ ಕಲಾ ಚಿತ್ರಗಳನ್ನು ಈ ಗ್ಯಾಲರಿಯಲ್ಲಿ ಪ್ರದರ್ಶಿಸಿದ್ದಾರೆ.

ಪುಟ್ಟ ಮರದಲ್ಲಿಯೇ ಭಾವೈಕ್ಯತೆ ಸಾರುವ ಸಂದೇಶ ಹೊತ್ತ ಚಿತ್ರಗಳನ್ನು ಬಿಡಿಸಲಾಗಿದ್ದು, ಮರದಲ್ಲಿಯೇ ಭಾರತದ ಸೌಹಾರ್ಧತೆಯ ಸಂದೇಶದ ಕಲೆ ಅರಳಿದೆ. ಅಂತೆಯೇ ರೈಲಿನ ಪ್ರಾತ್ಯಕ್ಷಿಕೆಯೊಂದರ ಮೂಲಕ ಭಾರತವನ್ನು ರೈಲಿಗೆ ಹೋಲಿಸಿ ಪ್ರತಿಯೊಂದು ಬೋಗಿಗಳೂ ದೇಶದ ಒಂದೊಂದು ರಾಜ್ಯವಿದ್ದಂತೆ. ವಿಭಿನ್ನ ಸಂಪ್ರದಾಯದ ಪಯಣಿಗರು ಭಾರತ ಎಂಬ ಒಂದೇ ರೈಲಿನಲ್ಲಿ ಸಹಪಯಣಿಗರು ಎಂಬ ಅಪೂರ್ವ ಸಂದೇಶವನ್ನು ಸಾರಲಾಗಿದೆ.

ವಿದ್ಯಾಲಯದ ವಿದ್ಯಾರ್ಥಿಗಳು ಕಾಫಿಹಣ್ಣಿನ ಚಿತ್ರಗಳನ್ನೇ ಹಿನ್ನೆಲೆಯಾಗಿಸಿಕೊಂಡು ಕೊಡಗಿನ ಭೂಪಟದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಚಿತ್ರಗಳ ಮೂಲಕ ಸೈನಿಕ ಪರಂಪರೆಯನ್ನು ಬಿಂಬಿಸಿದ್ದಲ್ಲದೇ, ಕೊಡಗಿನ ಸಾಂಪ್ರದಾಯಿಕ ಉಮ್ಮತ್ತಾಟ್, ಬೊಳಕ್ಕಾಟ್ ಮೂಲಕ ಇಲ್ಲಿನ ಜನಪದವನ್ನು ಬಿಂಬಿಸಿದ್ದಾರೆ. ಕೊಡಗಿನ ಸಾಂಪ್ರದಾಯಿಕ ದೈವಕೋಲದ ಚಿತ್ರವೂ ಕೊಡಗಿನ ಚಿತ್ರಕಲೆಯಲ್ಲಿ ವಿಭಿನ್ನವಾಗಿ ಮೂಡಿದೆ.

ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಆಂದ್ರ, ತೆಲಂಗಾಣ, ಕಲ್ಕತ್ತ, ರಾಜಸ್ಥಾನ, ತ್ರಿಪುರ, ಪಶ್ಚಿಮಬಂಗಾಲ, ಚಂಡೀಘರ್, ದಿಲ್ಲಿ, ಮಹಾರಾಷ್ಟ್ರ, ಛತ್ತೀಸ್ ಗಡ್, ಉತ್ತರ ಪ್ರದೇಶಗಳಿಗೆ ಸೇರಿದ ಭಾರತೀಯ ವಿದ್ಯಾಭವನದ ವಿದ್ಯಾರ್ಥಿಗಳು ರೂಪಿಸಿದ ವಿಬಿನ್ನ ಕಲಾಕೃತಿಗಳು ವಿದ್ಯಾರ್ಥಿಗಳ ಕಲಾ ಪ್ರತಿಭೆಯನ್ನು ಮಾತ್ರ ಬೆಳಕಿಗೆ ತಾರದೆ ದೇಶಪ್ರೇಮದ ವಿನೂತನ ಸಂದೇಶವನ್ನೂ ಅನಾವರಣಗೊಳಿಸುವಲ್ಲಿ ಅತ್ಯಂತ ಯಶಸ್ವಿಯಾಗಿದೆ. ಒಗ್ಗಟ್ಟೇ ಭಾರತದ ಪ್ರಬಲ ಸಂಪತ್ತು, ಶಕ್ತಿ ಎಂಬದು ಈ ಕಲಾಗ್ಯಾಲರಿಯಲ್ಲಿನ ವೈವಿಧ್ಯಮಯ ಚಿತ್ರಗಳ ಮೂಲಕ ಸಂದೇಶದ ರೂಪದಲ್ಲಿ ಬಿಂಬಿತವಾಗಿದೆ.

ಸಂಸ್ಕøತಿ ವೈಭವ : ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವೇದಿಕೆಯಲ್ಲಿ ಭಾರತದ ಸಾಂಸ್ಕøತಿಕ ವೈಭವ ಅಪೂರ್ವ ರೀತಿಯಲ್ಲಿ ಅನಾವರಣಗೊಂಡಿತು. ಮಡಿಕೇರಿಯಲ್ಲಿ ಆಯೋಜಿತ ಏಕತಾ ರಾಷ್ಟ್ರೀಯ ಬಾವೈಕ್ಯತೆಯ 8ನೇ ಸಮಾವೇಶದ ಮೊದಲ ದಿನ ರಾತ್ರಿ ದೇಶದ ವಿವಿದೆಡೆಗಳ ಜಾನಪದ ನೃತ್ಯಗಳ ಅಪೂರ್ವ ಸಾಂಸ್ಕøತಿಕ ವೈಭವವನ್ನು ಮಡಿಕೇರಿಯ ಭಾರತೀಯ ವಿದ್ಯಾಭವನದ ವಿದ್ಯಾರ್ಥಿಗಳು ಅತ್ಯುತ್ತಮ ರೀತಿಯಲ್ಲಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಭಾರತದ ಸಾಂಸ್ಕøತಿಕ ಶ್ರೀಮಂತಿಕೆ ಅತ್ಯಂತ ಮೇರುಮಟ್ಟದ್ದು, ವಿಶ್ವವೇ ಬೆರಗಾದ ಸಾಂಸ್ಕøತಿಕ ಸಂಪತ್ತು ಭಾರತದಲ್ಲಿದೆ. ಅಂಥ ಸಾಂಸ್ಕøತಿಕ ಕಲಾ ಸಿರಿವಂತಿಕೆಯನ್ನು ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿ ತಂಡ ಎರಡು ಗಂಟೆಗಳ ಕಾಲ ಭಾರತ ಲೋಕ ನೃತ್ಯ ಎಂಬ ಹೆಸರಿನಲ್ಲಿ ಮನೋಜ್ಞವಾಗಿ ಪ್ರದರ್ಶಿಸಿತು.

ಬೆಂಗಳೂರಿನ ರಿಥಮ್ ಮೋಷನ್ಸ್ ಸ್ಕೂಲ್ ಆಫ್ ಕ್ಲಾಸಿಕಲ್ ಡಾನ್ಸ್ ಸಂಸ್ಥೆಯ ನಿರ್ದೇಶಕಿ ಚಿತ್ರಾ ಅರವಿಂದ್ ಅವರ ಅದ್ಬುತ ನೃತ್ಯ ನಿರ್ದೇಶನದಲ್ಲಿ 20 ದಿನಗಳ ಕಾಲ ತರಬೇತಿ ಪಡೆದಿದ್ದ ವಿದ್ಯಾರ್ಥಿಗಳು ಏಕತಾ ಸಮಾವೇಶದ ಪ್ರಾರಂಭದ ದಿನವೇ ಭಾರತದ ಸಾಂಸ್ಕøತಿಕ ವೈಭವವನ್ನು ಪ್ರದರ್ಶಿಸಿದರು.

ಕೊಡಗಿನ ಚಿತ್ರಗಳು - ಮಡಿಕೇರಿಯಲ್ಲಿ ಏಕತಾ ರಾಷ್ಟ್ರೀಯ ಭಾವೈಕ್ಯತಾ ಸಮಾವೇಶದ ಅಂಗವಾಗಿ ಪ್ರದರ್ಶಿತಗೊಂಡ ಲೋಕ ನೃತ್ಯ ಹೆಸರಿನ ದೇಶದ ವಿವಿಧ ರಾಜ್ಯಗಳ ವಿವಿಧ ಜಾನಪದ ನೃತ್ಯಗಳ ಬೆಡಗಿನ ಪ್ರದರ್ಶನದ ನೋಟಗಳು ಗಮನ ಸೆಳೆದವು.

ಪ್ರಾರ್ಥನೆಗಳ ಮೂಲಕ ದೇವರಿಗೆ ನಮನ ಸಲ್ಲಿಸುವ ಕ್ರಿಯೆ ಪ್ರಾರ್ಥನೆಯೊಂದಿಗೆ ಜಗತ್ತಿನ ಸರ್ವರಿಗೂ ಒಳಿತಾಗಲಿ ಎಂಬ ಸಂದೇಶವೂ ರವಾನೆಯಾಗುತ್ತದೆ ಎಂದು ಭಾರತೀಯ ವಿದ್ಯಾಭವನದ ಬೆಂಗಳೂರು