ಸುಂಟಿಕೊಪ್ಪ, ಮೇ4: ಯಾವದೇ ಕೆಲಸವನ್ನು ಕೈಗೆತ್ತಿಕೊಳ್ಳುವಾಗ ಸಕಾರಾತ್ಮಕವಾಗಿ ಚಿಂತಿಸಿ ಮುನ್ನಡಿ ಇಟ್ಟರೆ ನಾವು ನಿರೀಕ್ಷಿಸಿದ ಫಲಿತಾಂಶ ಲಭ್ಯವಾಗಲಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಅರುಣ್ಶೆಟ್ಟಿ ಹೇಳಿದರು.
ಸುಂಟಿಕೊಪ್ಪ ಲಯನ್ಸ್ ಕ್ಲಬ್ಗೆ ಭೇಟಿ ನೀಡಿದ ಅವರು ಸಂತ ಮೇರಿ ಶಾಲಾ ಸಭಾಂಗಣದಲ್ಲಿ ಲಯನ್ಸ್ ಪದಾಧಿಕಾರಿಗಳೊಂದಿಗೆ ಮಾತನಾಡಿದರು. ಲಯನ್ಸ್ ಪ್ರಪಂಚದಾದ್ಯಂತ ಸಮಾಜಸೇವಾ ಕಾರ್ಯದಲ್ಲಿ ನಿರತವಾಗಿದ್ದು. ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದರು. ಸುಂಟಿಕೊಪ್ಪ ಲಯನ್ಸ್ ಸಂಸ್ಥೆಗೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರುಗಳಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು.
ಲಯನ್ಸ್ ಜಿಲ್ಲಾ 2ನೇ ಉಪಾಧ್ಯಕ್ಷರಾದ ರೋನಾಲ್ಡ್ ಐಸಾಕ್ ಗೋಮ್ಸ್ ಅವರು 2018-19ನೇ ಸಾಲಿನ ಪ್ರಾಂತೀಯ ರಾಜ್ಯಪಾಲರಾಗಿ ನೇಮಕಗೊಂಡಿದ್ದು ಅವರನ್ನು ಸುಂಟಿಕೊಪ್ಪ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೋಟೇರ ಶಾಶ್ವತ್ ಬೋಪಣ್ಣ ವಹಿಸಿದ್ದರು.
ವೇದಿಕೆಯಲ್ಲಿ ವಲಯ ಅಧ್ಯಕ್ಷ ಲೀಲಾರಾಮ್ ರಾಜನ್, ಲಯನ್ಸ್ ವಲಯ 1 ರ ಅಧ್ಯಕ್ಷ ಸಿ.ಕೆ.ರಕ್ಷೀತ್, ಲಯನ್ಸ್ ವಲಯ 2ರ ಅಧ್ಯಕ್ಷ ವೇಣು ಅಪ್ಪಣ್ಣ, ಲಯನ್ಸ್ ವಲಯ 3 ರ ಅಧ್ಯಕ್ಷ ಧನುಉತ್ತಯ್ಯ ಲಯನೆಸ್ ಅಧ್ಯಕ್ಷೆ ಕನ್ನಿಕಾ ಬೋಪಣ್ಣ, ಖಜಾಂಜಿ ಡಿ.ಜೆ.ದರ್ಶನ್ ಉಪಸ್ಥಿತರಿದ್ದರು. ಪಾರ್ವತಿ ವಸಂತ್ ಪ್ರಾರ್ಥಿಸಿ,ಶಾಶ್ವತ್ ಬೋಪಣ್ಣ ಸ್ವಾಗತಿಸಿ, ಗ್ಲೇನ್ ಮೆನೇಜೆಸ್ ವರದಿ ವಾಚಿಸಿ ವಂದಿಸಿದರು.