ದ.ಸಂ.ಸ. ಆರೋಪ

*ಗೋಣಿಕೊಪ್ಪಲು, ಮೇ 5: ಆನೆ - ಮಾನವ ಸಂಘರ್ಷದ ಪರಿಹಾರಕ್ಕೆ ಸರಕಾರ ಗಂಭೀರವಾಗಿ ಪರಿಗಣಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಸಾಮಾನ್ಯ ಜನರ ಮೇಲೆ ಸರಕಾರಕ್ಕೆ ಕಾಳಜಿ ಇಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶುರಾಮ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆ ಧಾಳಿಯಿಂದ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿ ಸರಕಾರ ಕೈತೊಳೆದುಕೊಳ್ಳುತ್ತಿದೆ. ಘಟನೆ ನಡೆಯದಂತೆ ವ್ಯವಸ್ಥಿತ ಪರಿಹಾರ ಕಂಡುಕೊಳ್ಳಲು ಸರಕಾರ ಮುಂದಾಗಿಲ್ಲ. ಜಿಲ್ಲೆಗೆ ಹೊರ ರಾಜ್ಯಗಳಿಂದ ಆನೆಗಳನ್ನು ತಂದು ಬಿಡುತ್ತಿರುವದರಿಂದಲೇ ಆನೆ ಉಪಟಳ ಹೆಚ್ಚಾಗಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಆನೆ-ಮಾನವನ ನಡುವಿನ ಸಂಬಂಧಗಳಿಗೆ ಆದಿವಾಸಿ ಮಾವುತರುಗಳು ಉತ್ತಮ ಸಂಪರ್ಕ ಬೆಳೆಸಲು ಸಾಧ್ಯವಿದೆ. ಇವರನ್ನು ಆನೆಗಳ ಮೇಲ್ವಿಚಾರಕರಾಗಿ ನೇಮಿಸಬೇಕಾಗಿದೆ. ಅಧಿಕಾರಿಗಳಿಗೆ ಆನೆಯ ಬಗ್ಗೆ ಮಾಹಿತಿ ಕೊರತೆ ಇರುತ್ತದೆ. ಹೀಗಾಗಿ ಆದಿವಾಸಿಗಳಿಗೆ ಆನೆಯ ಉಸ್ತುವಾರಿ ವಹಿಸಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಪ್ರಾಣ ಕಳೆದುಕೊಂಡ ದೇವರಪುರ ಗ್ರಾಮದ ವಿದ್ಯಾರ್ಥಿನಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಸರಕಾರಿ ಉದ್ಯೋಗ ಕೊಡಬೇಕು ಎಂದು ದ.ಸಂ.ಸ ಒತ್ತಾಯಿಸುತ್ತದೆ ಎಂದರು.

ದಲಿತರನ್ನು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಅಸ್ಪøಶ್ಯತೆಯಿಂದ ಕಾಣುತ್ತಿದ್ದಾರೆ. ದಲಿತರನ್ನು ಧಿಕ್ಕರಿಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಮಿಕ ಸಂಘಟನೆಗಳು ದಲಿತ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬ್ಯಾರಿಕೇಡ್ ಅಳವಡಿಸಿ ದಲಿತ ಕಾರ್ಮಿಕ, ಇನ್ನಿತರ ಬಡ ಸಂಘಟನೆಗಳಿಗೆ ಮೆಟ್ಟಿಲ ಮೇಲೆ ಕುಳಿತು ಪ್ರತಿಭಟನೆ ನಡೆಸಲು ಅವಕಾಶ ಕೊಡುವದಿಲ್ಲ. ದಲಿತರನ್ನು ಕೀಳು ಮಟ್ಟದಲ್ಲಿ ಕಾಣುತ್ತಿದೆ.

ಗೋಷ್ಠಿಯಲ್ಲಿ ಆಂತರಿಕ ಶಿಸ್ತು ಮತ್ತು ತರಬೇತಿ ವಿಭಾಗದ ಸಂಚಾಲಕ ರಜನಿಕಾಂತ್, ದಲಿತ ನೌಕರರ ಮತ್ತು ಕಾರ್ಮಿಕ ವಿಭಾಗದ ಸಂಚಾಲಕ ಹೆಚ್.ಈ. ಶಿವಕುಮಾರ್, ಸಾಂಸ್ಕøತಿಕ ವಿಭಾಗದ ಸಂಚಾಲಕ ಪಿ.ಸಿ. ಸುಬ್ರಮಣಿ, ಕಲಾಮಂಡಳಿ ಸಂಚಾಲಕ ಗಿರೀಶ್, ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಸತೀಶ್, ಜಿಲ್ಲಾ ಖಜಾಂಚಿ ಹೆಚ್. ಎನ್. ಕುಮಾರ್ ಮಹಾದೇವ್ ಉಪಸ್ಥಿತರಿದ್ದರು.