ಮಡಿಕೇರಿ, ಮೇ 5: ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ವಿವಿಧೋದ್ದೇಶಗಳಿಗಾಗಿ ಮುಂದಿನ ಒಂದು ವರ್ಷದೊಳಗೆ ನಿವೇಶನÀ ಖರೀದಿಸಲು ಸಂಘದ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.

ಕಾರ್ಯಕಾರಿ ಸಮಿತಿಯ ತ್ರೈಮಾಸಿಕ ಸಭೆ ಸಂಘದ ಅಧ್ಯಕ್ಷರಾದ ಎಸ್.ಎಂ.ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಸೊಮವಾರಪೇಟೆಯ ಒಕ್ಕಲಿಗರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯಿತು.

ಮುಂದಿನ ಒಂದು ವರ್ಷದೊಳಗೆ ಜಿಲ್ಲೆಯ ಒಕ್ಕಲಿಗ ಜನಾಂಗದ ಉದಾರಿಗಳಿಂದ ಆರ್ಥಿಕ ನೆರವು ಪಡೆದು ಸಂಘದ ವಿವಿಧೋದ್ದೇಶಗಳಿಗಾಗಿ ನಿವೇಶನ ಖರೀದಿಸುವದು ಮತ್ತು ಮೇ 10 ರ ನಂತರ ಜಿಲ್ಲೆಯ ಮೂರೂ ತಾಲೂಕಿನಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಪ್ರÀ್ರವಾಸ ಕಾರ್ಯಕ್ರಮ ಹಮ್ಮಿಕೊಂಡು ಆರ್ಥಿಕ ಬಲ ಕ್ರೋಢೀಕರಿಸಲು ಸಭೆ ನಿರ್ಣಯ ಕೈಗೊಂಡಿತು.

ವೀರಾಜಪೇಟೆ ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ.ಎಂ. ಸುಬ್ರಮಣಿ ಅವರು ಜಿಲ್ಲಾ ಸಂಘಕ್ಕೆ ನಿವೇಶನ ಖರೀದಿಸಲು ರೂ. 1 ಲಕ್ಷ ಧನ ಸಹಾಯ ನೀಡುವದಾಗಿ ಘೋಷಿಸಿರುವದನ್ನು ಸಭೆ ಸ್ವಾಗತಿಸಿತು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ತೇರ್ಗಡೆಯಾಗುವ ಜಿಲ್ಲೆಯ ಒಕ್ಕಲಿಗ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಯಿತು.

ಸಂಘದ ಗೌರವ ಕಾರ್ಯದರ್ಶಿ ಪಿ.ಉಮೇಶ್ ಕುಮಾರ್ ಕಳೆದ ಸಭೆಯ ವರದಿ ಹಾಗೂ ಲೆಕ್ಕ ಪತ್ರಗಳನ್ನು ಸಭೆಯ ಮುಂದಿಟ್ಟರು.

1960ರ ದಶಕದಲ್ಲಿ ಕೊಡಗು ಜಿಲ್ಲಾಧಿಕಾರಿಯಾಗಿ, ನಂತರ ಸೋಮವಾರಪೇಟೆಯಲ್ಲಿ ಒಕ್ಕಲಿಗರ ಸಂಘದ ಸ್ಥಾಪನೆಗೆ ಕಾರಣಕರ್ತರಾಗಿದ್ದ ಶತಾಯುಷಿ ಒಕ್ಕಲಿಗರ ಕೆ.ಎಸ್. ಮಲ್ಲೇಗೌಡ ಅವರ ನಿಧನಕ್ಕೆ ಸಭೆ ಸಂತಾಪ ವ್ಯಕ್ತಪಡಿಸಿತು.

ಸಂಘದ ಉಪಾಧ್ಯಕ್ಷರುಗಳಾದ ವಿ.ಪಿ. ಸುರೇಶ್, ವಿ.ಕೆ. ದೇವಲಿಂಗಯ್ಯ, ಪದಾಧಿಕಾರಿಗಳಾದ ಕೆ.ಎಂ. ಲೋಕೇಶ್, ವಿ.ಪಿ. ಶಶಿಧರ್, ಭುವನೇಂದ್ರ, ಎ.ಆರ್. ಮುತ್ತಣ್ಣ, ಎಸ್.ವಿ. ಪೊನ್ನಪ್ಪ, ಜಯರಾಂ, ಕಮಲ, ಲೋಕೇಶ್ವರಿ ಗೋಪಾಲ್, ಬಿ.ಜೆ. ದೀಪಕ್, ಹೆಚ್.ಎಸ್. ರಾಮಚಂದ್ರ, ವಿ.ಪಿ. ರಾಜ, ಪುರುಷೋತ್ತಮ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದು ಸಂಘದ ಅಭ್ಯುದಯಕ್ಕಾಗಿ ಸಲಹೆಗಳನ್ನು ನೀಡಿದರು.