ಮಡಿಕೇರಿ, ಮೇ 5 : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಪೈಕೇರ ಕುಟುಂಬಸ್ಥರ ಆಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಉತ್ಸವದ ಅಂತಿಮ ಪಂದ್ಯಾಟ ತಾ. 7 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ದಾಖಲೆಯ 210 ಕುಟುಂಬ ತಂಡಗಳು ಭಾಗವಹಿಸಿದ್ದ ಪೈಕೇರ ಪಂದ್ಯಾವಳಿ ಯಶಸ್ವಿ ಯಾಗಿದ್ದು, ಇದಕ್ಕೆ ಸಾವಿರಾರು ಕ್ರೀಡಾ ಭಿಮಾನಿಗಳೇ ಕಾರಣ ವೆಂದು ಕ್ರಿಕೆಟ್ ಉತ್ಸವದ ಪ್ರಚಾರ ಸಮಿತಿಯ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.ಭಾನುವಾರ ಮಧ್ಯಾಹ್ನ 1 ಗಂಟೆಗೆ ಅರೆಭಾಷೆ ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ
2.30 ಗಂಟೆಗೆ ಕÀನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದಲ್ಲಿ ಖ್ಯಾತ ಹಾಸ್ಯ ಕಲಾವಿದ ಮೈಸೂರು ಆನಂದ ಮತ್ತು ತಂಡದಿಂದ ಹಾಸ್ಯ ಲಹರಿ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ.
ಸಂಜೆ 5.30 ಗಂಟೆಗೆ ರಾಯಲ್ ಬ್ರದರ್ಸ್ ಸಂಸ್ಥೆಯ ಪ್ರಾಯೋಜ ಕತ್ವದಲ್ಲಿ ಮೈಸೂರಿನ ಸಾವನ್ ತಂಡದಿಂದ ರಾಕ್ ಮ್ಯೂಸಿಕ್ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ ನಡೆಯುವ ಅಂತಿಮ ಪಂದ್ಯಾಟವನ್ನು ಕ್ರೀಡಾಭಿಮಾನಿ ಕೋಚನ ಪ್ರವೀಣ್ ಉದ್ಘಾಟಿಸಲಿ ದ್ದಾರೆ. ಮಧ್ಯಾಹ್ನದ ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮವನ್ನು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಉದ್ಘಾಟಿಸಲಿದ್ದಾರೆ.
(ಮೊದಲ ಪುಟದಿಂದ) ಮುಖ್ಯ ಅತಿಥಿಗಳಾಗಿ ಗೌಡ ಯುವ ವೇದಿಕೆಯ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷರಾದ ಕುಕ್ಕೇರ ಲಕ್ಷ್ಮಣ, ಸಾಹಿತಿಗಳಾದ ಬೈತಡ್ಕ ಜಾನಕಿ, ಪುದಿಯನೆರವನ ರೇವತಿ ರಮೇಶ್, ಯುವ ವೇದಿಕೆಯ ಉಪಾಧ್ಯಕ್ಷ ಯಾಲದಾಳು ಹರೀಶ್, ಕುಟುಂಬಸ್ಥರಾದ ಪೈಕೇರ ಯು. ತಿಮ್ಮಯ್ಯ ಹಾಗೂ ಪೈಕೇರ ಕೆ. ತಿಮ್ಮಯ್ಯ ಉಪಸ್ಥಿತರಿರುವರು.
ಸಂಜೆ 4 ಗಂಟೆಗೆ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕರಾದ ಕೆ.ಜಿ.ಬೋಪಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಬಿ.ಎ. ಹರೀಶ್, ಬೊಮ್ಮಸಂದ್ರ ಪುರಸಭೆಯ ಸದಸ್ಯರಾದ ಯಮುನಾ ರತ್ನ ಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾ ಪಂಚಾಯಿತಿ ¸ದಸ್ಯೆ ಕೆ.ಪಿ.ಚಂದ್ರಕಲಾ, ಎಪಿಎಂಸಿ ಅಧ್ಯಕ್ಷ ಕಾಂಗೀರ ಸತೀಶ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್, ಕೊಡಗು ಗೌಡ ಮಾಜಿ ಸೈನಿಕರ ಸಂಘÀದ ಅಧ್ಯಕ್ಷ ಮೊಳ್ಳೇರ ಅಚ್ಚಯ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ. ಭಾರತೀಶ್, ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿ ಪ್ರೇಂ ಪ್ರಸಾದ್ ಶೆಟ್ಟಿ, ಪೈಕೇರ ಪಟ್ಟೆದಾರ ಪೈಕೇರ ನಂಜುಂಡ, ಪೈಕೇರ ಕ್ರಿಕೆಟ್ ಸಮಿತಿ ಅಧ್ಯಕ್ಷ ಪೈಕೆÉೀರ ಅನಂತ ರಾಮ್, ಕ್ರೀಡಾ ಸಮಿತಿಯ ಅಧ್ಯಕ್ಷ ಬಾಳಾಡಿ ಮನೋಜ್ ಉಪಸ್ಥಿತರಿರುವರು.
ಸನ್ಮಾನಿಸಲ್ಪಡುವವರು: ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕೊಂಪುಳಿರ ಆನಂದ್, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ದೇವಜನ ಮೋಹನ್, ಸಾಹಿತ್ಯ ಕ್ಷೇತ್ರದಲ್ಲಿ ಕಟ್ರತನ ಬೆಳ್ಯಪ್ಪ ಮತ್ತು ಪಟ್ಟಡ ಪ್ರಭಾಕರ್, ಕ್ರೀಡಾಕ್ಷೇತ್ರದಲ್ಲಿ ಚೆರಿಯಮನೆ ಮೇಘ ಪ್ರಭಾಕರ್, ಕುಯ್ಮುಡಿ ಹನಿ, ಚೋಂಡಿರ ತವನ್, ಮೇರ್ಕಜೆ ಗಿರೀಶ್, ರಾಜ್ಯ ಮಟ್ಟದ ಕರಾಟೆ ಪಟು ಬೈಲೇರ ಪ್ರೊನಿಕ್ಷ, ಸಹಕಾರಿ ಕ್ಷೇತ್ರ ಕಾಂಗೀರ ಸತೀಶ್, ಲಾಂಛನ ವಿನ್ಯಾಸ ಪುದಿಯನೆರವನ ರಿಶಿತ್ ಮಾದಯ್ಯ ಹಾಗೂ ಕರ್ಣಯ್ಯನ ಅನೂಪ್ ಕಾರ್ಯಪ್ಪ.