ಗೋಣಿಕೊಪ್ಪಲು, ಮೇ 4 : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ 10 ತಂqಗಳು ಮುನ್ನಡೆ ಸಾಧಿಸಿವೆ.
ಪುಡಿಯಂಡ ತಂಡವು ಪೋರಂಗಡ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸಿತು. ಪುಡಿಯಂಡ 2 ವಿಕೆಟ್‍ಗೆ 64 ರನ್, ಪೋರಂಗಡ 5 ವಿಕೆಟ್‍ಗೆ 59 ರನ್ ದಾಖಲಿಸಿತು. ಪೋರಂಗಡ ಪ್ರಥ್ವಿ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಚೋಡುಮಾಡ ತಂಡವು ಬಾಚೀರ (ಹರಿಹರ) ವನ್ನು 5 ವಿಕೆಟ್‍ಗಳಿಂದ ಸೋಲಿಸಿತು. ಬಾಚೀರ 8 ವಿಕೆಟ್‍ಗೆ 43 ರನ್ ಗಳಿಸಿತು. ಚೋಡುಮಾಡ 5 ವಿಕೆಟ್ ಕಳೆದುಕೊಂಡು 47 ರನ್ ಬಾರಿಸಿ ಗೆಲುವು ಪಡೆಯಿತು. ಬಾಚೀರ ಚೇತನ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಮುಕ್ಕಾಟೀರ (ಪುಲಿಕೋಟ್) ತಂಡವು ಬೊಳ್ಳಿಯಂಡ ತಂಡವನ್ನು 88 ರನ್‍ಗಳಿಂದ ಮುಕ್ಕಾಟೀರ 2 ವಿಕೆಟ್‍ಗೆ 113 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು. ಬೊಳ್ಳಿಯಂಡ 6 ವಿಕೆಟ್‍ಗೆ 25 ರನ್ ಗಳಿಸಿ ಸೊಲನುಭವಿಸಿತು. ಬೊಳ್ಳಿಯಂಡ ನಾಚಪ್ಪ ಪಂದ್ಯ ಶ್ರೇಷ್ಠರಾದರು.
ಅಮ್ಮಾಟಂಡ ಗೈರು ಹಾಜರಿಯಾಗುವ ಮೂಲಕ ಬದಲೇರ ಮುಂದಿನ ಸುತ್ತಿಗೆ ಪ್ರವೇಶ ಪಡೆಯಲು ಕಾರಣವಾಯಿತು.
ಅಚ್ಚಪಂಡ ತಂಡವು ಅಲ್ಲುಮಾಡ ವಿರುದ್ದ 68 ರನ್‍ಗಳ ಗೆಲುವು ಪಡೆಯಿತು. ಅಚ್ಚಪಂಡ 7 ವಿಕೆಟ್ ನಷ್ಟಕ್ಕೆ 126 ರನ್ ಬಾರಿಸಿತು. ದೊಡ್ಡ ಮೊತ್ತ ಬೆನ್ನತ್ತಿದ ಅಲ್ಲುಮಾಡ 8 ವಿಕೆಟ್ ಕಳೆದುಕೊಂಡು 58 ರನ್‍ಗಳನಷ್ಟೆ ಸೇರಿಸಿತು. ಅಲ್ಲುಮಾಡ ತಿಮ್ಮಣ್ಣ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಉದಯಂಡ ತಂಡವು ನಾಗಚೆಟ್ಟೀರ ತಂಡವನ್ನು 46 ರನ್‍ಗಳಿಂದ ಸೋಲಿಸಿತು. ಉದಯಂಡ 3 ವಿಕೆಟ್‍ಗೆ 103 ರನ್‍ಗಳ ಬೃಹತ್ ಗುರಿ ನೀಡಿತು. ನಾಗಚೆಟ್ಟೀರ 6 ವಿಕೆಟ್ ಕಳೆದುಕೊಂಡು 56 ರನ್‍ಗಳಿಂದ ಸೋಲೊಪ್ಪಿಕೊಂಡಿತು. ನಾಗಚೆಟ್ಟೀರ ಆದರ್ಶ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಚಂಗುಲಂಡ ತಂಡವು ಮುಕ್ಕಾಟೀರ (ಹರಿಹರ) ವಿರುದ್ದ 4 ರನ್‍ಗಳ ರೋಚಕ ಗೆಲುವು ದಾಖಲಿಸಿತು. ಮುಕ್ಕಾಟೀರ ಮೊದಲು ಬ್ಯಾಟ್ ಮಾಡಿ 9 ವಿಕೆಟ್‍ಗೆ 54 ರನ್ ಸೇರಿಸಿತು. ಚಂಗುಲಂಡ 7 ವಿಕೆಟ್ ಕಳೆದುಕೊಂಡು 57 ರನ್ ಗಳಿಸಿ ಪಂದ್ಯ ಗೆದ್ದುಕೊಂಡಿತು. ಮುಕ್ಕಾಟೀರ ಪ್ರಮಾಂಖ್ ಪಂದ್ಯ ಶ್ರೇಷ್ಠರಾದರು.
ಕುಟ್ಟಂಡ ತಂಡಕ್ಕೆ ಅಪ್ಪಾರಂಡ ವಿರುದ್ಧ 6 ವಿಕೆಟ್ ಗೆಲುವು ದೊರೆಯಿತು. ಅಪ್ಪಾರಂಡ 2 ವಿಕೆಟ್‍ಗೆ 51 ರನ್‍ಗಳಿಸಿತು. ಕುಟ್ಟಂಡ 4 ವಿಕೆಟ್‍ಗೆ 52 ರನ್ ಬಾರಿಸಿತು. ಅಪ್ಪಾರಂಡ ಸಾಗರ್ ಪಂದ್ಯ ಶ್ರೇಷ್ಠರಾದರು.
ನಂಬುಡುಮಾಡ ತಂಡವು ಐಚೋಡಿಯಂಡ ವಿರುದ್ಧ 8 ವಿಕೆಟ್ ಗೆಲುವು ಪಡೆಯಿತು. ಐಚೋಡಿಯಂಡ 7 ವಿಕೆಟ್‍ಗೆ 49 ರನ್, ನಂಬುಡುಮಾಡ 2 ವಿಕೆಟ್ ಕಳೆದುಕೊಂಡು 54 ರನ್ ದಾಖಲಿಸಿ ಗೆದ್ದುಕೊಂಡಿತು. ಐಚೋಡಿಯಂಡ ಶ್ಯಾಮ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಮುಂಡಚಾಡೀರ ತಂಡವು ಪಟ್ಟಮಾಡ ತಂಡವನ್ನು 7 ವಿಕೆಟ್‍ಗಳಿಂದ ಮಣಿಸಿತು. ಪಟ್ಟಮಾಡ 9 ವಿಕೆಟ್‍ಗೆ 54 ರನ್ ದಾಖಲಿಸಿತು. ಮುಂಡಚಾಡೀರ 3 ವಿಕೆಟ್ ಕಳೆದುಕೊಂಡು 55 ರನ್ ದಾಖಲಿಸಿ ಗೆದ್ದು ಬೀಗಿತು. ಪಟ್ಟಮಾಡ ಜೀತ್