ನಾಪೆÇೀಕ್ಲು, ಏ. 19: ನಾಪೆÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಬಿದ್ದಾಟಂಡ ಕಪ್ ಹಾಕಿ ನಮ್ಮೆಯ ಮೂರನೇ ದಿನದ ಪಂದ್ಯಾಟದಲ್ಲಿ ಮಾಪಣಮಡ ಕುಟುಂಬ ತಂಡವು ಮೇಕತಂಡದ ವಿರುದ್ಧ 6-0 ಗೋಲುಗಳ ಅಂತರದಲ್ಲಿ ಮತ್ತು ಮಂಡೇಟಿರ ತಂಡವು ತಿರೋಡಿರ ತಂಡದ ವಿರುದ್ಧ 6-0 ಅಂತರದಲ್ಲಿ ಭರ್ಜರಿ ಜಯ ದಾಖಲಿಸಿವೆ.
ಉಳಿದಂತೆ ಬಲ್ಲಂಡ, ಪಾಲಂದಿರ, ಬೊಟ್ಟೋಳಂಡ, ಮಲ್ಲಂಗಡ, ಮುಲ್ಲಂಡ, ಮಾಳೇಟಿರ, ಕುಕ್ಕೇರ, ಕುಟ್ಟಂಡ (ಅಮ್ಮತ್ತಿ), ಚೋಕಿರ, ಚೇರಂಡ, ಅರಮಣಮಡ, ಸಣ್ಣುವಂಡ, ಮಾಚಿಮಡ, ಮುಕ್ಕಾಟಿರ, ಅಪ್ಪಚೆಟ್ಟೋಳಂಡ, ಅಜ್ಜೆಟ್ಟಿರ ಕುಟುಂಬ ತಂಡಗಳು ಜಯಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿವೆ.
ಬಲ್ಲಂಡ ಮತ್ತು ಬೊಳಕಾರಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಬಲ್ಲಂಡ ತಂಡವು ಒಂದು ಗೋಲುಗಳಿಂದ ಬೊಳಕಾರಂಡ ತಂಡವನ್ನು ಪರಾಭವಗೊಳಿಸಿತು. ಬಲ್ಲಂಡ ನಿಶು 1 ಗೋಲು ಗಳಿಸುವುದರ ಮೂಲಕ ತನ್ನ ತಂಡಕ್ಕೆ ಗೆಲುವು ತಂದುಕೊಟ್ಟರು. ಪಾಲಂದಿರ ಮತ್ತು ಶಿವಚಾಳಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಾಲಂದಿರ ಸುರೇಶ್ ನಾಣಯ್ಯ ಒಂದು, ಅಚ್ಚಪ್ಪ ಹಾಗೂ ಶಿವಚಾಳಿಯಂಡ ವಿಜು ಪೂಣಚ್ಚ ಒಂದು ಹಾಗೂ ರತನ್ ಮಂದಣ್ಣ ಒಂದು ಗೋಲು ದಾಖಲಿಸಿದರು. ನಂತರ ನಡೆದ ಟೈಬ್ರೇಕರ್ನಲ್ಲಿ ಪಾಲಂದಿರ ತಂಡವು ಶಿವಚಾಳಿಯಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ತೆಕ್ಕಡ ಮತ್ತು ಬೊಟ್ಟೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಟ್ಟೋಳಂಡ ತಂಡವು 5-3 ಗೋಲಿನ ಅಂತರದಿಂದ ಟೈಬ್ರೇಕರ್ನಲ್ಲಿ ತೆಕ್ಕಡ ತಂಡವನ್ನು ಸೋಲಿಸಿತು. ಬಲ್ಲಂಡ ಮತ್ತು ಬೊಳ್ಳಾರಪಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಬಲ್ಲಂಡ ತಂಡವು 1-0 ಗೋಲಿನ ಅಂತರದಿಂದ ಬೊಳ್ಳಾರಪಂಡ ತಂಡವನ್ನು ಪರಾಭವಗೊಳಿಸಿತು.
ತಂಡದ ಪರ ಬಲ್ಲಂಡ ನಿಶು ಪೂಣಚ್ಚ ಒಂದು ಗೋಲು ದಾಖಲಿಸಿದರು. ಮಾಪಣಮಡ ಮತ್ತು ಮೇಕತ್ತಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಪಣಮಡ ತಂಡವು 6-0 ಗೋಲಿನ ಅಂತರದಿಂದ ಮೇಕತ್ತಂಡ ತಂಡವನ್ನು ಪರಾಭವಗೊಳಿಸಿತು. ಮಾಪಣಮಡ ಬೋಪಣ್ಣ 4, ಬಿದ್ದಪ್ಪ 1, ಕವನ್ ಕಾರ್ಯಪ್ಪ 1 ಗೋಲು ದಾಖಲಿಸಿದರು. ಪಾಲೆಯಂಡ ಮತ್ತು ಮಲ್ಲಂಗಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮಲ್ಲಂಗಡ ತಂಡವು 3-1 ಗೋಲುಗಳಿಂದ ಜಯ ಗಳಿಸಿ ಪಾಲೆಯಡ ತಂಡವನ್ನು ಪರಾಭವಗೊಳಿಸಿತು. ಮಲ್ಲಂಗಡ ಆಕಾಶ್ 2, ಲಕ್ಷಿತ್ ಒಂದು ಗೋಲು ದಾಖಲಿಸಿದರೆ, ಪಾಲೆಯಂಡ ತಂಡದ ಪರ ಅಯ್ಯಪ್ಪ ಒಂದು ಗೋಲು ದಾಖಲಿಸಿದರು. ಮುಲ್ಲಂಡ ಮತ್ತು ಕೊಟ್ಟಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮುಲ್ಲಂಗಡ ತಂಡವು 3-1 ಗೋಲಿನ ಅಂತರದಿಂದ ಕೊಟ್ಟಂಗಡ ತಂಡವನ್ನು ಸೋಲಿಸಿತು. ಕೊಟ್ಟಂಗಡ ವಿಶು 1 ಗೋಲು ದಾಖಲಿಸಿದರೆ, ಮುಲ್ಲಂಡ ಗ್ಲೇನ್ 2, ಚಂಗಪ್ಪ 1 ಗೋಲು ದಾಖಲಿಸಿದರು. ಕಾಂಗಿರ ಮತ್ತು ಮಾಳೇಟಿರ (ಕುಕ್ಲೂರು) ತಂಡಗಳ ನಡುವಿನ ಪಂದ್ಯಾಟದಲ್ಲಿ ಮಾಳೇಟಿರ ತಂಡವು 1-0 ಗೋಲಿನ ಅಂತರದಿಂದ ಕಾಂಗಿರ ತಂಡವನ್ನು ಸೋಲಿಸಿತು. ಮಾಳೇಟಿರ ಮಧು ತಂಡದ ಪರವಾಗಿ 1 ಗೋಲು ದಾಖಲಿಸಿದರು.
ಚೊಟ್ಟೆಯಂಡಮಡ ಮತ್ತು ಕುಕ್ಕೆರ ತಂಡಗಳ ನಡುವಿನ ಪಂದ್ಯದಲ್ಲಿ ಕುಕ್ಕೆರ ತಂಡವು 2-1 ಗೋಲಿನ ಅಂತರದಲ್ಲಿ ಜಯಗಳಿಸಿತು. ಚೊಟ್ಟೆಯಂಡಮಡ ದೀಪಕ್ 1 ಗೋಲು ದಾಖಲಿಸಿದರೆ, ಕುಕ್ಕೆರ ಮಂದಣ್ಣ, ಸುಬ್ಬಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಕುಟ್ಟಂಡ(ಅಮ್ಮತ್ತಿ) ಮತ್ತು ತಿರುಟ್ಟೆರ ತಂಡಗಳ ನಡುವಿನ ಪಂದ್ಯಾಟದಲ್ಲಿ ಕುಟ್ಟಂಡ ತಂಡವು 2-0 ಗೋಲಿನಿಂದ ಜಯಗಳಿಸಿತು. ಕುಟ್ಟಂಡ ಪೂಣಚ್ಚ ತಂಡದ ಪರವಾಗಿ 2 ಗೋಲು ದಾಖಲಿಸಿದರು. ಚೋಕಿರ ಮತ್ತು ಮುದ್ದಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಚೋಕಿರ ತಂಡವು 4-0 ಗೋಲಿನಿಂದ ಮುದ್ದಂಡ ತಂಡವನ್ನು ಪರಾಭವಗೊಳಿಸಿತು. ಚೋಕಿರ ಅಕ್ಷಿತ್ 2, ದಿನು, ಕರಣ್ ತಲಾ ಒಂದೊಂದು ಗೋಲು ದಾಖಲಿಸಿದರು. ಅಮ್ಮೇಕಂಡ ಮತ್ತು ಚೇರಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಚೇರಂಡ ತಂಡವು ಅಮ್ಮೇಕಂಡ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ಚೇರಂಡ ರಕ್ಷಿತ್ ದೇವಯ್ಯ ಒಂದು ಗೋಲು ದಾಖಲಿಸಿದರು. ಅರಮಣಮಡ ಮತ್ತು ಮಾಚೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಅರಮಣಮಡ ತಂಡವು 1-0 ಗೋಲಿನಿಂದ ಮಾಚೇಟಿರ ತಂಡವನ್ನು ಪರಾಭವ ಗೊಳಿಸಿ ಮುಂದಿನ ಸುತ್ತು ತಲುಪಿತು. ಅರಮಣಮಡ ನವೀನ್ ತಂಡದ ಪರವಾಗಿ ಒಂದು ಗೋಲು ದಾಖಲಿಸಿದರು. ಚೆರುವಾಳಂಡ ಮತ್ತು ಸಣ್ಣುವಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಸಣ್ಣುವಂಡ ತಂಡವು 3-0 ಗೋಲಿನಿಂದ ಚೆರುವಾಳಂಡ ತಂಡವನ್ನು ಸೋಲಿಸಿತು. ಸಣ್ಣುವಂಡ ಲೋಕೇಶ್ ನಂಜಪ್ಪ, ತಿಮ್ಮಯ್ಯ, ಯತಿಕ್ ಅಯ್ಯಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಮಾಚಿಮಡ ಮತ್ತು ಮಲ್ಯಮಡ ತಂಡಗಳ ನಡುವಿನ ಪಂದ್ಯಾಟವು ಮೊದಲಿಗೆ 2-2 ಗೋಲಿನಿಂದ ಡ್ರಾಗೊಂಡಿತು. ನಂತರ ನಡೆದ ಟೈಬ್ರೇಕರ್ನಲ್ಲಿ 3-1 ಗೋಲಿನ ಅಂತರದಿಂದ ಮಾಚಿಮಡ ತಂಡವು ಮಲ್ಯಮಡ ತಂಡವನ್ನು ಸೋಲಿಸಿತು.
ಅಪ್ಪಚೆಟ್ಟೋಳಂಡ ಮತ್ತು ಮಾಂಗೆರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 2-1 ಗೋಲಿನ ಅಂತರ ದಿಂದ ಅಪ್ಪಚೆಟ್ಟೋಳಂಡ ತಂಡವು ಮಾಂಗೆರ ತಂಡವನ್ನು ಪರಾಭವ ಗೊಳಿಸಿತು. ಅಪ್ಪಚೆಟ್ಟೋಳಂಡ ರತನ್ ಮುತ್ತಣ್ಣ, ಹರ್ಷಿತ್ ಅಯ್ಯಪ್ಪ ಒಂದೊಂದು ಗೋಲು ದಾಖಲಿಸಿ ದರೆ, ಮಾಂಗೆರ ತಂಡದ ಪರವಾಗಿ ವಿನೋದ್ ಒಂದು ಗೋಲು ದಾಖಲಿಸಿದರು. ಮಂಡೇಟಿರ ಮತ್ತು ತಿರೋಡಿರ ತಂಡಗಳ ನಡುವಿನ ಪಂದ್ಯಾಟದಲ್ಲಿ 6-0 ಗೋಲಿನಿಂದ ಮಂಡೇಟಿರ ತಂಡವು ತಿರೋಡಿರ ತಂಡವನ್ನು ಪರಾಭವಗೊಳಿಸಿತು. ಮಂಡೇಟಿರ ನೆಹಲ್ ಬೆಳ್ಯಪ್ಪ 3, ಧನುಷ್ ಕಾವೇರಪ್ಪ 2, ನೆಹಲ್ ಸೋಮಯ್ಯ 1 ಗೋಲು ದಾಖಲಿಸಿ ದರು. ಅಚ್ಚಪ್ಪಂಡ ಮತ್ತು ಮುಕ್ಕಾಟಿರ (ಹರಿಹರ) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಅಚ್ಚಪ್ಪಂಡ ತಂಡವನ್ನು 2-0 ಗೋಲಿನ ಅಂತರದಿಂದ ಅಚ್ಚಪ್ಪಂಡ ತಂಡವನ್ನು ಪರಾಭವಗೊಳಿಸಿತು. ಮುಕ್ಕಾಟಿರ ಭುವನ್ ಭೀಮಯ್ಯ, ನಾಚಪ್ಪ ತಮ್ಮ ತಂಡದ ಪರವಾಗಿ ಒಂದೊಂದು ಗೋಲು ದಾಖಲಿಸಿ ದರು. ಅಜ್ಜೆಟ್ಟಿರ ಮತ್ತು ಚೋಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಜ್ಜೇಟಿರ ತಂಡವು 1-0 ಗೋಲಿನ ಅಂತರದಲ್ಲಿ ಚೋಕಂಡ ತಂಡವನ್ನು ಸೋಲಿಸಿತು. ತಂಡದ ಪರವಾಗಿ ಅಜ್ಜೇಟಿರ ನವೀನ್ ಒಂದು ಗೋಲು ದಾಖಲಿಸಿದರು. -ಪಿ.ವಿ.ಪ್ರಭಾಕರ್