ನಾಪೋಕ್ಲು, ಏ. 17: ಇಲ್ಲಿನ ಬಿದ್ದಾಟಂಡ ಕುಟುಂಬದ ನೇತೃತ್ವದಲ್ಲಿ ಇಂದಿನಿಂದ ಆರಂಭಗೊಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಮೊದಲನೇ ದಿನವೇ 8 ತಂಡಗಳು ಮುನ್ನಡೆ ಸಾಧಿಸಿವೆ.

ಮೊದಲನೇ ದಿನದ ಪಂದ್ಯಾಟದಲ್ಲಿ ಚೈಯ್ಯಂಡ, ಪುಳ್ಳೇಂಗಡ, ಕಬ್ಬಚ್ಚಿರ, ಮಲ್ಲೇಂಗಡ, ತಂಬುಕುತ್ತಿರ, ಮುಕ್ಕಾಟಿರ (ಬೋಂದ), ಕಲ್ಯಾಟಂಡ, ಮಂಡೇಡ, ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದೆ.

ಚೆಯ್ಯಂಡ ಮತ್ತು ಮಳವಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಚೆಯ್ಯಂಡ ತಂಡವು ಮಳವಂಡ ತಂಡವನ್ನು 2 ಗೋಲಿನಿಂದ ಸೋಲಿಸಿ ಮುನ್ನಡೆ ಪಡೆಯಿತು. ಚೆಯ್ಯಂಡ ರೋಶನ್ ಗಣಪತಿ ಮತ್ತು ಮಂಜು ತಿಮ್ಮಯ್ಯ ತಂಡದ ಪರ ಒಂದೊಂದು ಗೋಲು ದಾಖಲಿಸಿ ದರು. ಪುಳ್ಳೇಂಗಡ ಮತ್ತು ಮಚ್ಚಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಪುಳ್ಳೇಂಗಡ ತಂಡವು 2 ಗೋಲುಗಳಿಂದ ಮಚ್ಚಂಡ ತಂಡವನ್ನು ಪರಾಭವಗೊಳಿಸಿತು. ಪುಳ್ಳೇಂಗಡ ತಂಡದ ಪರವಾಗಿ ಮುತ್ತಣ್ಣ, ಪೆÇನ್ನಣ್ಣ ತಲಾ ಒಂದು ಗೋಲು ಭಾರಿಸಿದರು. ಪೆÇನ್ನೋಲತಂಡ ಮತ್ತು ಕಬ್ಬಚ್ಚಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕಬ್ಬಚ್ಚಿರ ತಂಡವು ಪೆÇನ್ನೋಲತಂಡ ತಂಡವನ್ನು ಟೈಬ್ರೇಕರ್ ಮೂಲಕ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಲ್ಲೇಂಗಡ ಮತ್ತು ಕನ್ನಿಕಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ 2-1 ಗೋಲುಗಳಿಗೆ ಮಲ್ಲೇಂಗಡ ತಂಡವು ಕನ್ನಿಕಂಡ ತಂಡವನ್ನು ಸೋಲಿಸಿತು. ಮಲ್ಲೇಂಗಡ ತಂಡದ ಪರವಾಗಿ ಶರಣ್, ಶರತ್ ಒಂದೊಂದು ಗೋಲು ಬಾರಿಸಿದರೆ, ಕನ್ನಿಕಂಡ ತಂಡದ ಪರ ಸುಚನ್ ಒಂದು ಗೋಲು ದಾಖಲಿಸಿದರು. ಪೆÇನ್ನಚ್ಚೆಟ್ಟಿರ ಮತ್ತು ತಂಬುಕುತ್ತಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ 2-1 ಗೋಲುಗಳ ಮೂಲಕ ತಂಬುಕುತ್ತಿರ ತಂಡವು ಪೆÇನ್ನಚ್ಚೆಟ್ಟಿರ ತಂಡವನ್ನು ಸೋಲಿಸಿತು. ತಂಬುಕುತ್ತಿರ ಭೀಮಯ್ಯ ಮತ್ತು ಸುಖೇಶ್ ಒಂದೊಂದು ಗೋಲು ದಾಖಲಿಸಿದರೆ, ಪೆÇನ್ನಚೆಟ್ಟಿರ ತಂಡದ ಪರವಾಗಿ ಬೋಪಣ್ಣ ಒಂದು ಗೋಲು ಬಾರಿಸಿದರು. ಮುಕ್ಕಾಟಿರ (ಬೋಂದ) ಮತ್ತು ಉದ್ದಪಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ 3 ಗೋಲುಗಳ ಮೂಲಕ ಮುಕ್ಕಾಟಿರ ತಂಡವು ಉದ್ದಪಂಡ ತಂಡವನ್ನು ಪರಾಭವ ಗೊಳಿಸಿತು. ಮುಕ್ಕಾಟಿರ ವಸಂತ್ 1 ಗೋಲು, ಆದಿತ್ಯ 2 ಗೋಲು ತಂಡದ ಪರವಾಗಿ ಗಳಿಸಿದರು. ಕಲ್ಯಾಟಂಡ ಮತ್ತು ನಂಬುಡುಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕಲ್ಯಾಟಂಡ ತಂಡವು ನಂಬುಡುಮಾಡ ತಂಡವನ್ನು 1 ಗೋಲಿನಿಂದ ಪರಾಭವ ಗೊಳಿಸಿತು. ಸವಿನ್ ಬೋಪಯ್ಯ ಒಂದು ಗೋಲು ದಾಖಲಿಸಿದರು.

ಪಂದ್ಯಾಟದ ತಾಂತ್ರಿಕ ನಿರ್ದೇಶಕರಾಗಿ ಕಾಟುಮಣಿಯಂಡ ಉಮೇಶ್ ಕರ್ತವ್ಯ ನಿರ್ವಹಿಸಿದರು.