ವೀರಾಜಪೇಟೆ, ಏ. 16: ಗ್ರಾಮೀಣ ಪ್ರದೇಶದಲ್ಲಿರುವ ಕಾವೇರಿ ವಿದ್ಯಾಸಂಸ್ಥೆಯು ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುತ್ತಿರುವಂತಹ ಸೌಲಭ್ಯಗಳು ಪ್ರಶಂಸÀನೀಯ ಎಂದು ಕೇಂದ್ರ ಸರ್ಕಾರದ ಅಂಗ ಸಂಸ್ಥೆ ಯಾದ ನ್ಯಾಕ್ ಮುಖ್ಯಸ್ಥ ಡಾ. ಸುಧೀರ್ ಗಾವನೇ ಹೇಳಿದರು.

ತಾ. 10 ಹಾಗೂ 11 ರಂದು ನ್ಯಾಕ್ ತಜ್ಞರ ತಂಡ ವೀರಾಜಪೇಟೆ ಕಾವೇರಿ ಕಾಲೇಜಿಗೆ ಭೇಟಿ ನೀಡಿ ಮೂಲ ಸೌಕರ್ಯಗಳು ಹಾಗೂ ಕಳೆದ ಐದು ವರ್ಷಗಳಲ್ಲಿ ವಿದ್ಯಾಸಂಸ್ಥೆಯಲ್ಲಿ ಆಗಿರುವಂತಹ ಸರ್ವತೋಮುಖ ಅಭಿವೃದ್ಧಿಗಳ ಕುರಿತು ಪರಾಮರ್ಶಿಸಿದರು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಗಳಿಗೆ ಅನೂಕೂಲವಾಗುವಂತಹ ಮೌಲ್ಯ ಆಧಾರಿತ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಪ್ರಾರಂಭಿಸ ಬೇಕೆಂದು ಸಲಹೆ ನೀಡಿದರು. ಇದರೊಂದಿಗೆ ವಿದ್ಯಾರ್ಥಿಗಳು ಕಾಲೇಜಿನಲ್ಲಿರುವಂತಹ ವಸತಿ ಗೃಹದ ಪ್ರಯೋಜನ ಪಡೆದುಕೊಳ್ಳ ಬೇಕೆಂದರು. ನ್ಯಾಕ್ ತಂಡದಲ್ಲಿ ಶಿಕ್ಷಣ ತಜ್ಞರಾದ ಪ್ರೊ. ಗೀತಾ, ಪ್ರೊ. ಜಝರ್ ಜಬರ್‍ದನ್ ಉಪಸ್ಥಿತರಿ ದ್ದರು. ಸಭೆಯಲ್ಲಿ ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಗಣಪತಿ, ಕಾರ್ಯದರ್ಶಿ ಕೆ.ಜಿ. ಉತ್ತಪ್ಪ, ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ.ಎಂ. ನಾಚಪ್ಪ, ಕಾಲೇಜಿನ ನ್ಯಾಕ್ ಸಮಿತಿಯ ಸಂಚಾಲಕ ಪ್ರೊ. ರಾಘವೇಂದ್ರ, ಅಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.