ಚೆಟ್ಟಳ್ಳಿ, ಏ. 14: ಕೊಡವರ ಸಂಸ್ಕøತಿ, ಆಚಾರ-ವಿಚಾರವನ್ನು ಉಳಿಸಿ ಬೆಳೆಸುವಲ್ಲಿ ಹಿಂದುಳಿರುವದು ವಿಷಾದನೀಯವೆಂದು ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಭಿಪ್ರಾಯಪಟ್ಟರು.

ಚೆಟ್ಟಳ್ಳಿಯಲ್ಲಿ ನಡೆದ ಎಡಮ್ಯಾರ್ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಆಧುನಿಕ ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ ಕೃಷಿ ಭೂಮಿ, ನೇಗಿಲು ನೊಗಗಳೆಲ್ಲ ಮರೆಯಾಗಿವೆ. ಆಚಾರ-ವಿಚಾರವೆಲ್ಲ ಅವರವರ ಘನತೆ,ಸ್ಥಾನಮಾನಕ್ಕೆ ತಕ್ಕಂತೆ ನಡೆಸಿಕೊಂಡು ಹೋಗುತಿರುವ ಪರಿಸ್ಥಿತಿ ಕಾಣ ಬರುತ್ತಿದೆ. ಎಲ್ಲಾ ರಾಜ್ಯ ಜಿಲ್ಲೆಗಳು ಅವರವರ ಸಂಸ್ಕøತಿಯನ್ನು ಆಚರಿಸುತ್ತಿರುವಾಗ ಕೊಡಗಿನಲ್ಲಿ ಮಾತ್ರ ಬದಲಾಗುತ್ತಿದೆ ಎಂದರು.

ಕೊಡವ ಮಕ್ಕಡ ಕೂಟ ಹಾಗೂ ಹೊದ್ದೂರಿನ ಚೌರೀರ ಕುಟುಂಬದ ಮುಂದ್ ಮನೆಯಲ್ಲಿ ಕೊಡವರ ಹೊಸವರ್ಷಾಚರಣೆಯ ಎಡಮ್ಯಾರ್ ಒಂದ್‍ನ್ನು ಆಚರಿಸಲಾಯಿತು. ಹಿರಿಯರಾದ ಚೌರೀರ ಉತ್ತಯ್ಯ ಮಾತನಾಡಿ ನಾನು ಎಂಬ ಅಹಂಭಾವವನ್ನು ಬಿಟ್ಟು ನಾವೆಂಬ ಭಾವನೆಯೊಂದಿದ್ದರೆ ಸಂಸ್ಕøತಿ ಉಳಿಯಲು ಸಾಧ್ಯ ಎಂದರು. ಕುಟುಂಬದ ಅಧ್ಯಕ್ಷ ಚೌರೀರ ಪೂವಯ್ಯ ಮಾತನಾಡಿ ಕಾಲಕ್ಕೆ ತಕ್ಕಂತೆ ಸಂಸ್ಕøತಿಯನ್ನು ಬದಲಾಯಿಸಿ ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ ಕೂಟವು ಕೊಡವ ಸಂಸ್ಕøತಿಯ ಉಳಿವಿಗಾಗಿ ಹಲವು ವರ್ಷಗಳಿಂದ ಕೊಡಗಿನ ನಾನಾ ಕಡೆ ಎಡಮ್ಯಾರ್ ಒಂದನ್ನು ಆಚರಿಸುತ್ತಿದೆ. ಎಲ್ಲಾ ಕುಟುಂಬಗಳು ಪ್ರತೀ ವರ್ಷ ಇಂತಹ ಆಚರಣೆಯನ್ನು ನಡೆಸಬೇಕಿದೆ. ಕೊಡವ ಮಕ್ಕಡ ಕೂಟ ಆಟ್ ಪಾಟ್ ನಡೆಸುವದರ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕøತಿಯನ್ನು ತಿಳಿಸುವಲ್ಲಿ ಶ್ರಮಿಸುತಿದೆ ಎಂದರು. ಅತಿಥಿಗಳಾಗಿ ಪೊಮ್ಮೊಕ್ಕಡ ಕೂಟದ ಅಧ್ಯಕ್ಷೆ ಚೌರೀರ ಕಾವೇರಮ್ಮಪೂಣಚ್ಚ ವೇದಿಕೆ ಯಲ್ಲಿದ್ದರು. ಚೌರೀರ ಎನ್.ಉದಯ ಎಡಮ್ಯಾರ್ ಒಂದ್ ದಿನದ ವಿಶೇಷತೆಯ ಬಗ್ಗೆ ವಿಚಾರ ಮಂಡಿಸಿದರು. ಈ

ಚೌರೀರ ಕಾವೇರಮ್ಮ ಪೂವಯ್ಯ ಪ್ರಾರ್ಥಿಸಿ, ಚೌರೀರ ಯಶೋಧ ಪೂಣಚ್ಚ ಸ್ವಾಗತಿಸಿ, ಚೌರಿರ ಉದಯ ನಿರೂಪಿಸಿ ವಂದಿಸಿದರು.