ಗುಡ್ಡೆಹೊಸೂರು/ಕುಶಾಲನಗರ, ಏ. 11: ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಬಿಲ್ಕಲೆಕ್ಟರ್ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ.
ಗುಡ್ಡೆಹೊಸೂರು ಗ್ರಾ.ಪಂ. ಅಧಿಕಾರಿ ವೇಣುಗೋಪಾಲ್ ಮತ್ತು ಬಿಲ್ ಕಲೆಕ್ಟರ್ ಶ್ರೀನಿವಾಸ್ ಅವರು ಭೂ ಪರಿವರ್ತನೆ 9 ಮತ್ತು 11 ಮಾಡಲು ಸಣ್ಣುವಂಡ ಸುಬ್ಬಯ್ಯ ಎಂಬವರಿಂದ 5000 ರೂ. ಹಣಕ್ಕೆ ಒತ್ತಾಯಿಸಿದ್ದರು. ಇಂದು ಕಚೇರಿಯಲ್ಲಿ 3000 ಹಣಪಡೆಯು ತ್ತಿದ್ದಾಗ ಎ.ಸಿ.ಬಿ., ಡಿವೈಎಸ್ಪಿ ಶಾಂತ ಮಲ್ಲಪ್ಪ, ಎಸ್ಐ ಗಂಗಾಧರ ಮತ್ತು ತಂಡ ಇವರನ್ನು ವಿಚಾರಣೆಗೆ ಒಳಪಡಿಸಿ ಬಂಧಿಸಿದೆ. ಧಾಳಿ ನಡೆದ ಸಂದÀರ್ಭ ಪಂಚಾಯಿತಿ ಅವ್ಯವಹಾರದ ವಿರುದ್ಧ ಗ್ರಾಮಸ್ಥರು ದಿಕ್ಕಾರ ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಬಹಳ ದಿನಗಳಿಂದ ಸಾರ್ವಜನಿಕರಿಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದರು ಎಂದು ಅಲ್ಲಿನ ನಿವಾಸಿ ಪುಲಿಯಂಡ ಲವನಂಜಪ್ಪ ಎಂಬವರು ದೂರಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಬಿ ಸಿಬ್ಬಂದಿಗಳಾದ ದಿನೇಶ್, ಲೋಹಿತ್, ಪ್ರವೀಣ್, ಅಶ್ವಿನ್ ಕುಮಾರ್ ಇತರರು ಪಾಲ್ಗೊಂಡಿದ್ದರು.