ಮಡಿಕೇರಿ, ಮಾ. 31: ಕೊಡಗು ಜಿಲ್ಲೆಯಲ್ಲಿ ಅಸಂಘಟಿತರಾಗಿರುವ ಆದಿ ದ್ರಾವಿಡ ಸಮೂಹವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ ಕಾರ್ಯ ನಿರ್ವಹಿಸುತ್ತಿದ್ದು, 2011 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಂಘ ನಿಷ್ಕ್ರಿಯವಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೆಲವರು ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, 2011 ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಇವರುಗಳ ನೇತೃತ್ವದ ಸಂಘ, ಆದಿ ದ್ರಾವಿಡ ಸಮುದಾಯಕ್ಕೆ ಪೂರಕವಾದ ಯಾವದೇ ಕೆಲಸ ಕಾರ್ಯಗಳನ್ನು ನಡೆಸಿಲ್ಲವೆಂದು ಆರೋಪಿಸಿದರು. ಪ್ರಸ್ತುತ ಸಂಘ ಸ್ಥಗಿತಗೊಂಡಿದ್ದರೂ ಯಾವದೇ ರಶೀದಿಯನ್ನು ನೀಡದೆ ಸಮಾಜ ಬಾಂಧವರಿಂದ 150 ರೂ. ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಸಂಘÀದ ಗೌರವಾಧ್ಯಕ್ಷ ಬಿ.ಬಿ. ಬಾಬು, ಪ್ರಧಾನ ಕಾರ್ಯದರ್ಶಿ ಕೆ. ಉಮೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎ. ಉಮೇಶ್ ಹಾಗೂ ಹೆಚ್.ಎಸ್. ವಿನು ಉಪಸ್ಥಿತರಿದ್ದರು.