ಮಡಿಕೇರಿ, ಮಾ. 27: ಕೊಡಗು ಗೌಡ ವಿದ್ಯಾಸಂಘದ ಆಡಳಿತ ಮಂಡಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ; ಏಳು ಮಂದಿ ನಿರ್ದೇಶಕರುಗಳಾಗಿ ತಡರಾತ್ರಿ ಫಲಿತಾಂಶ ಹೊರ ಬಿದ್ದಿದೆ.

ಸತತ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿರುವ ಹೊಸೂರು ರಮೇಶ್ ಜೋಯಪ್ಪ ತಂಡದಿಂದ ಪರಿಚನ ಸತೀಶ್, ಪೊಕ್ಕುಳಂಡ್ರ ಮನೋಜ್, ಹುದೇರಿ ಜಗದೀಶ್ ಉತ್ತಪ್ಪ ಇವರುಗಳು ಗೆಲುವು ಸಾಧಿಸಿದ್ದಾರೆ. ಪರಾಜಿತ ದಂಬೆಕೋಡಿ ಎಸ್. ಆನಂದ್ ಬಣದಿಂದ ಕೆದಂಬಾಡಿ ಕೀರ್ತಿ ಕುಮಾರ್ ಹಾಗೂ ದೇವಂಗೋಡಿ ಹರ್ಷ ವಿಜಯಿಗಳಾಗಿದ್ದಾರೆ. ಇನ್ನು ಮತ್ತೋರ್ವ ಅಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದ ಪರಾಜಿತ ಅಭ್ಯರ್ಥಿ ಪರಿವಾರ ಎ. ಅಪ್ಪಾಜಿ ಬಣದಿಂದ ಕುದುಪಜೆ ಬೋಜಪ್ಪ ಮುತ್ತಣ್ಣ ಗೆಲುವು ಸಾಧಿಸಿದ್ದು; ಮತ್ತೋರ್ವ ಪರಾಜಿತ ಅಭ್ಯರ್ಥಿ ತುಂತಜೆ ಗಣೇಶ್ ಬಳಗದಿಂದ ಪಾಣತ್ತಲೆ ಮಂದಪ್ಪ ಜಯಗಳಿಸಿದ್ದಾರೆ.