ನಾಪೋಕ್ಲು, ಮಾ. 27: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿನ ನಡುವಿನ ಆವರಣದಲ್ಲಿ ಇಂದು ಸಂಜೆ ಬೆಂಕಿ ಕಾಣಿಸಿಕೊಂಡು ಆತಂಕ ಎದುರಾಯಿತು. ಸಂಜೆ 4.30ರ ವೇಳೆಗೆ ಆವರಣದಲ್ಲಿ ಹೊಗೆ ಕಾಣಿಸಿಕೊಂಡಿದ್ದು ಸ್ಥಳೀಯರ ಸಹಕಾರದಿಂದ ಉರಿಯುತ್ತಿದ್ದ ಬೆಂಕಿಯನ್ನು ತಹಬದಿಗೆ ತರಲು ಪ್ರಯತ್ನಿಸಲಾಯಿತು. ಮಡಿಕೇರಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದರು. ಚಾಲಕ ತಂತ್ರಜ್ಞ ಮಹೇaಶ್ ಗೌಡ, ಸತೀಶ್‍ಕೆ.ಸಿ., ಚಾಲಕ ಸತೀಶ್, ಬೆಂಕಿ ಆರಿಸಲು ಶ್ರಮಿಸಿದರು.