ಮಡಿಕೇರಿ, ಮಾ. 23: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ. ಸಂಘದ ಅಧ್ಯಕ್ಷರಾಗಿ ಬಲ್ಯಂಡ ಕೆ. ಪೊನ್ನಪ್ಪ, ಉಪಾಧ್ಯಕ್ಷರಾಗಿ ಪುದಿಯೊಕ್ಕಡ ಗಣೇಶ್, ಕಾರ್ಯದರ್ಶಿಯಾಗಿ ಪಟ್ಟಡ ಪ್ರೇಮಾ ಕರುಂಬಯ್ಯ ಹಾಗೂ 13 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ನೂತನ ಸಂಘದ ಉದ್ಘಾಟನಾ ಸಮಾರಂಭ ತಾ. 22 ರಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಸಭಾಂಗಣದಲ್ಲಿ ನಡೆಯಿತು.
ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಉದ್ಘಾಟನೆ ನೆರವೇರಿಸಿದರು.
ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ವಿಜಯ್ ಕುಮಾರ್ ಹಾಗೂ ನಿರ್ದೇಶಕರು ಪಾಲ್ಗೊಂಡಿದ್ದರು.
ಸಂಘ ಪ್ರಸ್ತುತ 60 ಸದಸ್ಯರನ್ನು ಹೊಂದಿರುವದಾಗಿ ನೂತನ ಅಧ್ಯಕ್ಷ ಬಲ್ಯಂಡ ಪೊನ್ನಪ್ಪ ತಿಳಿಸಿದ್ದಾರೆ.