ಕುಶಾಲನಗರ, ಮಾ. 23: ಹಲವು ಬೇಡಿಕೆಗಳನ್ನು ಮುಂದಿಟ್ಟು ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿರುವ ರಾಜ್ಯ ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳನ್ನು ಸರ್ಕಾರ ಸರಕಾರ ತಕ್ಷಣ ಈಡೇರಿಸಬೇಕಿದೆ ಎಂದು ಆಗ್ರಹಿಸಿ ಕುಶಾಲನಗರ ಬಿಜೆಪಿ ಮಹಿಳಾ ಘಟಕದ ವತಿಯಿಂದ ಕುಶಾಲನಗರ ದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಗಣಪತಿ ದೇವಾಲಯದ ಬಳಿ ಸೇರಿದ ಮಹಿಳಾ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಹಲವು ಸವಲತ್ತುಗಳನ್ನು ನೀಡಿದ್ದರೂ, ರಾಜ್ಯದ ಕಾಂಗ್ರೆಸ್ ಸರ್ಕಾರ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಕೇಂದ್ರದ ಕಡೆಗೇ ಬೆರಳು ತೋರಿಸುತ್ತಿರುವದು ಸರಿಯಲ್ಲ. ಮಹಿಳೆಯರ ಸಮಸ್ಯೆ ಆಲಿಸುವ ಮಾನವೀಯತೆ ಮೆರೆಯಲು ಸರಕಾರ ವಿಫಲವಾಗಿದೆ ಎಂದು ಪ್ರತಿಭಟ ನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ರಥಬೀದಿ ಮೂಲಕ ನಾಡಕಚೇರಿ ತನಕ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಕಂದಾಯ ನಿರೀಕ್ಷಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ತಾ.ಪಂ. ಸದಸ್ಯೆ ಪುಷ್ಪಾ ಜನಾರ್ದನ್, ಗ್ರಾಮ ಪಂಚಾಯಿತಿ ಸÀದಸ್ಯರುಗಳಾದ ರುದ್ರಾಂಬಿಕ, ಡಾಟಿ, ಕವಿತಾ, ನಿಂಗಮ್ಮ, ಜಿಪಂ ಮಾಜಿ ಸದಸ್ಯ ಇಂದಿರಮ್ಮ, ಪ್ರಮುಖರಾದ ಸರಳಾ ರಾಮಣ್ಣ, ಕನಕ, ನಿರ್ಮಲ ಶಿವರಾಜ್, ಪದ್ಮಾ, ಪಾರ್ವತಿ, ಕಮಲಮ್ಮ, ರುದ್ರಾಂಬಿಕ, ನಿರ್ಮಲ ಮತ್ತಿತರರು ಇದ್ದರು.