ಮೂರ್ನಾಡು, ಮಾ. 22: ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದ್ದಂಡ ಕಾಲೋನಿ ಕುಟುಂಬಗಳಿಗೆ ಆಶ್ರಯ ಯೋಜನೆ ಯಡಿಯಲ್ಲಿ ಮನೆ ನಿರ್ಮಾಣಕ್ಕೆ ಹಕ್ಕುಪತ್ರ ವಿತರಿಸಲಾಯಿತು. ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತ ತಮ್ಮಯ್ಯ ಕಾಲೋನಿಯ 34 ಪರಿಶಿಷ್ಟ ಜಾತಿ-ಪಂಗಡ ಕುಟುಂಬಗಳ ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕೆ ಹಕ್ಕುಪತ್ರ ವಿತರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಬಲ್ಯಾಟಂಡ ಜಿ. ಕುಟ್ಟಯ್ಯ, ನಾಯಕಂಡ ಕುಂಞ್ಞಣ್ಣ, ಸಿಆರ್‍ಪಿ ಉಮ್ಮರ್, ರೋಹಿಣಿ, ಬಿದ್ದಂಡ ನಂಜಪ್ಪ, ಚೊಟ್ಟೆಯಂಡ ಸ್ವಾತಿ ಹಾಗೂ ಪಿಡಿಓ ರಂಗಸ್ವಾಮಿ ಹಾಜರಿದ್ದರು.